Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕುಂದಾಪುರದಲ್ಲಿ ರಾಷ್ಟ್ರೀಯ ವಾಲಿಬಾಲ್‌ ಚಾಂಪಿಯನ್‌ಷಿಪ್

ಕುಂದಾಪುರ: ಯಾವಾಗಲೂ ಟೆನಿಸ್‌ ಬಾಲ್‌ ಕ್ರಿಕೆಟ್ ಪಂದ್ಯಗಳಿಂದ ಕಂಗೊಳಿಸುತ್ತಿದ್ದ ಕುಂದಾಪುರದ ಗಾಂಧೀ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ವಾಲಿಬಾಲ್‌ ಸಂಭ್ರಮ. ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಮತ್ತು ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ, ಕರ್ನಾಟಕ ವಾಲಿಬಾಲ್‌ ಅಸೋಸಿಯೇಷನ್‌ ಹಾಗೂ ಭಾರತೀಯ ವಾಲಿಬಾಲ್‌ ಸಂಸ್ಥೆಯ ಸಹಯೋಗದೊಂದಿಗೆ ಅಖಿಲ ಭಾರತ ಮಟ್ಟದ ಪುರುಷರ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿ ‘KFK ಟ್ರೋಫಿ 2026’ ಅ. 25, 26 ಮತ್ತು 27ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ಈಗಾಗಲೇ ಚಾಲನೆ ಸಿಕ್ಕಿದೆ. For three days from today, Kundapura’s Gandhi Maidan, usually buzzing with tennis-ball cricket matches, will come alive with a national-level volleyball extravaganza

ಚಾಂಪಿಯನ್‌ಷಿಪ್‌ನ ರೂವಾರಿಗಳು: ರಾಜೇಶ್ ಕಾರಂತ್ — ಗೌರವಾಧ್ಯಕ್ಷರು, ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಷನ್.  ರಾಜೇಶ್ ಕಾವೇರಿ — ಅಧ್ಯಕ್ಷರು, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ , ರಮಾನಂದ ಕೆ. (ಬಾಲ) — ಅಧ್ಯಕ್ಷರು, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್.,  ಕೃಷ್ಣಪ್ರಸಾದ್ ಅಡ್ಯಂತಾಯ — ಅಧ್ಯಕ್ಷರು, ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಷನ್.

ಒಟ್ಟು 11.5 ಲಕ್ಷ ರೂ. ಬಹುಮಾನ: ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಸ್ಥಾನ ಗಳಿಸಿದ ತಂಡಕ್ಕೆ ₹4,00,000 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ. ದ್ವಿತೀಯ ಬಹುಮಾನ ₹3,00,000, ತೃತೀಯ ಬಹುಮಾನ ₹2,00,000 ಹಾಗೂ ನಾಲ್ಕನೇ ಬಹುಮಾನ ₹1,00,000 ನೀಡಲಾಗುವುದು.

ಬಿಡುವಿನ ವೇಳೆಯಲ್ಲಿ ಬ್ಯಾಡ್ಮಿಂಟನ್‌ ಆಡಬಯಸುತ್ತೀರಾ?

ವೈಯಕ್ತಿಕ ವಿಭಾಗದ ಪ್ರಶಸ್ತಿಗಳು:

  • ಅತ್ಯಮೂಲ್ಯ ಆಟಗಾರ (MVP) — ₹25,000 ಮತ್ತು ಟ್ರೋಫಿ
  • ಅತ್ಯುತ್ತಮ ಆಲ್‌ರೌಂಡರ್ — ₹25,000 ಮತ್ತು ಟ್ರೋಫಿ
  • ಅತ್ಯುತ್ತಮ ಅಟ್ಯಾಕರ್ — ₹25,000 ಮತ್ತು ಟ್ರೋಫಿ
  • ಅತ್ಯುತ್ತಮ ಪಾಸರ್ — ₹25,000 ಮತ್ತು ಟ್ರೋಫಿ
  • ಅತ್ಯುತ್ತಮ ಬ್ಲಾಕರ್ — ₹25,000 ಮತ್ತು ಟ್ರೋಫಿ
  • ಅತ್ಯುತ್ತಮ ಲಿಬೆರೊ — ₹25,000 ಮತ್ತು ಟ್ರೋಫಿ

ತಂಡಗಳು: ಇಂಡಿಯನ್‌ ಓವರ್ಸೀಸ್‌ ಬ್ಯಾಂಕ್‌, ಕೇರಳ ಸ್ಟೇಟ್‌ ಎಲೆಕ್ಟ್ರಿಸಿಟಿ ಬೋರ್ಡ್‌, ಕೇರಳ ಪೊಲೀಸ್‌, ಟೀಮ್‌ ಕರ್ನಾಟಕ, ಚೆನ್ನೈ ಸಿಕ್ಸ್‌, ಇಂಡಿಯನ್‌ ನೇವಿ.


administrator