Wednesday, July 24, 2024

ರಾಜ್ಯ ಅಥ್ಲೆಟಿಕ್ಸ್‌: ಸ್ವರ್ಣ ಗೆದ್ದ ಅಭಿನ್‌, ಅಂಬಿಕಾ

ಉಡುಪಿಯ ಮಹಾತ್ಮಾ ಗಾಂಧೀ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಅಮೆಚೂರ್‌ ಅಥ್ಲೆಟಿಕ್ಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಉಡುಪಿಯ ಅಭಿನ್‌ ದೇವಾಡಿಗ ಹಾಗೂ ಮೈಸೂರಿನ ಅಂಬಿಕಾ ಚಿನ್ನದ ಪದಕ ಗೆದ್ದಿದ್ದಾರೆ. Abhin Devadiga from Udupi won the Gold Medal. ಪುರುಷರ 200 ಮೀ. ಓಟದಲ್ಲಿ ಅಭಿನ್‌ ದೇವಾಡಿಗ 21:23 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನಿಯಾದರು. ಬೆಂಗಳೂರು ನಗರ ವಿಭಾಗದ ವಿನಾಯಕ ಸೊಲ್ಲಣ್ಣನವರ್‌ ಹಾಗೂ ಉಡುಪಿಯ ಧನಿಶ್‌ ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಮೈಸೂರಿನ ಅಂಬಿಕಾ ವನಿತೆಯರ ಶಾಟ್‌ಪಟ್‌ನಲ್ಲಿ 14.70 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದರು.

ಪುರುಷರ 800 ಮೀ. ಓಟದಲ್ಲಿ ಬೆಂಗಳೂರು ನಗರದ ತುಷಾರ್‌ ವಾಸನ್‌ ಹಾಗೂ ಕಮಲ್ ಕಣ್ಣನ್‌ ಚಿನ್ನ ಮತ್ತು ಬೆಳ್ಳಿ ಗೆದ್ದರೆ, ಮೈಸೂರಿನ ಬೋಪಣ್ಣ ಕಲ್ಲಪ್ಪ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಪುರುಷರ 5000 ಮೀ. ಓಟದಲ್ಲಿ ಉತ್ತರ ಕನ್ನಡದ ಶಿವಾಜಿ ಎಸ್‌. ಚಿನ್ನ ಗೆದ್ದರು.  ಬೆಳಗಾವಿಯ ವೈಭವ್‌ ಹಾಗೂ ರೋಹಿತ್‌ ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಹೈಜಂಪ್‌ನಲ್ಲಿ ಶಿವಮೊಗ್ಗದ  ಸುದೀಪ್‌ 1.80 ಮೀ. ಎತ್ತರಕ್ಕೆ ಜಿಗಿದು ಚಿನ್ನ ಗೆದ್ದರು.  ದಕ್ಷಿಣ ಕನ್ನಡದ ಅನಿಲ್‌ ಕುಮಾರ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಲಾಂಗ್‌ಜಂಪ್‌ನಲ್ಲಿ ಬೆಂಗಳೂರು ಅರ್ಬನ್‌ನ ಸಿದ್ಧಾರ್ಥ ಮೋಹನ್‌   7.26 ಮೀ. ಉದ್ದಕ್ಕೆ ಜಿಗಿದು ಚಿನ್ನ ಗೆದ್ದರು. ಬೆಂಗಳೂರು ಅರ್ಬನ್‌ನ ಸುಹಾನ್‌ ಮತ್ತು ಪೃಥ್ವಿ ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. 200 ಮೀ ಓಟದಲ್ಲಿ ಜ್ಯೋತಿಕಾ, 800 ಮೀ. ಓಟದಲ್ಲಿ ವಿಜಯ ಕುಮಾರಿ ಜಿಕೆ, 5000 ಮೀ. ಓಟದಲ್ಲಿ ಕೆ.ಎಂ. ಲಕ್ಷ್ಮೀ, ಹೈಜಂಪ್‌ನಲ್ಲಿ ಸುಪ್ರಿಯಾ, ಲಾಂಗ್‌ಜಂಪ್‌ನಲ್ಲಿ ಶ್ರೀದೇವಿಕಾ, ಜಾವೆಲಿನ್‌ನಲ್ಲಿ ಕರೀಶ್ಮಾ ಸನಿಲ್‌, ಹ್ಯಾಮರ್‌ ಥ್ರೋನಲ್ಲಿ ಸ್ಪುಹಾ ನಾಯಕ್‌, 100 ಮೀ. ಹರ್ಡಲ್ಸ್‌ನಲ್ಲಿ ಅಂಜಲಿ ಸಿ. ಚಿನ್ನದ ಪದ ಗೆದ್ದರು.

Related Articles