Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕ್ಯುರಸಾವ್‌: ಮೊದಲ ಗೋಲಿನ ಖುಷಿಯಲ್ಲಿ ಮರೆತ ಮೊದಲ ಸೋಲು

ಹಾಸ್ಟನ್‌: ಮಾಜಿ ಚಾಂಪಿಯನ್‌ ಬಲಿಷ್ಠ ಜರ್ಮನಿಯ ವಿರುದ್ಧ ಫಿಫಾ ವಿಶ್ವಕಪ್‌ನಲ್ಲಿ ಅಂಬೆಗಾಲಿಡುತ್ತಿರುವ ಪಟ್ಟ ರಾಷ್ಟ್ರ ಕ್ಯುರಸಾವ್‌ 7-1 ಗೋಲುಗಳ ಅಂತರದಲ್ಲಿ ಸೋಲುಭವಿಸಿದೆ. ಆದರೆ ಜಾಗತಿಕ ಮಟ್ಟದಲ್ಲಿ, ಅದರಲ್ಲೂ ಬಲಿಷ್ಠ ಜರ್ಮನಿಯ ವಿರುದ್ಧದ ಆ ಸೋಲಿನ ನಡುವೆ ಗಳಿಸಿದ ಮೊದಲ ವಿಶ್ವಕಪ್‌ ಗೋಲು ಕ್ಯುರಸಾವ್‌ ತಂಡಕ್ಕೆ ಹೆಚ್ಚು ಸಂಭ್ರಮವನ್ನುಂಟು ಮಾಡಿದೆ. The first World Cup goal scored amidst that defeat against a strong Germany brought much excitement to the Curacao team.

ಹಾಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ಇ ಗುಂಪಿನ ಪಂದ್ಯದಲ್ಲಿ ಜರ್ಮನಿ ವಿರುದ್ಧ ಕ್ಯುರಸಾವ್‌ ಸೋಲುಭವಿಸುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಎಲ್ಲರ ನಿರೀಕ್ಷೆಯಂತೆ ಕ್ಯುರಸಾವ್‌ ಸೋಲನುಭವಿಸಿದೆ. ಅದೂಖ 7-1 ಅಂತರದಲ್ಲಿ, ಆದರೆ 21ನೇ ನಿಮಿಷದಲ್ಲಿ ಕ್ಯುರಸಾವ್‌ನ ಲಿವಾನೋ ಕೊಮೆನೆನ್ಸಿಯಾ ಗಳಿಸಿದ ಗೋಲು ಪುಟ್ಟ ದೇಶದಲ್ಲಿ ಸಂಭ್ರಮವನ್ನುಂಟು ಮಾಡಿದೆ. ಜನಸಂಖ್ಯೆ ಹಾಗೂ ಬೌಗೋಳಿಕವಾಗಿ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ಚಿಕ್ಕ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಸಾರ್ವಭೌಮತ್ವ ಹೊಂದಿರದ ಮೊದಲ ದೇಶವಾಗಿ ಅರ್ಹತೆ ಪಡೆದ ಕ್ಯುರಸಾವ್‌, ಫಿಫಾ ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಗೋಲು ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.

ದಿನದ ಇತರ ಪಂದ್ಯಗಳಲ್ಲಿ ಸ್ವೀಡನ್‌ ತಂಡ ಟ್ಯುನಿಷೀಯಾ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ನೆದರ್ಲೆಂಡ್ಸ್‌ ಹಾಗೂ ಜಪಾನ್‌ ನಡುವಿನ ಪಂದ್ಯಗಳು 2-2 ಗೋಲುಗಳಿಂದ ಸಮಬಲಗೊಂಡವು. ಇಕ್ವೆಡಾರ್‌ ತಂಡವನ್ನು ಐವರಿ ಕೋಸ್ಟಾ 1-0 ಗೋಲಿನಿಂದ ಮಣಿಸಿತು.


administrator