Tuesday, April 30, 2024

ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದ ಅಥ್ಲಾನ್ ಫ್ಲೀಟ್

ಸ್ಪೋರ್ಟ್ಸ್ ಮೇಲ್ ವರದಿ

ಬುಧವಾರ ಮುಕ್ತಾಯಗೊಂಡ ರಾಜ್ಯ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಅಥ್ಲಾನ್ ಫ್ಲೀಟ್ ಒಲಿಂಪಸ್ ತಂಡ 11 ಪದಕಗಳನ್ನು ಗೆದ್ದು ವಿಶೇಷ ಸಾಧನೆ ಮಾಡಿದೆ.

ಕ್ಲಬ್‌ನ ಸ್ನೆಹಾ ಪಿಜೆ 100 ಹಾಗೂ 200 ಮೀ. ಓಟಗಳಲ್ಲಿ ಚಿನ್ನ ಗೆದ್ದು ಉತ್ತಮ ಅಥ್ಲೀಟ್ ಗೌರವಕ್ಕೆ ಪಾತ್ರರಾದರು. ಸ್ನೇಹಾ ಪಿ.ಜೆ. 11.16 ಸೆಕೆಂಡುಗಳಲ್ಲಿ ಗುರಿ ತಲುಪಿ  ಚಿನ್ನದೊಂದಿಗೆ ನೂತನ ದಾಖಲೆ ಬರೆದರು. 2005ರಲ್ಲಿ ಎಚ್‌ಎಂ ಜ್ಯೋತಿ  11.30 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. ಬೆಂಗಳೂರಿನ ಯುವ ತರಬೇತುದಾರ ಯತೀಶ್ ಕುಮಾರ್ ಅವರು ತರಬೇತಿ ನೀಡುತ್ತಿದ್ದಾರೆ. 100ಮೀ. ಓಟದಲ್ಲಿ ನವಮಿ  11.50 ನಿಮಿಷಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗಳಿಸಿದರು. ಗಣೇಶ್ ಪುರುಷರ 100 ಮೀ. ಓಟದಲ್ಲಿ  10.70 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.

 

ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಸ್ನೇಹಾ 200 ಮೀ. ಓಟದಲ್ಲೂ ಚಿನ್ನ ಗೆದ್ದು ಅದ್ಭುತ ಸಾಧನೆ ಮಾಡಿದರು. ಅರಣ್ಯ ಇಲಾಖೆಯ ಎಸಿಸಿಎಫ್ ಪುನೀತ್ ಪಾಠಕ್  ಅವರ ಕ್ರೀಡಾ ಪ್ರೋತ್ಸಾಹದಿಂದ ಸ್ನೇಹಾ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು. ಅರಣ್ಯ ಇಲಾಖೆಯಲ್ಲಿದ್ದರೂ ಅಭ್ಯಾಸಕ್ಕೆ ಕಾಲಾವಕಾಶ ಮಾಡಿಕೊಡುತ್ತಿರುವುದರಿಂದ ಪುನೀತ್ ಅವರು ಕ್ರೀಡೆಗೆ ಪ್ರೋತ್ಸಾಹ ನೀಡಿದ್ದಾರೆ. ಅದೇ ರೀತಿ ಕ್ಲಬ್‌ನ ಅಧ್ಯಕ್ಷ  ಜಿನೇಶ್ ಕುಮಾರ್ ಕೂಡ ಕ್ರೀಡಾಪಟುಗಳ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಥ್ಲೀಟ್‌ಗಳಿಗೆ ಡಯಟ್ ಪ್ರಾಯೋಜಕತ್ವ ನೀಡುತ್ತಿರುವ ಶ್ರೀಕಾಂತ್ ಹಿಮ್ಮತ್ ಸಿಂಗ್ಕಾ ಹಾಗೂ ಆಕಾಂಕ್ಷ ಸಿಂಗ್ಕಾ ಅವರ ಪಾತ್ರವೂ ಪ್ರಮುಖವಾದುದು.

 

 

 

ಪುರುಷರ 200 ಮೀ. ಓಟದಲ್ಲಿ  ಅಥ್ಲಾನ್ ಫ್ಲೀಟ್‌ನ ಅಶ್ವಿನ್ ಚಿನ್ನ ಗೆದ್ದಿರುತ್ತಾರೆ. 400 ಮೀ. ರಿಲೇಯಲ್ಲೂ ಚಿನ್ನ ಗೆದ್ದಿರುತ್ತಾರೆ.  ಗಣೇಶ್ 100 ಮೀ. ನಲ್ಲಿ ಕಂಚು ಹಾಗೂ 200 ಮೀ.ನಲ್ಲಿ ಬೆಳ್ಳಿ ಹಾಗೂ ರಿಲೇಯಲ್ಲಿ ಚಿನ್ನದ ಸಾಧನೆ ಮಾಡಿರುತ್ತಾರೆ.  ನವಮಿ 100 ಮೀ. ಕಂಚು,  ೪೦೦ ಮೀ. ರಿಲೇಯಲ್ಲಿ ಚಿನ್ನ, ಪ್ರಜ್ವಲ್ ಹಾಗೂ ಅಕ್ಷಯ್ 400 ಮೀ. ರಿಲೇಯಲ್ಲಿ ಚಿನ್ನದ ಸಾಧನೆ ಮಾಡಿರುತ್ತಾರೆ.

 

Related Articles