ಕುಂದಾಪುರ ತಾ. ಬ್ಯಾಡ್ಮಿಂಟನ್: ಜೋಷುವಾ, ಆರ್ಯನ್ ಚಾಂಪಿಯನ್ಸ್
ಕುಂದಾಪುರ: ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಕುಂದಾಪುರ, ಇದರ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ 13 ಹಾಗೂ 16 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಜೋಷುವಾ, ಆರ್ಯನ್, ಸಿರಿ ಹಾಗೂ ಬೃಂದಾ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. Joshua, Aryan, Siri and Brinda won the championship title in the Kundapur Taluk Level Badminton Championship held under the auspices of Costa Badminton Center, Kundapur.
ಕೋಸ್ಟಾ ಬ್ಯಾಡ್ಮಿಂಟ್ ಕೇಂದ್ರದ ನಿರ್ದೇಶಕರಾದ ಅಜಿತ್ ಡಿ ಕೋಸ್ಟಾ ಅವರು ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಗೆ ಚಾಲನೆ ನೀಡಿದರು. 13 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸಿರಿ ಪ್ರಥಮ ಸ್ಥಾನ ಗಳಿಸಿದರೆ ತ್ರಿಶಾ ಹಾಗೂ ಮಾನ್ಯ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

13 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಆರ್ಯನ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ರಿಶಬ್ ಹಾಗೂ ಗೃಂಥ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು.
16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ನ ಜೋಷುವಾ ಫೈನಲ್ ಪಂದ್ಯದಲ್ಲಿ ಸಿಬಿಸಿಯ ಮೆಲ್ರಾನ್ ಕೋಥಾ ಅವರನ್ನು ಸೋಲಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಶಯನ್ ಶೆಟ್ಟಿ ಮೂರನೇ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಬೃಂದಾ ಚಾಂಪಿಯನ್ ಪಟ್ಟ ಗೆದ್ದರೆ, ತನ್ವಿ ರನ್ನರ್ಸ್ ಅಪ್ ಹಾಗೂ ವಿಲ್ಷಾ ಮೂರನೇ ಸ್ಥಾನ ಗಳಿಸಿದರು.

ರಿಟಾ ಕ್ವಾಡ್ರಸ್, ಸಿಂಥಿಯಾ ಕ್ವಾಡ್ರಸ್, ಜೂಲಿಯಸ್ ಗೋಮ್ಸ್ ಹಾಗೂ ಕಾಸೆಸ್ ಡಿ ಕೋಸ್ಟಾ ಅವರು ಚಾಂಪಿಯನ್ನರಿಗೆ ಬಹುಮಾನ ವಿತರಿಸಿದರು. ನಿಧೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

