Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Badminton: ವಿಲ್ಷಾ ವಿಲ್ಸನ್‌ಗೆ ಬಹುಮಾನ ವಿತರಣೆ

ಕುಂದಾಪುರ:  ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಬ್ಯಾಡ್ಮಿಂಟ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತೆ ವಿಲ್ಷಾ ವಿಲ್ಸನ್‌ ಅವರಿಗೆ ಮಂಗಳವಾರ ತರಬೇತಿಯ ವೇಳೆ ಬಹುಮಾನ ವಿತರಿಸಲಾಯಿತು. Wilsha Wilson, the bronze medalist in the Kundapur Taluk Level Badminton Championship, was presented with a prize during training on Tuesday.

ಜ್ವರದ ನಡುವೆಯೂ ಪಂದ್ಯ ಆಡಿದ್ದ ವಿಲ್ಷಾ ಬಹುಮಾನ ವಿತರಣಾ ಸಮಾರಂಭಕ್ಕೆ ಗೈರಾಗಿದ್ದರು. ಮಂಗಳವಾರ ಎಂದಿನಂತೆ ತರಬೇತಿಗೆ ಆಗಮಿಸಿದ್ದ ವಿಲ್ಷಾ ವಿಲ್ಸನ್‌ ಅವರಿಗೆ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ಮುಖ್ಯಸ್ಥರಲ್ಲಿ ಒಬ್ಬರಾದ ಅನಿಶಾ ಡಿಕೋಸ್ಟಾ ಅವರು ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ವಿಲ್ಷಾ ಅವರ ತಂದೆ ವಿಲ್ಸನ್‌ ಅಲ್ಮೆಡಾ ಹಾಗೂ ತಾಯಿ ಸುವರ್ಣ ಡಲ್ಮೆಡಾ ಹಾಗೂ ಕೋಸ್ಟಾ ಬ್ಯಾಡ್ಮಿಂಟರ್‌ ಸೆಂಟರ್‌ನ ಮ್ಯಾನೇಜರ್‌ ನಿಧೀಶ್‌ ಆಚಾರ್ಯ ಅವರು ಹಾಜರಿದ್ದರು. ವಿಲ್ಸನ್‌ ಅಲ್ಮೆಡಾ ಅವರು ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ಯಾವುದೇ ಕಾರ್ಯಕ್ರಮಗಳಿಗೂ ಅತ್ಯಂತ ಸ್ಫೂರ್ತಿಯಿಂದ ಪಾಲ್ಗೊಂಡು ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹ.

ವಿಲ್ಷಾ ವಿಲ್ಸನ್‌ ಅವರ ಕ್ರೀಡಾಸ್ಫೂರ್ತಿಗೆ ಕೋಸ್ಟಾ ಬ್ಯಾಡ್ಮಿಂಟನ್‌ ಸಂಸ್ಥೆಯು ಅಭಿನಂದನೆಯನ್ನು ಸಲ್ಲಿಸಿದೆ.


administrator