Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರೋಹಿತ್ ಶರ್ಮಾ ಮನೆಯಂಗಣದಲ್ಲಿ ವಿದಾಯದ ಪಂದ್ಯವನ್ನಾಡಲಿ

ಬೆಂಗಳೂರು:  ROKO ಎಂದು ಪ್ರಚಾರ ನೀಡಿದವರೇ ಈಗ ರುಖೋ ಎನ್ನುತ್ತಿದ್ದಾರೆ. ಆಟದಲ್ಲೂ ಅಷ್ಟೇ, ಬದುಕಿನಾಟದಲ್ಲೂ ಅಷೇ. ಶಕ್ತಿ ಇರುವ ತನಕ ದುಡಿಮೆ, ಶಕ್ತಿ ಗುಂದಿದಾಗ ಬೆಲೆ ಕಡಿಮೆ. ಏನೇ ಇರಲಿ ಭಾರತ ಕ್ರಿಕೆಟ್‌ಗೆ ರೋಹಿತ್‌ ಶರ್ಮಾ ಅದ್ಭುತ ಕೊಡುಗೆ ನೀಡಿದ್ದಾರೆ. ಈಗ ನಿವೃತ್ತಿಯ ಅಂಚಿನಲ್ಲಿರುವ ಅವರಿಗೆ 2027ರ ಏಕದಿನ ವಿಶ್ವಕಪ್‌ ಆಡುವ ನಿರೀಕ್ಷೆ ಇದ್ದಿತ್ತು, ಆದರೆ ಅವರ ಆಟ ಅದಕ್ಕೆ ಅವಕಾಶ ನೀಡುತ್ತಿಲ್ಲ. ಇಂಗ್ಲೆಂಡ್‌ ಪ್ರವಾಸದಲ್ಲಿರುವ ರೋಹಿತ್‌ ಶರ್ಮಾ ಅವರಿಗೆ ಲಾರ್ಡ್ಸ್‌ ಅಂಗಣದಲ್ಲಿ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಕ್ರಿಕೆಟ್‌ ಬದುಕಿನ ಕೊನೆಯ ಏಕದಿನ ಪಂದ್ಯವಾಗಲಿದೆ ಎಂದು ಬಿಸಿಸಿಐ ಸೂಚಿಸಿದೆ. ಆದರೆ ರೋಹಿತ್‌ ಶರ್ಮಾ ಭಾರತದಲ್ಲಿ ಗೌರವದೊಂದಿಗೆ ಕೊನೆಯ ಏಕದಿನ ಪಂದ್ಯವನ್ನಾಡವುದು ಸೂಕ್ತ. Rohit Sharma deserves the opportunity to play his final international match on home soil and receive a fitting farewell in front of his fans.

ಭಾರತ ಕ್ರಿಕೆಟ್‌ನ ಸುವರ್ಣ ಅಧ್ಯಾಯವೊಂದು ಅಂತ್ಯವಾಗುವ ಹಂತಕ್ಕೆ ಬಂದಿದೆಯೇ? ವರದಿ ಪ್ರಕಾರ, ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯವು ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ. ಇಂಗ್ಲೆಂಡ್ ಪ್ರವಾಸದ ಬಳಿಕ ನಡೆಯಲಿರುವ ಸರಣಿಗಳಿಗಾಗಿ ರಾಷ್ಟ್ರೀಯ ಆಯ್ಕೆ ಸಮಿತಿ ಅವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಕಳೆದ ಎಂಟು ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಕೇವಲ 241 ರನ್‌ಗಳನ್ನು ಗಳಿಸಿದ್ದು, ಅವರ ಸರಾಸರಿ 30.1 ಹಾಗೂ ಸ್ಟ್ರೈಕ್ ರೇಟ್ 88.6 ಆಗಿದೆ. ಈ ಅವಧಿಯಲ್ಲಿ ಅವರು ಕೇವಲ ಒಂದು ಅರ್ಧಶತಕ ದಾಖಲಿಸಿದ್ದಾರೆ.

39 ವರ್ಷದ ರೋಹಿತ್ ಶರ್ಮಾರನ್ನು ಮುಂದಿನ ವರ್ಷ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಪರಿಗಣಿಸುವ ಬಗ್ಗೆ ಆಯ್ಕೆಗಾರರಲ್ಲಿ ಹೆಚ್ಚಿನ ಆಸಕ್ತಿ ಇಲ್ಲ ಎನ್ನಲಾಗಿದೆ. ಎರಡು ಐಸಿಸಿ ಟ್ರೋಫಿಗಳನ್ನು ಭಾರತಕ್ಕೆ ಗೆದ್ದುಕೊಟ್ಟ ನಾಯಕನಾಗಿದ್ದರೂ, ತಂಡದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಆಟಗಾರರಿಗೆ ಅವಕಾಶ ನೀಡುವ ಚಿಂತನೆ ನಡೆಯುತ್ತಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಯಶಸ್ವಿ ಜೈಸ್ವಾಲ್ ಮೂರು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳನ್ನು ಬಾರಿಸಿದ್ದು, ಅವರಿಗೆ ದೀರ್ಘಾವಧಿಯ ಅವಕಾಶ ನೀಡಬೇಕೆಂಬುದು ಆಯ್ಕೆಗಾರರ ಅಭಿಪ್ರಾಯ. ವಿಶ್ವಕಪ್‌ಗೆ ಮೊದಲು ಸುಮಾರು 20 ಏಕದಿನ ಪಂದ್ಯಗಳಿದ್ದು, ಅವೆಲ್ಲದಲ್ಲೂ ಜೈಸ್ವಾಲ್‌ಗೆ ಅವಕಾಶ ಸಿಗಬೇಕು.”

 ರೋಹಿತ್‌ಗೆ ನಿವೃತ್ತಿ ಘೋಷಿಸಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆದರೆ ಸೆಪ್ಟೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಯಿಂದ ಭವಿಷ್ಯದ ತಂಡವನ್ನು ಕಟ್ಟುವತ್ತ ಆಯ್ಕೆಗಾರರು ಗಮನಹರಿಸಲು ಬಯಸಿದ್ದಾರೆ. ರೋಹಿತ್ ಅವರ ಮುಂದಿನ ನಿರ್ಧಾರ ಅವರ ಕೈಯಲ್ಲಿದೆ.” ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ಬಗ್ಗೆ  ನಿಲುವೇನು?

ಇನ್ನೊಂದೆಡೆ, ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಇಬ್ಬರೂ ವಿರಾಟ್ ಕೊಹ್ಲಿ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂಬ ಅಭಿಪ್ರಾಯದಲ್ಲಿದ್ದಾರೆ. ಅವರ ಇತ್ತೀಚಿನ ಫಾರ್ಮ್ ಹಾಗೂ ಫಿಟ್ನೆಸ್ ಅತ್ಯುತ್ತಮವಾಗಿರುವುದರಿಂದ ಕೊಹ್ಲಿ ಸ್ಥಾನಕ್ಕೆ ಯಾವುದೇ ಆತಂಕ ಇಲ್ಲ ಎನ್ನಲಾಗಿದೆ.

ರೋಹಿತ್ ಶರ್ಮಾರನ್ನು ಇಂಗ್ಲೆಂಡ್ ಸರಣಿಯ ಬಳಿಕವೂ ಮುಂದುವರಿಸಿದರೆ, ಮುಂದಿನ ಸಾಲಿನ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ಅಮೂಲ್ಯ ಪಂದ್ಯಗಳ ಅನುಭವ ಕಳೆದುಹೋಗುವ ಸಾಧ್ಯತೆ ಇದೆ ಎಂದು ಆಯ್ಕೆಗಾರರು ಭಾವಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿಯೂ ಆಯ್ಕೆ ಸಮಿತಿ ಮತ್ತು ರೋಹಿತ್ ಅವರ ನಡುವೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ.

ಮೂಲಗಳು ಏನೇ ಇರಲಿ ಸಚಿನ್‌ ತೆಂಡೂಲ್ಕರ್‌ ಅವರ ನಿವೃತ್ತಿಗೆ ಬಿಸಿಸಿಐ ಯಾವ ರೀತಿ ಯೋಜನೆ ಮಾಡಿದೆಯೋ, ಅಷ್ಟಲ್ಲದಿದರೂ ರೋಹಿತ್‌ ಶರ್ಮಾ ಕನಿಷ್ಠ ಭಾರತ ನೆಲದಲ್ಲಿ ಆಡಿ ವಿಯಾದ ಹೇಳಲು ಅವಕಾಶ ನೀಡಬೇಕು.


administrator