ಮೊದಲ ಅಂಕ, ಕತಾರ್‌ಗೆ ವಿಶ್ವಕಪ್ ಗೆದ್ದಷ್ಟೇ ಸಂಭ್ರಮ!
ಸ್ಯಾನ್‌ಫ್ರಾನ್ಸಿಸ್ಕೊ: ಸ್ವಿಜರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 1-1 ಗೋಲಿನಿಂದ ಡ್ರಾ ಸಾಧಿಸಿದ ಕತಾರ್ ತಂಡ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅಂಕ ಗಳಿಸಿ ಕಪ್ ಗೆದ್ದಷ್ಟೇ ಸಂಭ್ರಮದಲ್ಲಿ ತೇಲಾಡಿತು. Qatar net late against Switzerland to secure historic first World Cup point.
ಏಷ್ಯನ್ ಕಪ್ ಚಾಂಪಿಯನ್ ಕತಾರ್ ಪಂದ್ಯ ಮುಗಿಯಲು 4 ನಿಮಿಷ ಬಾಕಿ ಇರುವಾಗ, ಬೌಅಲೆಮ್ ಖೌಖಿ ಹೆಡರ್ ಮೂಲಕ ಗಳಿಸಿ ಗೋಲಿನಿಂದ ಫಿಫಾ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿತು.
ಸ್ವಿಜರ್ಲೆಂಡ್ ಪರ ಬ್ರೀಲ್ ಎಂಬೊಲೊ13ನೇ ನಿಮಿಷದಲ್ಲಿ ಪೆನಾಲ್ಟಿ ಸ್ಪಾಟ್ ಮೂಲಕ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ನೀಡಿದ್ದರು. ಆದರೆ ಸ್ವಿಸ್ ಪಡೆ ಈ ಮುನ್ನಡೆಯನ್ನು ಕೊನೆ ತನಕ ಕಾಯ್ದುಕೊಂಡು ಜಯವಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.

