Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಾಂಖೆಡೆಗೆ ಟಿಕೆಟ್‌ ಇಲ್ಲದೆ ಬಂದು, ಬಾಲ್‌ ಬಾಯ್‌ ಆಗಿ ಅಂಗಣಕ್ಕಿಳಿದು ವಿಶ್ವಕಪ್‌ ಗೆದ್ದ ಸಚಿನ್‌!!

ಯಶಸ್ಸು ಮಾಡಿದರೆ ಸಚಿನ್‌ ತೆಂಡೂಲ್ಕರ್‌ ರೀತಿಯಲ್ಲಿ ಮಾಡಬೇಕು. ಯಶಸ್ಸಿನ ಹಾದಿಯನ್ನು ಸ್ಮರಿಸಿದರೆ ಸಚಿನ್‌ ರೀತಿಯಲ್ಲೇ ಸ್ಮರಿಸಬೇಕು. The story of north stand at Wankhede stadium told by Sachin Tendulkar.

ನಿನ್ನೆ ವಾಂಖೆಡೆ ಕ್ರೀಡಾಂಗಣದ ನಾರ್ತ್‌ ಸ್ಟ್ಯಾಂಡ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಮೂರ್ತಿಯನ್ನು ಸ್ವತಃ ಸಚಿನ್‌ ತೆಂಡೂಲ್ಕರ್‌ ಅವರೇ ಅನಾವರಣ ಮಾಡಿದರು. ಇದೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯವೊಂದಕ್ಕೆ ಸಚಿನ್‌ 40 ವರ್ಷಗಳ ಹಿಂದೆ ಟಿಕೆಟ್‌ ಇಲ್ಲದೆಯೇ ನುಸುಳಿ ಹೋಗಿದ್ದರು. ಆಗ ಅವರಿಗೆ ಬರೇ ಹತ್ತು ವರ್ಷ.

25 ಕ್ರಿಕೆಟ್‌ ಅಭಿಮಾನಿಗಳು ಟಿಕೆಟ್‌ ಇದ್ದದ್ದು 24. ಹತ್ತು ವರ್ಷ ಪ್ರಾಯದ ಸಚಿನ್‌ ಗುಂಪಿನಲ್ಲೇ ನುಸುಳಿ ಹೋಗಿ ಪಂದ್ಯ ವೀಕ್ಷಿಸಿರುವುದನ್ನು ಸ್ವತಃ ಸಚಿನ್‌ ಅವರೇ ಹೇಳಿಕೊಂಡಿದ್ದಾರೆ. ವಾಂಖೆಡೆಯಲ್ಲಿ ನಾರ್ಥ್‌ ಸ್ಟ್ಯಾಂಡ್‌ ಅತ್ಯಂತ ವಿಶೇಷವಾದದ್ದು. ಸಚಿನ್‌ ಪಂದ್ಯ ವೀಕ್ಷಿಸಿದ ಕಾರಣ ಅದಕ್ಕೆ ಹೆಚ್ಚಿನ ಮಹತ್ವ. ಈಗಲೂ ಟ್ವಿಟರ್‌ (X) ನಲ್ಲಿ @NorthStandGang ಎಂಬ ಖಾತೆ ಇದೆ.

ವಾಂಖೆಡೆಗೆ ಸಚಿನ್‌ ಪ್ರವೇಶ ಮಾಡಿದ್ದು ಒಬ್ಬ ಕ್ರಿಕೆಟ್‌ ಪ್ರೇಕ್ಷಕನಾಗಿ, ನಂತರ 1987ರ ವಿಶ್ವಕಪ್‌ನಲ್ಲಿ ಬಾಲ್‌ಬಾಯ್‌ ಆಗಿ ಪ್ರವೇಶ, 2011ರಲ್ಲಿ ವಿಶ್ವಕಪ್‌ ಗೆದ್ದು ಸಂಭ್ರಮಿಸಿದ ಕ್ಷಣವೂ ವಾಂಖೆಡೆಯಲ್ಲಿಯೇ, ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ವಿದಾಯ ಹೇಳಿದ್ದೂ ವಾಂಖೆಡೆಯಲ್ಲಿಯೇ ಹೀಗೆ ಸಚಿನ್‌ ತಮ್ಮ ನೆನಪಿನ ಬುತ್ತಿಯನ್ನು ತೆರೆದಿಟ್ಟಿದ್ದಾರೆ. ಇದನ್ನು ವರ್ಣಿಸಲು ಪದಗಳೇ ಸಾಲದು ಎಂದು ಅವರು ಹೇಳಿದ್ದಾರೆ.

ಈ ಮೂರ್ತಿ ಬರೇ ನನ್ನದಲ್ಲ. ನಾನ್‌ ಸ್ಟ್ರೈಕರ್‌ನಲ್ಲಿದ್ದ ಪ್ರತಿಯೊಬ್ಬರಿಗೂ ಅರ್ಪಣೆ, ನನ್ನ ಕ್ರಿಕೆಟ್‌ ಹೀರೋಗಳು, ಪ್ರತಿಯೊಬ್ಬ ಸಹ ಆಟಗಾರನಿಗೂ. ನನ್ನ ಜೊತೆಗಿದ್ದ ಪ್ರತಿಯೊಬ್ಬರಿಗೂ ಅರ್ಪಣೆ. ಅವರಿಲ್ಲದೆ ನನ್ನ ಕ್ರಿಕೆಟ್‌ ಬದುಕು ಅಪೂರ್ಣ ಎಂದಿದ್ದಾರೆ ಸಚಿನ್‌.


administrator