ಬಿ.ಸಿ. ಆಳ್ವಾ ನೆನಪಿನಂಗಳದಲ್ಲಿ ವಿನಯ ಹೆಗ್ಡೆಯವರ ಕ್ರೀಡಾ ಪ್ರೀತಿ
ನಿಟ್ಟೆ: ಭಾರತಕ್ಕೆ ಅಗತ್ಯವಾಗಿರುವ ಶಿಕ್ಷಣ ಸಾಮ್ರಾಜ್ಯವನ್ನೇ ಕಟ್ಟಿದ ನಿಟ್ಟೆ ವಿನಯ್ ಹೆಗ್ಡೆ ಅವರು ಇತ್ತೀಚಿಗೆ ನಮ್ಮಿಂದ ದೈಹಿಕವಾಗಿ ಇಲ್ಲವಾದರು. ಆದರೆ ಕನ್ನಡಿಗರು ಅದರಲ್ಲೂ ವಿಶೇಷವಾಗಿ ಕರಾವಳಿಯ ಶಿಕ್ಷಣ ಪ್ರೇಮಿಗಳು ಬದುಕಿನುದ್ದಕ್ಕೂ ನೆನಪಿಸುವಂಥ ಶಿಕ್ಷಣ ಸಂಸ್ಥೆಗಳನ್ನು ವಿನಯ್ ಹೆಗ್ಡೆಯವರು ಕಟ್ಟಿ ಬೆಳೆಸಿದ್ದಾರೆ. B.C. Alva Sports Complex at NITTE celebrating 10th year in 2026, BACA organizing one day cricket tournament for legends
ನಿಟ್ಟೆಯಂಥ ಪುಟ್ಟ ಊರು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ನಿಟ್ಟೆ ವಿನಯ್ ಹೆಗ್ಡೆ ಅವರು ಶಿಕ್ಷಣಕ್ಕೆ ಮಾತ್ರವಲ್ಲ ಕ್ರೀಡಾ ಕ್ಷೇತ್ರಕ್ಕೂ ಅಪಾರವಾದ ಕೊಡುಗೆಯನ್ನೂ ನೀಡಿದ್ದಾರೆ. ಕ್ರೀಡೆ ಇಲ್ಲದ ಶಿಕ್ಷಣವೆಂದರೆ ಅದು ಅಪೂರ್ಣ ಎಂದು ಅವರು ಯಾವಾಗಲೂ ಹೇಳುತ್ತಾರೆ. ಅವರ ಕ್ರೀಡಾ ಪ್ರೀತಿಗೆ ನಿಟ್ಟೆಯಲ್ಲಿರುವ ಕ್ರೀಡಾ ಸೌಲಭ್ಯ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಮಾಜಿ ಕ್ರಿಕೆಟಿಗ ಬೆಳ್ಳಿಪ್ಪಾಡಿ ಚಂದ್ರಹಾಸ ಆಳ್ವಾ ಅವರ ಹೆಸರಿನಲ್ಲಿ ನಿಟ್ಟೆಯಲ್ಲಿ ನಿರ್ಮಿಸಿದ ಬಿ. ಸಿ. ಆಳ್ವಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅವರ ಕ್ರೀಡಾ ಪ್ರೀತಿಗೆ ಸಾಕ್ಷಿಯಾಗಿ ನಿಂತಿದೆ. 2016 ರಲ್ಲಿ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಈಗ ಐಸಿಸಿ ಮ್ಯಾಚ್ ರೆಫರಿ ಆಗಿರುವ ಜಾವಗಲ್ ಶ್ರೀನಾಥ್ ಅವರು ಉದ್ಘಾಟನೆ ಮಾಡಿದ ಈ ಕ್ರೀಡಾ ಸಂಕೀರ್ಣಕ್ಕೆ ಈಗ ದಶಮಾನದ ಸಂಭ್ರಮ. ಇಷ್ಟು ವರ್ಷ ಅಲ್ಲಿ ಯಾವುದೇ ಕ್ರೀಡಾಕೂಟ ನಡೆದರೂ ಡಾ. ವಿನಯ್ ಹೆಗ್ಡೆ ಅವರು ಹಾಜರಿದ್ದು, ಕ್ರೀಡೆಯ ಬಗ್ಗೆ ಸ್ಫೂರ್ತಿಯ ಮಾತಗಳನ್ನಾಡುತ್ತಿದ್ದರು. ಆದರೆ ಈಗ ಅವರ ಅನುಪಸ್ಥಿತಿಯಲ್ಲಿ ನಾವು ಅವರು ಹಾಕಿ ಕೊಟ್ಟ ಹೆಜ್ಜೆಯ ಮೇಲೆ ಸಾಗಬೇಕಾಗಿದೆ.

ಬಿ.ಸಿ. ಆಳ್ವಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಜನವರಿ 23 ರ ಶುಕ್ರವಾರದಂದು ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ, (BACA), ಕೆ. ಆರ್ ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (UDCA) ಇವರ ಸಂಯುಕ್ತ ಆಶ್ರಯದಲ್ಲಿ 5ನೇ ವರ್ಷದ ನಿಟ್ಟೆ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ನಿಟ್ಟೆ ವಿನಯ್ ಹೆಗ್ಡೆ ಅವರ ಮಗ, ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್ ವಿಶಾಲ್ ಹೆಗ್ಡೆ ಅವರು ಟೂರ್ನಿಗೆ ಚಾಲನೆ ನೀಡುವರು. ನಿಟ್ಟೆ ಕ್ಯಾಂಪಸ್ನ ನಿರ್ವಹಣೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ ಯೋಗೇಶ್ ಹೆಗ್ಡೆ ಅವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಎನ್ಎಂಎಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್ ಚಿಪ್ಲೂಣ್ಕರ್ ಪಾಲ್ಗೊಳ್ಳುವರು. ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಿತಿನ್ ಜೆ ಶೆಟ್ಟಿ ಅವರು ಮತ್ತು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಖಚಾಂಜಿ ಡಾ. ಬಾಲಕೃಷ್ಣ ಮಡೋಡಿ ಅವರು ಪಾಲ್ಗೊಳ್ಳುವರು.
ಬಿ. ಸಿ. ಆಳ್ವಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿರುವ ಸೌಲಭ್ಯಗಳು:
400 ಮೀಟರ್ಗಳ ಪ್ರಮಾಣಿತ ಅಥ್ಲೆಟಿಕ್ ಟರ್ಫ್ ಟ್ರ್ಯಾಕ್ ಮತ್ತು ಎಲ್ಲಾ ರೀತಿಯ ಥ್ರೋಗಳು ಮತ್ತು ಜಂಪ್ಗಳಿಗೆ ಸೌಲಭ್ಯಗಳು ಮತ್ತು ಫಿಟ್ನೆಸ್ ಕೇಂದ್ರದೊಂದಿಗೆ ಪೆವಿಲಿಯನ್, ಒಂದು ಕ್ರಿಕೆಟ್ ಮೈದಾನ ಮತ್ತು ಅಭ್ಯಾಸಕ್ಕಾಗಿ 3 ಸಿಮೆಂಟ್ ಮತ್ತು ಜೇಡಿಮಣ್ಣಿನ ಕ್ರಿಕೆಟ್ ಪಿಚ್ಗಳು, ಒಂದು ಹಾಕಿ ಮೈದಾನ, ಮೂರು ವಾಲಿ ಬಾಲ್ ಮತ್ತು ಥ್ರೋಬಾಲ್ ಕೋರ್ಟ್ಗಳು, ಒಂದು ಹ್ಯಾಂಡ್ ಬಾಲ್ ಕೋರ್ಟ್, ಎರಡು ಬಾಸ್ಕೆಟ್ ಬಾಲ್ ಕೋರ್ಟ್ ಗಳು, ಫುಟ್ಬಾಲ್ ಮೈದಾನ, ಕಬಡ್ಡಿ ಕೋರ್ಟ್, ಖೋ ಖೋ ಕೋರ್ಟ್, ನೆಟ್ ಬಾಲ್ ಕೋರ್ಟ್ ಇತ್ಯಾದಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳಿಗೆ.

ಈ ಕ್ರೀಡಾ ಕಾಂಪ್ಲೆಕ್ಸ್ 12 ಎಕರೆ ಎಕರೆ ಪ್ರದೇಶದಲ್ಲಿದ್ದು, ಒಟ್ಟು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

