Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ದಾಖಲೆ ಬರೆದ ದಲಿತ ಕ್ರೀಡಾಪಟು ಲೋಕೇಶ್‌ಗೆ ಅನ್ಯಾಯ

ಬೆಂಗಳೂರು: ಲಾಂಗ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಅಮೆರಿಕದ ಎನ್‌ಸಿಎಎ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಐದನೇ ಅಥ್ಲೀಟ್‌ ಎಂಬ ಗೌರವಕ್ಕೆ ಪಾತ್ರರಾಗಿರುವ  ಬೆಂಗಳೂರಿನ ಲೋಕೇಶ್‌ ಸತ್ಯನಾಥನ್‌ ಮುಂದಿನ ತಿಂಗಳು ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದ ರಾಜ್ಯದ ಇಬ್ಬರು ಅಥ್ಲೀಟ್‌ಗಳಲ್ಲಿ ಒಬ್ಬರು. ಆದರೆ ತರಬೇತಿಗಾಗಿ ಸರಕಾರದ ಟಾರ್ಗೆಟ್‌ ಒಲಿಂಪಿಕ್ಸ್‌ ಯೋಜನೆಯಿಂದ ವಂಚಿತರಾಗಿರುವ ಲೋಕೇಶ್‌ ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. Why is Lokesh Sathyanathan, a Dalit athlete who has set a national record, considered ineligible for the Karnataka State Government’s Department of Sports ‘Target Olympics’ scheme?

ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆಯ್ಕೆಯಾದವರೇ ಟಾರ್ಗೆಟ್‌ ಒಲಿಂಪಿಕ್ಸ್‌ ಸ್ಕೀಮಿನಲ್ಲಿಲ್ಲ!

ಕರ್ನಾಟಕ ರಾಜ್ಯ ಸರಕಾರದ ಕ್ರೀಡಾ ಇಲಾಖೆ ಟಾರ್ಗೆಟ್‌ ಒಲಿಂಪಿಕ್ಸ್‌ ಎಂಬ ಉತ್ತಮ ಯೋಜನೆಯನ್ನು ಜಾರಿಗೆ ತಂದಿದ್ದು, ಆ ಪ್ರಕಾರ ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ತರಬೇತಿಗಾಗಿ ವರ್ಷಕ್ಕೆ 10 ಲಕ್ಷ ರೂ ನೆರವು ನೀಡಲಾಗುತ್ತಿದೆ. ವಿಶೇಷವೆಂದರೆ ಈ ಯೋಜನೆಯ ಫಲಾನುಭವಿಗಳಲ್ಲಿ ಯಾರೂ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅರ್ಹತೆ ಪಡೆದಿಲ್ಲ. ಲಾಂಗ್‌ಜಂಪ್‌ನಲ್ಲಿ ಬೆಂಗಳೂರಿನ ಲೋಕೇಶ್‌ ಹಾಗೂ 400 ಮೀ. ಹರ್ಡಲ್ಸ್‌ನಲ್ಲಿ ತುಮಕೂರಿನ ಕೊರಟಗೆರೆಯ ಯಶಸ್‌ ಆರಾಧ್ಯ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಆಯ್ಕೆಯಾಗಿರುವುದು ಇಬ್ಬರು ಮಾತ್ರ. ಇವರಿಗೇ ಯೋಜನೆ ಅನ್ವಯವಾಗುವುದಿಲ್ಲವೆಂದರೆ ಇನ್ನು ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಅಮೆರಿಕದಲ್ಲಿ ಕೆಲಸ ಮಾಡಿಕೊಂಡು ಪದವಿ ಓದುತ್ತಿರುವ ಲೋಕೇಶ್‌ ಕ್ರೀಡಾ ಸಾಧನೆಗಾಗಿ ಸಾಕಷ್ಟು ಕಷ್ಟಪಡುತ್ತಿದ್ದಾರೆ. ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತ ಓದು ಮತ್ತು  ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಪ್ರತಿಯೊಂದು ಕ್ರೀಡಾಕೂಟಗಳಲ್ಲೂ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಬೆಂಗಳೂರಿನ ಅಲ್‌ ಅಮೀನ್‌ ಕಾಲೇಜಿನ ಹಳೆವಿದ್ಯಾರ್ಥಿ ಲೋಕೇಶ್‌ 8.21 ಮೀ ಉದ್ದಕ್ಕೆ ಜಿಗಿದು ರಾಷ್ಟ್ರೀಯ ದಾಖಲೆ ಮಾಡಿರುತ್ತಾರೆ.

ಟ್ಯಾಕ್ಸಿ ಚಾಲಕನ ಮಗ ಲೋಕೇಶ್‌: ರಾಷ್ಟ್ರ ಮಟ್ಟದ ಲಾಂಗ್‌ಜಂಪ್‌ನಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಲೋಕೇಶ್‌ ಅವರ ತಂದೆ ಸತ್ಯನಾಥನ್‌, ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರು, ಲೋಕೇಶ್‌ ಅವರ ಸಹೋದರಿ ಮೊನಿಕಾ ಕೂಡ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕಕ್ಕೆ ಪದಕ ತಂದ ಓಟಗಾರ್ತಿ. ಸತ್ಯನಾಥನ್‌ ಒಂದು ಕಾಲದಲ್ಲಿ ರಾಜ್ಯ ಪೊಲೀಸ್‌ ಫುಟ್ಬಾಲ್‌ ತಂಡ (KSRP)ದ ಆಟಗಾರ. ಈಗಲೂ ವೆಟರನ್ಸ್‌ ಫುಟ್ಬಾಲ್‌ನಲ್ಲಿ ಆಡುತ್ತಿದ್ದಾರೆ. ಮಕ್ಕಳ ಕ್ರೀಡಾ ಸಾಧನೆಗಾಗಿ ಸಾಕಷ್ಟು ತ್ಯಾಗ ಮಾಡಿರುವ ಸತ್ಯನಾಥನ್‌ ಮಗನನ್ನು ಒಲಿಂಪಿಕ್ಸ್‌ಗೆ ಕಳುಹಿಸುವ ಗುರಿ ಹೊಂದಿದ್ದಾರೆ. ಆದರೆ ಆರ್ಥಿಕ ಸಮಸ್ಯೆ ಅಡ್ಡಿಯಾಗಿದೆ.

ಮುಖ್ಯಮಂತ್ರಿಗಳಿಗೆ ದೂರು:  ತಮ್ಮ ಮಗನಿಗಾದ ಅನ್ಯಾಯಗಳನ್ನು ಖಂಡಿಸಿ ರಾಜ್ಯದ ಮಾಜಿ ಫುಟ್ಬಾಲ್‌ ಆಟಗಾರ ಸತ್ಯನಾಥನ್‌ ಅವರು, ರಾಜ್ಯದ  ಮುಖ್ಯಮಂತ್ರಿಗಳು, ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಿನ್ಸಿಪಾಲ್‌ ಸೆಕ್ರೆಟರಿಗಳಿಗೆ ದೂರು ನೀಡಿದ್ದಾರೆ. ಸಾಮಾನ್ಯವಾಗಿ ಟಾರ್ಗೆಟ್‌ ಒಲಿಂಪಿಕ್ಸ್‌ ಯೋಜನೆಗೆ ಒಬ್ಬ ಕ್ರೀಡಾಪಟುವನ್ನು ಸೇರಿಸಿಕೊಳ್ಳಬೇಕಾದರೆ ಸಂಬಂಧಪಟ್ಟ ಕ್ರೀಡಾ ಸಂಸ್ಥೆ ಅವರನ್ನು ಶಿಫಾರಸು ಮಾಡಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ನ ಲಾಂಗ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿರುವ ಲೋಕೇಶ್‌ ಅವರ ಹೆಸರನ್ನು ಶಿಫಾರಸು ಮಾಡಿದೆ. ಆದರೆ ಅದಕ್ಕೆ ಸರಕಾರದಿಂದ ಯಾವುದೇ ಫುರಸ್ಕಾರ ಸಿಗಲಿಲ್ಲ.

ಅಮೆರಿಕದಲ್ಲಿ ಸಾಧನೆ ಮಾಡಿದ ಲೋಕೇಶ್‌: ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ, ಏಷ್ಯಾ ಹಂತದಲ್ಲಿ ಪದಕಗಳನ್ನು ಗೆದ್ದಿರುವ ಲೋಕೇಶ್‌ ಅಮೆರಿಕದ ಅರ್ಕಾನ್ಸಾಸ್‌ನ ಫಾಯೆಟ್‌ವಿಲ್‌ನಲ್ಲಿ ಮಾರ್ಚ್‌ನಲ್ಲಿ ನಡೆದ ಎನ್‌ಸಿಎಎ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಟಾರ್ಲೆಟನ್ ಸ್ಟೇಟ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ 26 ವರ್ಷದ ಲೋಕೇಶ್, 8.21 ಮೀಟರ್ ಜಿಗಿದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಈ ಸಾಧನೆಯೊಂದಿಗೆ ಅವರು ಭಾರತೀಯ ಒಳಾಂಗಣ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದು, ಭಾರತದ ಲಾಂಗ್ ಜಂಪ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಜೊತೆಗೆ, ಎನ್‌ಸಿಎಎ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನಾಲ್ಕನೇ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

“ಎನ್‌ಸಿಎಎ ಮಟ್ಟದ ಸ್ಪರ್ಧೆಗಳು ಒಲಿಂಪಿಕ್ಸ್ ಮಟ್ಟದ ಸ್ಪರ್ಧೆಗಳಿಗೆ ಸಮಾನ. ಇಲ್ಲಿ ಒಲಿಂಪಿಕ್ ಚಾಂಪಿಯನ್‌ಗಳು, ವಿಶ್ವ ದಾಖಲೆದಾರರು ಮತ್ತು ವಿಶ್ವ ಪದಕ ವಿಜೇತರ ವಿರುದ್ಧ ಸ್ಪರ್ಧಿಸಬೇಕಾಗುತ್ತದೆ. ಈ ಮಟ್ಟದಲ್ಲಿ ಚಿನ್ನ ಗೆಲ್ಲುವುದು ವಿಶೇಷ ಅನುಭವ,” ಎಂದು ಲೋಕೇಶ್ ಹೇಳಿದ್ದಾರೆ.

ಕಷ್ಟಗಳ ನಡುವೆ ಅರಳಿದ ಪ್ರತಿಭೆ: 2018ರಲ್ಲಿ ಜೂನಿಯರ್ ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಬಳಿಕ ಅಮೆರಿಕದ ವಿಶ್ವವಿದ್ಯಾಲಯಗಳಿಂದ ಅವರಿಗೆ ಅವಕಾಶಗಳು ಬರತೊಡಗಿದವು. ಆದರೆ ತರಬೇತಿಗೆ ತೆರಳುವ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಈ ಅಪಘಾತದ ಬಳಿಕ ಅವರು ಆತಂಕ, ನಿದ್ರಾಹೀನತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲಿದರು. 2019ರ ವಿಶ್ವ ಚಾಂಪಿಯನ್‌ಶಿಪ್ ಅರ್ಹತಾ ಸ್ಪರ್ಧೆಯಿಂದಲೂ ಹಿಂದೆ ಸರಿಯಬೇಕಾಯಿತು.

ಅನಂತರ 2021ರ ಕೋವಿಡ್ ಎರಡನೇ ಅಲೆಯ ವೇಳೆ ಅವರ ತಾಯಿ ಫೆಲ್ಸಿ ಮೇರಿ ನಿಧನರಾದದ್ದು ಲೋಕೇಶ್‌ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು. 2023ರಲ್ಲಿ ಅವರು ಮೊದಲ ಬಾರಿಗೆ 8 ಮೀಟರ್ ಗಡಿ ದಾಟಿದರು. ಆದರೆ ಒಲಿಂಪಿಕ್ ಆಯ್ಕೆ ಸ್ಪರ್ಧೆಗೆ ಸಿದ್ಧವಾಗುತ್ತಿದ್ದ ವೇಳೆ ಜಿಮ್‌ನಲ್ಲಿ ನಡೆದ ಅಪಘಾತದಲ್ಲಿ ಅವರ ಕಾಲಿನ ಬೆರಳು ಮುರಿದುಹೋಯಿತು.

ಶಸ್ತ್ರಚಿಕಿತ್ಸೆಯ ನಂತರ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ಕಾಲಿನೊಳಗೆ ಅಳವಡಿಸಿದ್ದ ಸ್ಕ್ರೂ ಹೊರಬಂದು ಸೋಂಕು ಉಂಟಾಯಿತು. ಪರಿಸ್ಥಿತಿ ಹದಗೆಟ್ಟ ಕಾರಣ ಅವರು ಭಾರತಕ್ಕೆ ಮರಳಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರು.

ಬಾಬಿ ಕಾರ್ಟರ್‌ ಅವರಿಂದ ಪ್ರೋತ್ಸಾಹ: ಟಾರ್ಲೆಟನ್ ವಿಶ್ವವಿದ್ಯಾಲಯದ ಕೋಚ್ ಬಾಬಿ ಕಾರ್ಟರ್ ಅವರನ್ನು ಭೇಟಿಯಾದ ಬಳಿಕ ಲೋಕೇಶ್ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಯಿತು. 2025ರಲ್ಲಿ ಅವರು ಎನ್‌ಸಿಎಎ ಇಂಡೋರ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು. 2026ರಲ್ಲಿ ನಡೆದ ಫೈನಲ್‌ನಲ್ಲಿ 8.21 ಮೀಟರ್ ಜಿಗಿದು ಚಿನ್ನದ ಪದಕ ಗೆದ್ದರು.

ಅಮೆರಿಕದಲ್ಲಿ ತರಬೇತಿ ಪಡೆದವರಿಗೆ ಸರಕಾರ ಈ ಹಿಂದೆ ನೆರವು ನೀಡಿದೆ: ಸತ್ಯನಾಥನ್‌

“ರಾಜ್ಯ ಸರಕಾರ ಕ್ರೀಡಾಪಟುಗಳ ಸಾಧನೆಯ ವಿಷಯದಲ್ಲಿ ತಾತಮ್ಯ ತೋರಬಾರದು. ಅಮೆರಿಕದಲ್ಲಿ ಅಭ್ಯಾಸ ಮಾಡುತ್ತಿರುವ ಪಾವನಾ ನಾಗರಾಜ್‌ ಅವರಿಗೆ ಟಾರ್ಗೆಟ್‌ ಒಲಿಂಪಿಕ್ಸ್‌ ಯೋಜನೆಗೆ ಸೇರಿಸಿಕೊಂಡಿದೆ. ಅದೇ ರೀತಿ ಲೋಕೇಶ್‌ಗೆ ಅವಕಾಶ ನೀಡಲಿ ಎಂಬುದು ನನ್ನ ಕೋರಿಕೆ. ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಇನ್ನಾದರೂ ನನ್ನ ಮಗನಿಗೆ ರಾಜ್ಯ ಸರಕಾರದ ಯೋಜನೆ ಲಭಿಸುತ್ತದೆ ಎಂಬ ನಂಬಿಕೆ ಇದೆ,” ಎಂದು ಸತ್ಯನಾಥನ್‌ ಹೇಳಿದ್ದಾರೆ.

ನೂತನ ಕ್ರೀಡಾ ಸಚಿವರು ಹಾಗೂ ಅಥ್ಲೆಟಿಕ್ಸ್‌ ಸಂಸ್ಥೆಯ ಅಧ್ಯಕ್ಷರ ಗಮನಕ್ಕೆ: ಯಾವಾಗಲೂ ದಲಿತರ ಬಗ್ಗೆ ಅಪಾರ ಕಾಳಜಿ ವಹಿಸುವ, ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಗೌರವ ಅಧ್ಯಕ್ಷರಾಗಿರುವ, ಕರ್ನಾಟಕ ರಾಜ್ಯ ಕ್ರೀಡಾ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಾ, ಪರಮೇಶ್ವರ್‌ ಅವರು ಈ ದಲಿತ ಕ್ರೀಡಾ ಸಾಧಕನಿಗೆ ನ್ಯಾಯ ದೊರಕಿಸುತ್ತಾರೆಂಬ ನಂಬಿಕೆ ಇದೆ.

ಲೋಖೇಶ್‌ಗೆ ಒಮ್ಮೆ ಅವಕಾಶ ನೀಡಬೇಕು, ಎಲ್ಲಿಆದರೂ ಆತ ತನ್ನ ಪ್ರದರ್ಶನದ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರೆ ಯೋಜನೆಯಿಂದ ಕೈ ಬಿಡುವುದು ಸೂಕ್ತ. ಆಯ್ಕೆ ಸಮಿತಿ ಈ ಬಗ್ಗೆ ಯೋಚಿಸುವುದು ಸೂಕ್ತ.

ಇಲ್ಲಿ ಲೋಕೇಶ್‌ ಅವರ ಸಾಧನೆಯ ಕೆಲವು ಪದಕಗಳ ಪಟ್ಟಿ ಇದೆ. ಇದು ರಾಜ್ಯ ಸರಕಾರದ ಟಾರ್ಗೆಟ್‌ ಒಲಿಂಪಿಕ್ಸ್‌ ಯೋಜನೆಗೆ ಯೋಗ್ಯವೋ ಅಯೋಗ್ಯವೋ ಎಂಬುದನ್ನು ಕ್ರೀಡಾಸಕ್ತರೇ ಹೇಳಲಿ.

International

World Atheletics Continental Tour Bronze (Bhubaneswar Odisha) 10 August 2025 Bronze Medal Performance 7.85 Meters

World University Games 2023, Chengdu China (Participation)

South Asian Games 2019 Kathmandu Nepal (Gold Medal) Performance 7.87 Meters

World U – 20 Junior Athletic Championship 2018 Tampere Finland (Participation)

Junior Asian Athletic Championship Gifu Japan 2018 – 7th Place

 Junior South Asian Athletic Championship Colombo Sri Lanka 2018 – Gold Medal (Performance 7.74 Meters New Meet Record)

 World School Athletic Championship 2016 Trabzon Turkey – Silver Medal (Performance 7.30 Meters

National

Indian Grand prix – 3 Ludhiana Punjab 2 August 2025 Guru nanak Statium nd Silver Medal Performance 7.68 Meters

64 National Interstate Senior Atheletics Championship JN Statium, Tamilnadu 20-24 August 2025 Silver Medal Performance 7.71 Meters

National Senior Federation Cup Athletic Championship 2021 – Patiala Punjab (Performance 7.60 Meters) – Bronze Medal

National Junior Athletic Championship 2019 – Mangalagiri Vijayawada (Perfo rmance 7. 79 Meters) Gold Medal New Meet Record

National Junior Federation Athletic Championship 2019 Tiruvannamalai (Performance 7.70 Meters) – Gold Medal New Meet Record.

 South Zone Junior Athletic Championship 2019 Udupi (Performance 7.82 Meters) – Gold Medal New Meet Record.

National Junior Federation Athletic Championship 2018 Coimbatore (Performance 7.43 Meters) – Silver Medal National Junior Athletic Championship 2017 Mangalagiri Vijayawada (Performance 7.43 Meters) – Gold Medal South Zone Junior Athletic Championship 2017 Thiruvananthapuram (Performance 7.37 Meters) – Gold Medal National School Games 2016 Kozhikode (Performance 6.90 Meters) – Gold Medal

National Junior Athletic Championship 2015 Ranchi Jharkhand (Performance 7.14 Meters) – Gold Medal

National Inter District Junior Athletic Championship 2015 Vizag (Performance 6.93 Meters) – Gold Medal New Meet Record

South Zone Junior Athletic Championship 2015 Kakinada (Performance 6.70 Meters) – Silver Medal 100 Meters Gold Medal

National School Games 2014 Ranchi Jharkhand (Performance 6.86 Meters) Gold Medal Long Jump, Triple Jump 14.63 Meters – Gold Medal, 100 Meters Semi Finalist

National Junior Athletic Championship 2013 Bangalore (Performance 6.14 Meters) – Bronze Medal

South Zone Junior Athletic Championship 2013 Hyderabad (Performance 6.70 Meters) – Bronze Medal ACH


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.