Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ತಾಲೂಕು ಮಟ್ಟದ ಬ್ಯಾಡ್ಮಿಂಟನ್‌: ಶಮಂತ್‌, ಮಾನ್ಯ ಚಾಂಪಿಯನ್ಸ್‌

ಕುಂದಾಪುರ: ಇಲ್ಲಿನ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌, ಕೋಸ್ಟಾ ಸ್ಪೋರ್ಟ್ಸ್‌ ಫೌಂಡೇಷನ್‌ ಹಾಗೂ ಸುಜ್ಞಾನ ಶೈಕ್ಷಣಿಕ ಟ್ರಸ್ಟ್‌ ಇವುಗಳ ಸಂಯಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕು ಮಟ್ಟದ 17 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಶಮಂತ್‌ ಜೆ ಹಾಗೂ ಬಾಲಕಿಯರ ವಿಭಾಗದಲ್ಲಿ ಮಾನ್ಯ ಪೂಜಾರಿ ಅವರು ಚಾಂಪಿಯನ್‌ ಪಟ್ಟ ಗೆದ್ದಿದ್ದಾರೆ.

Shamanth J in the boys’ category and Manya Poojari in the girls’ category emerged as champions in the Under-17 Badminton Championship for boys and girls at the Kundapura and Byndoor taluk level.

The championship was jointly organised by Costa Badminton Centre, Costa Sports Foundation, and Sujnana Educational Trust.

ಬಾಲಕರ ಫೈನಲ್‌ ಪಂದ್ಯದಲ್ಲಿ ಶಮಂತ್‌ 18-16, 15-13 ಅಂತರದಲ್ಲಿ ಶಯನ್‌ ಶೆಟ್ಟಿ ವಿರುದ್ಧ ಜಯ ಗಳಿಸಿದ 5,000 ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಗೆದ್ದುಕೊಂಡರು. ರನ್ನರ್ಸ್‌ ಅಪ್‌ ಶಯನ್‌ ಶೆಟ್ಟಿ 3,000 ರೂ. ನಗದು ಬಹುಮಾನ ಹಾಗೂ ಆರ್ಕಷಕ ಟ್ರೋಫಿ ತಮ್ಮದಾಗಿಸಿಕೊಂಡರು. ಬಾಲಕರ ವಿಭಾಗದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗಂಗೊಳ್ಳಿಯ ಆರ್ಯನ್‌, ಕುಂದಾಪುರದ ಮೆಲ್ರಾನ್‌ ಕೋಥಾ ಅವರನ್ನು ಸೋಲಿಸಿ 1000 ರೂ. ನಗದು ಬಹುಮಾನ ಹಾಗೂ ಆರ್ಕಷಕ ಟ್ರೋಫಿ ಗೆದ್ದುಕೊಂಡರು.

ಬಾಲಕಿಯರ ಫೈನಲ್‌ ಪಂದ್ಯದಲ್ಲಿ ಮಾನ್ಯ ಪೂಜಾರಿ ಅನುಭವಿ ಆಟಗಾರ್ತಿ ಸಿರಿ ಎಸ್.‌ ಅವರನ್ನು 15-10, 15-13 ಅಂತರದಲ್ಲಿ ಗೆದ್ದು 5,000 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಗೆದ್ದುಕೊಂಡರು. ರನ್ನರ್ಸ್‌ ಅಪ್‌ ಸಿರಿ ಎಸ್‌. 3,000 ರೂ. ನಗದು ಹಾಗೂ ಅಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡರು. ವಿಲ್ಷಾ ಅಲ್ಮೇಡಾ ಮೂರನೇ ಸ್ಥಾನ ಗೆದ್ದು 1000 ರೂ, ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು.

ಉದ್ಯಮಿ ವಿಲ್ಸನ್‌ ಅಲ್ಮೆಡಾ ಅವರು ವಿಜೇತರಿಗೆ ಬಹುಮಾನ ವಿತರಿಸಿದರು, ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟೆರ್‌ನ ಪ್ರಥಮ್‌ ಶ್ರೀಯಾನ್‌ ಕಾರ್ಯಕ್ರಮ ನಿರೂಪಿಸಿದರು.


administrator