ಆಯ್ದ ಟೂರ್ನಿಗಳಿಗೆ ಸಿಂಥಟಿಕೆಟ್ ಶಟ್ಲ್ ಕಾಕ್: BWF
ಹೊಸದಿಲ್ಲಿ: VICTOR ಹಾಗೂ YONEX ಬ್ರಾಂಡ್‌ನ ಸಿಂಥಟಿಕ್ ಶಟ್ಲ್‌ಕಾಕ್‌ಗಳನ್ನು BWF ಗ್ರೇಡ್ 3 ಟೂರ್ನಮೆಂಟ್‌ಗಳು ಹಾಗೂ ಜೂನಿಯರ್ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಬಳಸಬಹುದು ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ತಿಳಿಸಿದೆ. BWF Approves Use of Synthetic Shuttlecocks at Selected Tournaments
ಸದ್ಯದ ಸ್ಪರ್ಧಾ ಗುಣಮಟ್ಟವನ್ನು ಗಮನದಲ್ಲಿರಿಸಿಕೊಂಡು ಈ ಎರಡು ಬ್ರಾಂಡ್‌ಗಳು (VICTOR and YONEX) ಉನ್ನತ ಮಟ್ಟದಲ್ಲಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂಬುದನ್ನು ಅಧ್ಯಯನ ಮಾಡಲಿದೆ.

ಪ್ರಾಯೋಗಿಕ ಹಂತದಲ್ಲಿ VICTOR ನ ಹೊಸ ಕಾರ್ಬನ್ ಸಾನಿಕ್ ಮ್ಯಾಕ್ಸ್ ಸಿಂಥಟಿಕ್ ಶಟ್ಲ್‌ಕಾಕ್ (SC‑NCS‑MAX‑12) ಹಾಗೂ YONEX CROSSWIND 70 ಸಿಂಥಟಿಕ್ ಶಟ್ಲ್‌ಕಾಕ್ ಬಳಸಲು ಪರಿಗಣಿಸಲಾಗಿದೆ. ಪ್ರಯೋಗದ ವೇಳೆ ಉತ್ಪಾದಕರ ಕಾರ್ಯಕ್ಷಮತೆಯ ಅಂಕಿ ಅಂಶ, ಆಟಗಾರರು, ತಾಂತ್ರಿಕ ಅಧಿಕಾರಿಗಳು ಹಾಗೂ ಟೂರ್ನಿಯ ಆಯೋಜಕರು ನೀಡುವ ಸಲಹೆ ಮತ್ತು ಮಾಹಿತಿಗಳನ್ನು ಪರಿಗಣಿಸಲಾಗುವುದು ಎಂದು BWF ತಿಳಿಸಿದೆ.

