Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕುಂದಾಪ್ರ ಮ್ಯಾರಥಾನ್‌: ಹ್ವಾಯ್‌, ಒಂದ್‌ ಗಳ್ಗಿ ಓಡ್ವ ಬನಿಯೇ..

ಕುಂದಾಪುರ: ಭಂಡಾರ್ಕಾರ್ಸ್‌ ಕಾಲೇಜು ಕುಂದಾಪುರ, ಮಣಿಪಾಲ ಅಕಾಡೆಮಿ ಮಾರ್ಗದರ್ಶನದಲ್ಲಿ ಹೊಸ ವರುಷದ ಶುಭ ಅವಸರದಲ್ಲಿ, ಪ್ರಾಯೋಜಕರ ಸಹಭಾಗಿತ್ವದಲ್ಲಿ ಜನವರಿ 31, 2027ರಂದು ಮೊದಲ ಬಾರಿಗೆ ಕುಂದಾಪ್ರ ಮ್ಯಾರಥಾನ್‌ ನಡೆಯಲಿದೆ. Under the guidance of Bhandarkar’s College, Kundapur, Manipal Academy, on the auspicious occasion of the new year, the first Kundapura Marathon will be held on January 31, 2027, in collaboration with sponsors.

ಎಲ್ಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮುಕ್ತವಾಗಿ ಈ ಐಸಿಹಾಸಿಕ ಓಟದಲ್ಲಿ ಪಾಲ್ಗೊಳ್ಳಬಹುದು.  ಸಾವಿರಾರು ಸಂಖ್ಯೆಯಲ್ಲಿ ಓಟಗಾರರು ಪಾಲ್ಗೊಳ್ಳಲಿರುವ ಈ ಮ್ಯಾರಥಾನ್‌ಗೆ ಒಂದು ಉತ್ತಮ ಹೆಸರು, ಲಾಂಛನ ಹಾಗೂ ಆಕರ್ಷಕ ಸ್ಲೋಗನ್‌-ಘೋಷ ವಾಕ್ಯ ನೀಡಲು ಆಸಕ್ತರಿಗೆ ಕರೆ ನೀಡಲಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ವಿಶೇಷ ಬಹುಮಾನವನ್ನು ನೀಡಲಾಗುವುದು.

ಕೊನೆಯ ದಿನಾಂಕ 30-10-2026.  ವಿಳಾಸ: ಮ್ಯಾರಥಾನ್‌ ಸಮಿತಿ, ಭಂಡಾರ್ಕಾರ್ಸ್‌ ಕಾಲೇಜು, ಕುಂದಾಪುರ ಇಲ್ಲಿಗೆ ಕಳಹಿಸಬಹುದು. ಹೆಚ್ಚಿನ ವಿವರಗಳಿಗೆ- ಅರುಣ್‌ ಎ ಎಸ್‌ 9972404202 ಹಾಗೂ ಶರಣ್‌ – 8722742172 ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು.


administrator