Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಶ್ರೀಲಂಕಾಕ್ಕೆ ಬಂದರೆ ಶಾಕೀಬ್‌ಗೆ ಕಲ್ಲು ಹೊಡೆಯುತ್ತೇವೆ: ಮ್ಯಾಥ್ಯೂಸ್‌

ಕೊಲಂಬೋ: ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್‌ ಪಂದ್ಯ “ಟೈಮ್ಡ್‌ ಔಟ್‌” ವಿವಾದದಿಂದ ಕುಖ್ಯಾತಿ ಪಡೆಯಿತು. ಬಾಂಗ್ಲಾದೇಶ ತಂಡದ ನಾಯಕ ಶಾಕೀಬಲ್‌ ಅಲ್‌ ಹಸನ್‌ ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಈಗಾಗಲೇ ವಿಶ್ವಕಪ್‌ನಿಂದ ಕಾಲ್ಕಿತ್ತಿದ್ದಾರೆ. ಈ ನಡುವೆ ಲಂಕಾ ತಂಡದ ನಾಯಕ ಏಂಜಲೋ ಮ್ಯಾಥ್ಯೂಸ್‌ ಅವರ ಸಹೋದರ ಟ್ರೆವಿನ್‌ ಮ್ಯಾಥ್ಯೂಸ್‌ ಅವರು ಶಾಕೀಬ್‌ ಒಂದು ವೇಳೆ ಪಂದ್ಯ ಆಡಲು ಶ್ರೀಲಂಕಾಕ್ಕೆ ಬಂದರೆ ಲಂಕಾ ಅಭಿಮಾನಿಗಳು ಕಲ್ಲೆಸೆಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. Shakib Al Hasan will be beaten by stones if he tries to play in Sri Lanka.

146 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಟೈಮ್ಡ್‌ ಔಟ್‌ ಬಳಕೆಯಾಗಿರುವುದು. ಬಾಂಗ್ಲಾದೇಶದ ನಾಯಕ ಶಾಕೀಬ್‌ ಅಲ್‌ ಹಸನ್‌ಗೆ ಈ ವಿಷಯದಲ್ಲಿ ಕ್ರಿಕೆಟ್‌ ಜಗತ್ತೇ ತಿರುಗಿ ಬಿದ್ದಿದೆ. ತಂಡದ ಬೌಲಿಂಗ್‌ ಕೋಚ್‌ ದಕ್ಷಿಣ ಆಫ್ರಿಕಾದ ಅಲನ್‌ ಡೊನಾಲ್ಡ್‌ ಕೂಡ ಈ ಘಟನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೈ ಬೆರಳಿನ ಗಾಯದ ನೆಪ ಹೇಳಿದ ಶಾಕೀಬ್‌ ಕೊನೆಯ ಪಂದ್ಯವನ್ನಾಡದೆ ನೇರವಾಗಿ ಮನೆಯ ಹಾದಿ ಹಿಡಿದಿದ್ದಾರೆ.

“ಬಾಂಗ್ಲಾದೇಶದ ನಾಯಕನ ವರ್ತನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅವರಲ್ಲಿ ಕ್ರೀಡಾಸ್ಫೂರ್ತಿಯೇ ಇಲ್ಲ. ಕ್ರಿಕೆಟ್‌ ಜಂಟ್ಲ್‌ಮನ್‌ ಗೇಮ್‌. ಅವರ ಕ್ರೀಡಾ ಮನೋಭಾವದ ಬಗ್ಗೆ ಬೇಸರವಾಗಿದೆ. ಆತನ ವರ್ತನೆ ಬೇಸರವನ್ನುಂಟು ಮಾಡಿದೆ. ಅವರು ಅಮಾನವೀಯವಾಗಿ ವರ್ತಿಸಿದ್ದಾರೆ. ಆತನ ವರ್ತನೆಗೆ ಇನ್ನು ಮುಂದೆ ಲಂಕೆಗೆ ಕಾಲಿಡುವಂತಿಲ್ಲ. ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಅಥವಾ ಎಲ್‌ಪಿಎಲ್‌ ಆಡಲು ಬಂದರೆ ಇಲ್ಲಿನ ಕ್ರಿಕೆಟ್‌ ಅಭಿಮಾನಿಗಳು ಕಲ್ಲೆಸೆಯುವುದು ಖಚಿತ,” ಎಂದು ಟ್ರೆವಿನ್‌ ಹೇಳಿದ್ದಾರೆ.


administrator