Friday, October 4, 2024

ಸುನಿಲ್‌ ಛೆಟ್ರಿ ಡಬಲ್‌ ಗೋಲ್‌: ಕಾಂಬೋಡಿಯಾಕ್ಕೆ ಸೋಲುಣಿಸಿದ ಭಾರತ

ಕೋಲ್ಕೊತಾ: ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಎಎಫ್‌ಸಿ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಾಯಕ ಸುನಿಲ್‌ ಛೆಟ್ರಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಕಾಂಬೋಡಿಯಾವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸಿದೆ.

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಛೆಟ್ರಿ 13 ಮತ್ತು 59ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಎರಡು ಗೋಲುಗಳ ನೆರವಿನಿಂದ ಭಾರತ ಮೂರು ಅಂಕಗಳನ್ನು ಗಳಿಸಿತು. ಚಾಲ್ತಿಯಲ್ಲಿರುವ ಫುಟ್ಬಾಲ್‌ ಆಟಗಾರರಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಛೆಟ್ರಿಗೆ ಮೂರನೇ ಸ್ಥಾನ ದಕ್ಕಿತು. 127 ಪಂದ್ಯಗಳಿಂದ 82 ಗೋಲು ಗಳಿಸಿದ ಛೆಟ್ರಿ ಪೋರ್ಚುಗೀಸ್‌ನ ಕ್ರಿಸ್ಟಿಯಾನೋ ರೊನಾಲ್ಡೋ (117) ಹಾಗೂ ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ (86) ಅವರ ಬಳಿಕ ಮೂರನೇ ಸ್ಥಾನ ತಲುಪಿದರು.

13ನೇ ನಿಮಿಷದಲ್ಲಿ ಕಾಂಬೋಡಿಯಾದ ಕಾಕ್‌ ಬೊರಿಸ್‌ ಭಾರತದ ಆಟಗಾರ ಬಾಕ್ಸ್‌ನ ಒಳಭಾಗದಲ್ಲಿ ಕ್ಲಿಸ್ಟನ್‌ ಕೊಲಾಕೋ ಅವರನ್ನು ನೆಲಕ್ಕುರುಳಿಸಿದರು. ಛೆಟ್ರಿ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಭಾರತಕ್ಕೆ 1-0 ಮುನ್ನಡೆ ಸಿಕ್ಕಿತು. ನಂತರ ದ್ವಿತಿಯಾರ್ಧದ 59ನೇ ನಿಮಿಷದಲ್ಲಿ ಬ್ರೆಂಡನ್‌ ಫೆರ್ನಾಂಡೀಸ್‌ ನೀಡಿದ ಪಾಸ್‌ ಮೂಲಕ ಛೆಟ್ರಿ ಬ್ರಾಸ್‌ ಪೂರ್ಣಗೊಳಿಸಿದರು. ಪ್ರಧಾನ ಕೋಚ್‌ ಸ್ಟಿಮ್ಯಾಕ್‌ ಅವರಿಗೆ ಭಾರತದ ನೆಲದಲ್ಲಿ ದಕ್ಕಿದ ಮೊದಲ ಜಯವಾಗಿದೆ.

Related Articles