ಜಿಂಕೆಯಂತೆ ಓಡಿ ಕರ್ನಾಟಕಕ್ಕೆ ಕೀರ್ತಿ ತಂದ ಪಾವಗಡದ ರಿತುಶ್ರೀ
ಜಗದಲ್ಪುರ: ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಮಿಂಚಿ ಕರ್ನಾಟಕಕ್ಕೆ ಕೀರ್ತಿ ತಂದಿರುವ ಮದಕರಿ ಸಮುದಾಯದ ಓಟಗಾರ್ತಿ ಪಾವಗಡದ ರಿತುಶ್ರೀ ಇಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ 400ಮೀ ಓಟಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಕರ್ನಾಟಕ ಕ್ರೀಡಾಕೂಟಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. Ritushree from Pavagada brings glory to Karnataka by winning gold medal in 400m race at Khelo India Tribal Games
ಕರ್ನಾಟಕ 19 ಚಿನ್ನ, 7 ಬೆಳ್ಳಿ ಹಾಗೂ 7 ಕಂಚಿನ ಪದಕಗಳೊಂದಿಗೆ ಒಟ್ಟು 33 ಪದಕಗಳನ್ನು ಗೆದ್ದು ಅಗ್ರ ಸ್ಥಾನದಲ್ಲಿದೆ.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ಓದುತ್ತಿರುವ ರಿತುಶ್ರೀ ಅವರ ಸಾಧನೆಯ ಮೂಲಕ ಬಡರವ ಮನೆಯಲ್ಲಿ ಹೊಸ ಬೆಳಕು ಮೂಡುವಂತಾಯಿತು. ಈಗಾಗಲೇ ಖೇಲೋ ಇಂಡಿಯಾದಲ್ಲಿ 400 ಮೀ ಓಟದಲ್ಲಿ ಚಿನ್ನ ಹಾಗೂ 200 ಮೀ. ಓಟದಲ್ಲಿ ಬೆಳ್ಳಿ ಗೆದ್ದಿರುವ ರಿತುಶ್ರೀ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ನಲ್ಲೂ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ತಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಚನ್ನಕೇಶವಪುರ ಗ್ರಾಮದವರಾದ ರಿತುಶ್ರೀ ಅವರ ತಂದೆ ಮಹಾಲಿಂಗಪ್ಪ ಹಾಗೂ ತಾಯಿ ಜಯಮ್ಮ ಮಗಳ ಕ್ರೀಡಾ ಬದುಕಿಗೆ ಪ್ರೋತ್ಸಾಹ ನೀಡಿದ್ದಾರೆ. ಅಂಗನವಾಡಿ ಸಹಾಯಕಿ ಆಗಿ ಕೆಲಸ ಮಾಡುತ್ತಿರುವ ಜಯಮ್ಮಗೆ ಮಗಳ ಕ್ರೀಡಾ ಸಾಧನೆ ಅತೀವ ಆನಂದವನ್ನುಂಟು ಮಾಡಿದೆ.
ನಿವೃತ್ತ ಬ್ಯಾಂಕ್ ಉದ್ಯೋಗಿ ಪ್ರಭಾಕರ್ ಅವರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಕ್ರೀಡಾಪಟುಳ ಪ್ರವೇಶಾತಿಯ ಬಗ್ಗೆ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ನೋಡಿ ರಿತುಶ್ರೀ ಮನೆಯವರಿಗೆ ತಿಳಿಸಿದರು. ಆ ಪುಟ್ಟ ನೆರವು ರಾಷ್ಟ್ರೀಯ ಮಟ್ಟದ ಕ್ರೀಡಾಪಟುವನ್ನೇ ಹುಟ್ಟುಹಾಕಿತು.
ಉತ್ತಮ ಶಿಕ್ಷಣದ ಜೊತೆಯಲ್ಲಿ ಕ್ರೀಡಾಬದುಕನ್ನು ರೂಪಿಸಿಕೊಳ್ಳಲು ನೆರವಾದ ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಅದರ ಅಧ್ಯಕ್ಷರಾದ ಡಾ. ಮೋಹನ್ ಆಳ್ವಾ ಅವರನ್ನು ರಿತುಶ್ರೀ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

