ಕ್ರೀಡೆಗೆ ಬುಡಕಟ್ಟು ಪ್ರತಿಭೆಗಳ ಕೊಡುಗೆ ಅಪಾರ: ಕೇಂದ್ರ ಕ್ರೀಡಾ ಸಚಿವ
ರಾಯ್ಪುರ: ದೇಶದ ಕ್ರೀಡಾ ಅಭಿವೃದ್ಧಿಗೆ ಬುಡಕಟ್ಟು ಪ್ರತಿಭೆಗಳು ನೀಡಿದ ಕೊಡುಗೆ ಅಪಾರ ಎಂದು ಕೇಂದ್ರ ಕ್ರೀಡಾ ವ್ಯವಹಾರಗಳ ಸಚಿವ ಡಾ. ಮನ್ಸುಖ್ ಮಾಂಡವೀಯ ಹೇಳಿದರು. ಛತ್ತೀಸ್‌ಗಢದ ಮೂರು ನಗರಗಳಲ್ಲಿ ಪ್ರಾರಂಭವಾದ ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದ ಮೊದಲ ಆವೃತ್ತಿಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. Union Sports Affairs Minister Dr. Mansukh Mandaviya said that the contribution of tribal talents to the development of sports in the country is immense.
ಭಾರತದ ಕ್ರೀಡಾ ಇತಿಹಾದಲ್ಲಿ ಈ ಕ್ರೀಡಾಕೂಟ ಐತಿಹಾಸಿವೆನಿಸಲಿದೆ ಎಂದ ಡಾ. ಮಾಂಡವಿಯ, ಮುಂಬರುವ ವರ್ಷಗಳಲ್ಲಿ, ಈ ಕ್ರೀಡಾಕೂಟಗಳನ್ನು ಬಸ್ತಾರ್, ಸುರ್ಗುಜಾ (ಅಂಬಿಕಾಪುರ) ಮತ್ತು ರಾಯ್‌ಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತದೆ ಎಂದು ಹೇಳಿದರು.
ಕ್ರೀಡಾ ಪ್ರತಿಭೆ ಕೇವಲ ಮಹಾನಗರಗಳಿಗೆ ಸೀಮಿತವಾಗಿಲ್ಲ; ಇದು ದೇಶದ ಬುಡಕಟ್ಟು ಹಳ್ಳಿಗಳು ಮತ್ತು ದೂರದ ಪ್ರದೇಶಗಳಲ್ಲಿಯೂ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಅವರು ಹೇಳಿದರು.ಕ್ರೀಡೆಗಳ ವಿಶಾಲ ಮಹತ್ವವನ್ನು ಒತ್ತಿ ಹೇಳಿದ ಕ್ರೀಡಾ ಸಚಿವರು, ಕ್ರೀಡೆಗಳು ಕೇವಲ ಪದಕಗಳನ್ನು ಗೆಲ್ಲುವುದಲ್ಲ, ಬದಲಾಗಿ ಶಿಸ್ತು, ಸಮತೋಲನ ಮತ್ತು ಪ್ರಮುಖ ಜೀವನ ಮೌಲ್ಯಗಳನ್ನು ಕಲಿಸುತ್ತವೆ, ಇದು ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ಕ್ರೀಡಾ ಸಂಸ್ಕೃತಿಯ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಹೇಳಿದರು.

ಖೇಲೋ ಇಂಡಿಯಾ ಕೇಂದ್ರಗಳು ಮತ್ತು ಶ್ರೇಷ್ಠತಾ ಕೇಂದ್ರಗಳಂತಹ ರಚನಾತ್ಮಕ ಮಾರ್ಗಗಳ ಮೂಲಕ ಪ್ರತಿಭೆಯನ್ನು ಗುರುತಿಸಲು ಮತ್ತು ಅವರನ್ನು ಪೋಷಿಸಲು ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರು ಕ್ರೀಡಾ ಸ್ಥಳಗಳಲ್ಲಿ ಹಾಜರಿರುತ್ತಾರೆ ಎಂದು ಡಾ. ಮಾಂಡವಿಯ ವಿವರಿಸಿದರು, ಇದು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ ಎಂದರು.
ಒಲಿಂಪಿಯನ್ ದೀಪಿಕಾ ಕುಮಾರಿಯಂತಹ ಕ್ರೀಡಾಪಟುಗಳನ್ನು ಉಲ್ಲೇಖಿಸುತ್ತಾ, ಭಾರತದ ಕ್ರೀಡಾ ಪರಂಪರೆಗೆ ಬುಡಕಟ್ಟು ಸಮುದಾಯಗಳ ಮಹತ್ವದ ಕೊಡುಗೆಯನ್ನು ಅವರು ಒತ್ತಿ ಹೇಳಿದರು.

