ಕುಟುಂಬದ ಮೇಲೆ ದಾಳಿ, ಇಂಗ್ಲೆಂಡ್ ತೊರೆದ ಜೇಮ್ಸ್ ವಿನ್ಸ್
ಲಂಡನ್: 2019ರ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ಆಟಗಾರ ಜೇಮ್ಸ್ ವಿನ್ಸ್ ಅವರು ಭದ್ರತೆಯ ಕಾರಣ ಇಂಗ್ಲೆಂಡ್ ತೊರೆದು ದುಬೈನಲ್ಲಿ ನೆಲೆಸಲು ತೀರ್ಮಾನಿಸಿದ್ದಾರೆ. Attack on family England cricketer resigns and flees to Dubai.
ಕಳೆದ ವರ್ಷ ಅವರ ಮನೆ ಹಾಗೂ ಕಾರಿನ ಮೇಲೆ ದುಷ್ಕರ್ಮಿಗಳು ಹಲವು ಬಾರಿ ದಾಳಿ ಮಾಡಿದ್ದು ಇದರಿಂದ ತಮ್ಮ ಕುಟುಂಬ ಆತಂಕದಲ್ಲಿ ದಿನ ಕಳೆಯುತ್ತಿದೆ ಎಂದು ಹೇಳಿರುವುದಾಗಿ ಮಿರರ್ ಆನ್‌ಲೈನ್ ವರದಿ ಮಾಡಿದೆ. ಜೇಮ್ಸ್ ವಿನ್ಸ್ ಕಳೆದ 10 ವರ್ಷಗಳಿಂದ ಹ್ಯಾಂಪ್‌ಶೈರ್ ತಂಡದ ನಾಯಕರಾಗಿದ್ದು ಈಗ ಆ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ರಾಬಿನ್ ಉತ್ತಪ್ಪ ಅವರು ಕೂಡ ಭಾರತವನ್ನು ತೊರೆದು ಈಗ ದುಬೈನಲ್ಲಿ ನೆಲೆಸಿದ್ದಾರೆ.