ಚಂದರಗಿ ಕ್ರೀಡಾ ಶಾಲೆಯಲ್ಲಿ 2026-27ರ ಪ್ರವೇಶ ಆರಂಭ
ಚಂದರಗಿ: ದೇಶದ ಮೊದಲ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾರಿರುವ, 98 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿರುವ, 16 ಕ್ರೀಡೆಗಳಿಗೆ ತರಬೇತಿ ನೀಡುತ್ತಿರುವ, ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯ ಕೇಂದ್ರವಾಗಿರುವ, ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪದ್ಧತಿಹೊಂದಿರುವ, ಶಿಕ್ಷಣದ ಮೂಲಕ ಲಾಭ ಗಳಿಸುವ ಉದ್ದೇಶವಿಲ್ಲದ ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ನಿಯಮಿತ (SPOCO) ಮೂಲಕ ನಡೆಯಲ್ಪಡುತ್ತಿರುವ ಎಸ್.ಎಂ. ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಗೆ ಪ್ರವೇಶಾತಿ ಆರಂಭಗೊಂಡಿದೆ. Admission open for India’s first sports school S M Kaluti Sports School Chandaragi Belagavi.
ಮಾಜಿ ಕುಸ್ತಿ ಚಾಂಪಿಯನ್ ಎಸ್ ಎಂ ಕಲೂತಿ ಅವರು 44 ವರ್ಷಗಳ ಹಿಂದೆ ನಿರ್ಮಿಸಿದ ಈ ಶಾಲೆ 98 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿದೆ. ಶಿಕ್ಷಣದ ಜೊತೆಯಲ್ಲಿ 16 ಕ್ರೀಡೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಕೇಂದ್ರ ಸರಕಾರದ ಖೇಲೋ ಇಂಡಿಯಾ ತರಬೇತಿ ಕೇಂದ್ರ ಕೂಡ ಇಲ್ಲಿದೆ.

ಈ ಭವ್ಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ಕುಸ್ತಿಪಟು ಎಸ್. ಎಂ .ಕಲೂತಿ ಅವರೊಂದಿಗಿನ ಸಂದರ್ಶನ ನೋಡಿ
ಫೆಬ್ರವರಿ 1 , 2026 ರಂದು ಚಂದರಗಿ ವಸತಿ ಶಾಲೆ, ರಾಮದುರ್ಗಾ ತಾಲೂಕು, ಬೆಳಗಾವಿ ಜಿಲ್ಲೆ ಇಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ, 6 ರಿಂದ 10 ನೇ ತರಗತಿಯ ವರೆಗೆ ಪ್ರವೇಶಾತಿ ಇರುತ್ತದೆ.
ಹೆಚ್ಚಿನ ವಿವರಗಳಿಕೆ ಕರೆ ಮಾಡಿ: 8296183827 /7899328968
spoco.org

