Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದಿವ್ಯಾಂಗರ ಸ್ನೂಕರ್‌: ಬೆಂಗಳೂರಿನಲ್ಲಿ 2026 KDBSA ಓಪನ್

ಬೆಂಗಳೂರು: ದಿವ್ಯಾಂಗರ ಸ್ಪರ್ಧಾತ್ಮಕ ಸ್ನೂಕರ್‌ ಸ್ಪರ್ಧೆಗಳು ಅಕ್ಟೋಬರ್‌ನಲ್ಲಿ ಭಾರತಕ್ಕೆ ಮರಳಲಿದ್ದು, 2026 KDBSA ಓಪನ್‌ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯಲಿದೆ. Competitive disability snooker will return to India in October as the 2026 KDBSA Open is staged in Bengaluru.

ಕರ್ನಾಟಕ ಡಿಸೆಬಿಲಿಟಿ ಬಿಲಿಯರ್ಡ್ಸ್ ಅಂಡ್ ಸ್ನೂಕರ್ ಅಸೋಸಿಯೇಷನ್‌ (KDBSA), ವರ್ಲ್ಡ್ ಡಿಸೆಬಿಲಿಟಿ ಬಿಲಿಯರ್ಡ್ಸ್ ಅಂಡ್ ಸ್ನೂಕರ್‌ (WDBS) ಸಹಯೋಗದೊಂದಿಗೆ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಅಕ್ಟೋಬರ್‌ 16ರಿಂದ 18ರವರೆಗೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಕರ್ನಾಟಕ ಸರ್ಕಾರದ ಸೆಕ್ರೆಟರಿಯೇಟ್ ಕ್ಲಬ್‌ನಲ್ಲಿ ಪಂದ್ಯಾವಳಿ ನಡೆಯಲಿದೆ.

ದಿವ್ಯಾಂಗ ಸ್ನೂಕರ್ ಆಟಗಾರರಿಗೆ ಸ್ಪರ್ಧಾತ್ಮಕ ಅವಕಾಶ ಕಲ್ಪಿಸುವುದರ ಜೊತೆಗೆ, ಕರ್ನಾಟಕದ ಕ್ಯೂ ಸ್ಪೋರ್ಟ್ಸ್‌ನ ಇತಿಹಾಸ, ಪರಂಪರೆ ಮತ್ತು ಭವಿಷ್ಯವನ್ನು ರೂಪಿಸುವುದು ಈ ಚಾಂಪಿಯನ್‌ಷಿಪ್‌ನ ಉದ್ದೇಶವಾಗಿದೆ.

ಪಂದ್ಯಾವಳಿ ನಡೆಯಲಿರುವ ಸ್ಥಳದಲ್ಲಿ ಐತಿಹಾಸಿಕ ಬಿಲಿಯರ್ಡ್ಸ್ ಟೇಬಲ್‌ವೊಂದನ್ನು ಹಲವು ತಲೆಮಾರುಗಳಿಂದ ಸಂರಕ್ಷಿಸಿಕೊಂಡು ಬರಲಾಗಿದೆ. ಈ ಟೇಬಲ್‌ನಲ್ಲಿ ಹಲವು ದಶಕಗಳ ಕಾಲ ಮಾಜಿ ವಿಶ್ವ ಮಹಿಳಾ ಬಿಲಿಯರ್ಡ್ಸ್ ಚಾಂಪಿಯನ್ ರೇವಣ್ಣ ಉಮಾದೇವಿ ಅವರು ಆಡಿದ್ದರು ಎಂಬುದು ವಿಶೇಷ.

ಒಟ್ಟು 24 ಆಟಗಾರರು ನಾಲ್ಕು ಕ್ಲಾಸಿಫಿಕೇಷನ್‌ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಭಾರತದಲ್ಲಿ ದಿವ್ಯಾಂಗರ ಸ್ನೂಕರ್‌ ಕ್ರೀಡೆ ನಿರಂತರವಾಗಿ ಬೆಳೆಯುತ್ತಿದೆ. KDBSA 2024ರಲ್ಲಿ ಮೊದಲ ಬಾರಿಗೆ ಪಂದ್ಯಾವಳಿಯನ್ನು ಆಯೋಜಿಸಿತ್ತು. ಕಳೆದ ಎರಡು ವರ್ಷಗಳಲ್ಲಿ ಅನಂತ್ ಮೆಹ್ತಾ, ಶಯಾನ್ ಶೆಟ್ಟಿ ಮತ್ತು ಪ್ರವೀಣ್‌ಕುಮಾರ್ ರಾಮ್‌ಕುಮಾರ್, ಮುರಳಿರಾಜ್‌ ಮೊದಲಾದವರು ಜಾಗತಿಕ ಮಟ್ಟದಲ್ಲಿ ಮಿಂಚಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಇದು ಭಾರತದಲ್ಲಿ ಅಂಗವಿಕಲರ ಸ್ನೂಕರ್ ಕ್ರೀಡೆಯ ಬೆಳವಣಿಗೆಗೆ ದೊರೆತಿರುವ ಮಹತ್ವದ ಉತ್ತೇಜನವಾಗಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ 2026 KDBSA ಓಪನ್‌ ಮತ್ತಷ್ಟು ಪ್ರತಿಭೆಗಳಿಗೆ ಸ್ಪರ್ಧಾತ್ಮಕ ವೇದಿಕೆಯನ್ನು ಒದಗಿಸಲಿದೆ.


administrator