Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಆಯುಷ್‌ ಶೆಟ್ಟಿಗೆ 1 ಲಕ್ಷ ರೂ. ಬಹುಮಾನ ನೀಡಿ ಗೌರವಿಸಿದ ಕೆಬಿಎ

ಬೆಂಗಳೂರು: 60 ವರ್ಷಗಳ ಬಳಿಕ ಏಷ್ಯನ್‌ ಚಾಂಪಿಯನ್‌ಷಿಪ್‌ ಫೈನಲ್‌ ತಲುಪಿ ಬೆಳ್ಳಿ ಪದಕ ಗೆದ್ದ ಕರ್ನಾಟಕದ ಬ್ಯಾಡ್ಮಿಂಟನ್‌ ತಾರೆ ಕಾರ್ಕಳದ ಆಯುಷ್‌ ಶೆಟ್ಟಿ ಅವರಿಗೆ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ 1 ಲಕ್ಷ ರೂ. ಬಹುಮಾನ ನೀಡಿ ಗೌರವಿಸಿದೆ. Karnataka Badminton Association honoured Ayush Shetty with Rs 1 lakh for his silver medal winning performance at Asian Championship.

ಬುಧವಾರ ಬೆಂಗಳೂರಿಗೆ ಆಗಮಿಸಿದ ಆಯುಷ್‌ ಅವರನ್ನು ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರು ತಮ್ಮ ಆಡಳಿತ ಮಂಡಳಿಯ ಸದಸ್ಯರೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳಿ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.

ನಂತರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಬಿಎ ಅಧ್ಯಕ್ಷ ಕುಮಾರ ಬಂಗಾರಪ್ಪ ಅವರು ಚಾಂಪಿಯನ್‌ ಆಟಗಾರ ಆಯುಷ್‌ ಶೆಟ್ಟಿಗೆ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯ ವತಿಯಿಂದ ಸನ್ಮಾನಿಸಿ 1 ಲಕ್ಷ ರೂ. ನಗದು ಬಹುಮಾನ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೆಬಿಎ ಕಾರ್ಯದರ್ಶಿ ಮುರಳೀದರ್‌ ವಿ., ಸಂಚಾಲಕ ಡಾ. ನಿಧೀಶ್‌ ಹಿರೇಮಠ್‌, ಕಾರ್ಯಕಾರಿ ಸಮಿತಿ ಸದಸ್ಯ ಎನ್‌ ಸಿ ಸುಧೀರ್‌, ಹರೀಶ್‌ ಕುಮಾರ್‌ ಬಿ ಆರ್‌, ಖಜಾಂಚಿ ಜಿ ಎಂ. ನಿಶ್ಚಿತಾ, ಬಿಡಿಸಿ ಚೇರ್ಮನ್‌ ಗುರುಪ್ರಸಾದ್‌ ಡಿ, ಆಟಗಾರರು, ಸದಸ್ಯರು ಹಾಗೂ ಇತರ ಪ್ರಮುಖರು ಹಾಜರಿದ್ದರು.


administrator