ಸೂರ್ಯನ ಅಬ್ಬರಕೆ ಸೂರ್ಯನೇ ಸಾಟಿ: ವೇಗದ ಫಿಫ್ಟಿ
ಡಂಬುಲ್ಲಾ: ಈ ಹಿಂದಿನ ಪಂದ್ಯದಲ್ಲಿ ಮಾಡಿದ ಪ್ರಮಾದಿಂದ ಪಾಠ ಕಲಿತು, ಬಿಸಿಸಿಐನ ಆದೇಶವನ್ನು ಪಾಲಿಸಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಶ್ರೀಲಂಕಾ ಎ ತಂಡದ ವಿರುದ್ಧದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿ ಲಿಸ್ಟ್ ಎ ನಲ್ಲಿ ದಾಖಲೆ ಬರೆದಿದ್ದಾರೆ. Six-hitting machine Sooryavanshi falls six runs short of fastest List A century.
12 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ ಸೂರ್ಯವಂಶಿ ಲಂಕೆಯ ಬೌಲರ್ಗಳ ಬೆವರು ಮತ್ತು ಕಣ್ಣೀರನ್ನು ಒಂದಾಗಿಸಿದ. ನಂತರ ಅಬ್ಬರದ ಆಟ ಮುಂದುವರಿಸಿದ ಸೂರ್ಯವಂಶಿ 94 ರನ್ ಸಿಡಿಸಿ ಶತಕದಿಂದ ವಂಚಿತರಾದರು. ಕೇವಲ 29 ಎಸೆತಗಳನ್ನೆದುರಿಸಿದ ಯುವ ಆಟಗಾರ 10 ಬೌಂಡರಿ ಹಾಗೂ 8 ಸಿಕ್ಸರ್ ಮೂಲಕ 94 ರನ್ ಗಳಿಸಿದರು. ಈ ಹಂತದಲ್ಲಿ ಭಾರತ 9 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತ್ತು.

