ಕಾಲು ಕಳೆದುಕೊಂಡ ಯೋಧ ಸೋಮನ್ ರಾಣಾ ಚಿನ್ನ ಗೆದ್ದ!
ಗ್ಲಾಸ್ಗೋ: ಭಾರತದ ಸೇನೆಯಲ್ಲಿ ಹವಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸೋಮನ್ ರಾಣಾ ಉತ್ತಮ ಬಾಕ್ಸರ್. ಗೋರ್ಕಾ ರೈಫಲ್ಸ್ನ ಯೋಧ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪದಕ ವಿಜೇತ ವಿಜೇಂದರ್ ಸಿಂಗ್ ಅವರೊಂದಿಗೆ ಅಬ್ಯಾಸ ನಡೆಸುತ್ತಿದ್ದ ಆದರೆ ನೆಲ ಬಾಂಬ್ ಸ್ಫೋಟ ಸೋಮನ್ ರಾಣಾ ಅವರನ್ನು ಬಾಕ್ಸಿಂಗ್ ತೊರೆಯುವಂತೆ ಮಾಡಿತು. ಆದರೆ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ದೇಶಕ್ಕೆ ಹೊಸ ಚಾಂಪಿಯನ್ನರನ್ನು ನೀಡಿತು. ಭಾರತ ಸೇನೆಯ ಹವಾಲ್ದಾರ್ ಸೋಮನ್ ರಾಣಾ ಅವರು ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಪ್ಯಾರಾಗೇಮ್ಸ್ನ ಶಾಟ್ಪಟ್ನಲ್ಲಿ ಗೆದ್ದಿರುವ ಚಿನ್ನದ ಹಿಂದೆ ನೋವಿನ ಕತೆಯಿದೆ, ಸ್ಫೂರ್ತಿಯ ಸೆಲೆ ಇದೆ. There are a story of pain and a saga of inspiration behind the gold medal won by Indian Army Havildar Soman Rana in the shot-put event at the Commonwealth Para Games being held in Glasgow.
ಸೋಮನ್ ರಾಣಾ ಅವರು ಚಿನ್ನ ಗೆಲ್ಲುವುದಕ್ಕೆ ಎರಡು ದಿನ ಮುಂಚಿತವಾಗಿ ಭಾರತದ ಪ್ಯಾರಾ ಅಥ್ಲೆಟಿಕ್ಸ್ ಕೋಚ್, ಕರ್ನಾಟಕದ ಸತ್ಯನಾರಾಯಣ ಅವರು ಗ್ಲಾಸ್ಗೋದಿಂದ ಕರೆ ಮಾಡಿ ಈ ಯೋಧನ ಬದುಕಿನ ಬಗ್ಗೆ ತಿಳಿಸಿದ್ದರು. ಅಲ್ಲದೆ ಚಿನ್ನ ಗೆಲ್ಲುವುದು ಖಚಿತ ಎಂದಿದ್ದರು. ಅದೇ ರೀತಿ ರಾಣಾ ಚಿನ್ನಕ್ಕೆ ಮುತ್ತಿಟ್ಟರು.

ಭಾರತ ಸೇನೆಯ ಹವಾಲ್ದಾರ್ ಸೋಮನ್ ರಾಣಾ, 13.40 ಮೀ. ದೂರಕ್ಕೆ ಗುಂಡನ್ನು ಎಸೆದು ಕಾಮನ್ವೆಲ್ತ್ ಪ್ಯಾರಾ ಕ್ರೀಡಾಕೂಟಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ಯಾರಾ ಕ್ರೀಡಾಪಟುಗಳ ಬದುಕಿನ ಹಿಂದೊಂದು ನೋವಿನ ಕತೆ ಇದ್ದೇ ಇರುತ್ತದೆ. ಸೋಮನ್ ಅವರದ್ದು ಇನ್ನೂ ದುರಂತ. 2006ರಲ್ಲಿ ಸೋಮನ್ ರಾಣಾ ಸೇನೆಯಲ್ಲಿ ಗೋರ್ಕಾ ರೈಫಲ್ವಿಭಾಗದಲ್ಲಿ ಸಿಪಾಯಿ ಆಗಿದ್ದರು. ಡಿಸೆಂಬರ್ 1 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ನೆಲಬಾಂಬ್ ಸ್ಫೋಟಗೊಂಡು ಸೋಮನ್ ರಾಣಾ ಅವರು ಕಾಲನ್ನೇ ಕಳೆದುಕೊಂಡರು. ಒಲಿಂಪಿಯನ್ ಆಗಬೇಕೆಂದಿದ್ದ ಅವರು ಎಲ್ಲವನ್ನೂ ತೊರೆದು ಹತ್ತು ವರ್ಷಗಳ ಕಾಲ ಆಡಳಿತ ವಿಭಾಗದಲ್ಲಿ ಕೆಲಸ ಮಾಡಿದರು.
ಪುಣೆಗೆ ಕೃತಕ ಕಾಲು ಜೋಡಣೆಗಾಗಿ ಬಂದಾಗ ಅಲ್ಲಿ ಸೇನೆಯ ಪ್ಯಾರಾಲಂಪಿಕ್ ವಿಭಾಗದ ಗೌರವ್ ದತ್ತ ಅವರು ರಾಣಾ ಅವರನ್ನು ಏಫ್57 ವಿಭಾಗಕ್ಕೆ ಸೇರಿಸಿದರು. ಒಲಿಂಪಿಯನ್ ಆಗಬೇಕೆಂದಿದ್ದ ಸೋಮನ್ ರಾಣಾ ಪ್ಯಾರಾಲಂಪಿಯನ್ ಆದರು. ಮಿಡ್ಲ್ವೇಟ್ ಬಾಕ್ಸರ್ ಶಾಟ್ಪಟ್ ಎಸೆಯತೊಡಗಿದರು. ಆದರೆ ಎಲ್ಲಿಯೂ ಕೊರಗಲಿಲ್ಲ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತ ದೇಶಕ್ಕೆ ಕೀರ್ತಿ ತಂದ ರಾಣಾ ಈ ಬಾರಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದರು,

