Thursday, December 12, 2024

ಜ್ಯೋತಿಷಿಗಳಿಗೂ-ಪುರೋಹಿತರಿಗೂ ಕ್ರಿಕೆಟ್ ಸಮರ!

ಸ್ಪೋರ್ಟ್ಸ್ ಮೇಲ್ ವರದಿ:

ಕ್ರಿಕೆಟ್ ಆಟ ಯಾವ ರೀತಿಯಲ್ಲಿ ಸಮಾಜದ ಮೇಲೆ ಪರಿಣಾಮ ಬೀರಿದೆ ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನ ಇದೆ. ಜಾತಕ ನೋಡಿ ಭವಿಷ್ಯ ಹೇಳುವ ಜ್ಯೋತಿಷಿಗಳು, ನಿತ್ಯ ಪೂಜೆಯಲ್ಲಿ ತೊಡಗಿಕೊಳ್ಳುವ ಪುರೋಹಿತರೆಲ್ಲ ಒಂದಾಗಿ ಕ್ರಿಕೆಟ್ ಟೂರ್ನಿ ಮಾಡಿದರೆ ಹೇಗಾಗಬಹುದು?. ಪಂದ್ಯ ಇಂಥವರೇ ಗೆಲ್ಲುತ್ತಾರೆಂದು ಜ್ಯೋತಿಷಿಗಳಿಗೆ ಗೊತ್ತಿರಬಹುದು(?), ಆದರೆ ಉತ್ತಮವಾಗಿ ಆಡಿದ ತಂಡ ಗೆಲ್ಲುತ್ತದೆ ಎಂಬುದಕ್ಕೆ ಪುರೋಹಿತರಿಂದ ಕೂಡಿದ ತಂಡ ಸಾಕ್ಷಿಯಾಯಿತು.

ಅತ್ಯಂತ ವಿಶೇಷ ಹಾಗೂ ವಿಶಿಷ್ಠ ಎನಿಸುವ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯೊಂದು ಮೈಸೂರಿನಲ್ಲೊಂದು ಕ್ರಿಕೆಟ್ ಟೂರ್ನಿ ನಡೆಯಿತು. ಶ್ರೀ ಮಾಯಾಕಾರ್ ಕಪ್‌ಗಾಗಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ೧೬ ತಂಡಗಳು ಸ್ಪರ್ಧಿಸಿದ್ದವು.


ಕ್ರಿಕೆಟ್ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಪುರೋಹಿತರು ಹಾಗೂ ಜ್ಯೋತಿಷಿಗಳ ನಡುವೆ ಪಂದ್ಯ ನಡೆಯಿತು. ಯಾವಾಗಲೂ ದೇವರ ಪೂಜೆ ಹಾಗೂ ಜ್ಯೋತಿಷ್ಯ ಹೇಳುವುದರಲ್ಲಿ ತೊಡಗಿಕೊಂಡಿದ್ದ ಸುಮಾರು ೧೬ ತಂಡಗಳು ಟ್ರೋಫಿಗಾಗಿ ಸೆಣಸಾಡಿದವು.

ರಾಜ್ಯದ ವಿವಿಧ ಭಾಗಗಳಿಂದ ತಂಡಗಳು ಆಗಮಿಸಿದ್ದವು. ಶ್ರೀ ಮಾಯಾಕಾರ ಗುರುಕುಲದ ಹಾಗೂ ವೇದಮಾತಾ ಗುರುಕುಲದ ಡಾ. ಶ್ರೀ ಮಂಜುನಾಥ್ ಆರಾಧ್ಯಾ, ಡಾ. ಶ್ರೀ ಮಧು ದೀಕ್ಷಿತ್ ಅವರ ಪರಿಶ್ರಮ ಹಾಗೂ ಇತರ ಸಂಘ ಸಂಸ್ಥೆಗಳ ನೆರವಿನಿಂದ ಈ ಟೂರ್ನಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಶ್ರೀ ವೇದಮಾತ ಗುರುಕುಲ ಸೆಮಿೈನಲ್ ಹಂತದವರೆಗೂ ತಲುಪಿ ವಿರಮಿಸಿತು. ಬೆಂಗಳೂರಿನ ಸಮರ್ಥ ತಂಡ ಹಾಗೂ ಮೈಸೂರು ಪಾಠಶಾಲಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು. ಸಮರ್ಥ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಮೈಸೂರು ಪಾಠ ಶಾಲೆ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.


ಎರಡು ದಿನಗಳ ಕಾಲ ನಡೆದ ಈ ಕ್ರಿಕೆಟ್ ಟೂರ್ನಿ ಕ್ರೀಡಾಸಕ್ತರಲ್ಲಿ ಕುತೂಹಲವನ್ನುಂಟು ಮಾಡಿತು. ಕ್ರೀಡೆಗೆ ಅಂಥ ಶಕ್ತಿ ಇದೆ. ಅದು ಎಲ್ಲಾ ಎಲ್ಲೆಯನ್ನೂ ಮೀರಿದ್ದು ಎಂಬುದಕ್ಕೆ ಸಾಕ್ಷಿಯಾಯಿತು.

Related Articles