Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಭಿನವ್ ಬಿಂದ್ರಾ ಗೆ ‘ದಿ ಬ್ಲೂ ಕ್ರಾಸ್’ ಪ್ರಶಸ್ತಿ

ದೆಹಲಿ:

ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಅನುಭವಿ ಶೂಟರ್ ಅಭಿನವ್ ಬಿಂದ್ರಾ ಅವರಿಗೆ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೇಡರೇಷನ್(ಐಎಸ್‌ಎಸ್‌ಎಫ್) ನೀಡುವ ಅತ್ಯುನ್ನತ ‘ದಿ ಬ್ಲೂ ಕ್ರಾಸ್ ಪ್ರಶಸ್ತಿ’ಗೆ ಭಾಜನರಾದರು.

ಈ ಮೂಲಕ ಪ್ರಶಸ್ತಿ ಪಡೆದ ಭಾರತದ ಮೊದಲ ಶೂಟರ್ ಎಂಬ ಕೀರ್ತಿಗೆ ಪಾತ್ರರಾದರು. ಈ ಗೌರವ ಪಡೆದಿರುವುದಕ್ಕೆೆ ಬಹಳ ಸಂತಸವಾಗಿದೆ. ಇದು ನನ್ನ ಜೀವಮಾನದ ಅತಿ ದೊಡ್ಡ ಕ್ಷಣವಾಗಿದೆ ಎಂದು ಬಿಂದ್ರಾ ಖುಷಿ ವ್ಯಕ್ತಪಡಿಸಿದರು.
ಅಭಿನವ್ ಬಿಜೀಂಗ್‌ನಲ್ಲಿ ನಡೆದ 2008ರ ಒಲಿಂಪಿಕ್‌ನಲ್ಲಿ ಚಿನ್ನಕ್ಕೆೆ ಕೊರಳೊಡ್ಡಿದ್ದರು. 2006ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವಲ್ಲಿ ಹಾಗೂ 2002, 2006, 2010 ಮತ್ತು 2014ರ ಕಾಮನ್‌ ವೆಲ್ತ್ ನಲ್ಲಿಯೂ ಚಿನ್ನ ಹಾಗೂ ಎರಡು ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಏಷ್ಯನ್ ಕ್ರೀಡಾ ಕೂಟದಲ್ಲಿ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

administrator