Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ಗೆ ಬೆಳಕಾದ ಬಿಸಿಸಿಐ

ಮುಂಬೈ: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿ ಕ್ರಿಕೆಟಿಗರ ಬದುಕಿಗೆ ನೆರವಾಗುತ್ತಿರುವ ಭಾರತೀಯ ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ ಸಂಸ್ಥೆ Cricket Association for the Blind in India (CABI) ಗೆ ರಚನಾತ್ಮಕ ನೆರವು ನೀಡುವುದಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ The Board of Control for Cricket in India (BCCI) ಘೋಷಿಸಿದೆ. BCCI has announced a support framework for the CABI underlining its commitment to inclusive growth and greater opportunities across Indian cricket.

ಕಳೆದೊಂದು ದಶಕದಲ್ಲಿ ದೃಷ್ಠಿ ದಿವ್ಯಾಂಗ ಕ್ರಿಕೆಟಿಗರು ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪುರುಷರ ವಿಶ್ವಕಪ್‌ ಹಾಗೂ ವನಿತೆಯರ ವಿಶ್ವಕಪ್‌ ಗೆಲ್ಲುವ ಮೂಲಕ ಅದ್ಭುತ ಸಾಧನೆ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಗೌರವ ಸಿಕ್ಕಂತಾಗಿದೆ, ಈ ಸಾಧನೆಯನ್ನು ಗೌರವಿಸಿರುವ ಬಿಸಿಸಿಐ ದೃಷ್ಠಿ ದಿವ್ಯಾಂಗ ಕ್ರಿಕೆಟಿಗರು ಅನುಭವಿಸಿರುವ ಕಷ್ಟಗಳನ್ನು ಗಮನದದಲ್ಲಿರಿಸಿಕೊಂಡು ಬಿಸಿಸಿಐ ಮಹಿಳಾ ಹಾಗೂ ಪುರುಷ ದೃಷ್ಟಿ ದಿವ್ಯಾಂಗರ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಲು ತೀರ್ಮಾನಿಸಿದೆ.

ಮಹಿಳಾ ಹಾಗೂ ಪುರುಷ ತಂಡಗಳಿಗೆ ವರ್ಷಕ್ಕೆ ಎರಡು ಬಾರಿ ವಿದೇಶದಲ್ಲಿ ಟೂರ್ನಿ ಆಯೋಜನೆ. ಭಾರತದಲ್ಲಿ ನಡೆಯುವ ದ್ವಿಪಕ್ಷೀಯ ಸರಣಿಯ ವೇಳೆ ಪ್ರವಾಸಿ ಹಾಗೂ ಅತಿಥೇಯ ತಂಡಕ್ಕೆ ವಸತಿ ಸೌಲಭ್ಯ ನೀಡುವುದು. ಉತ್ತಮ ಗುಣಮಟ್ಟದ ಪಂದ್ಯ ಹಾಗೂ ವೃತ್ತಿಪರ ಕ್ರಿಕೆಟ್‌ ಆಡಲು ಭಾರತದಲ್ಲಿ ಬಿಸಿಸಿಐ ಅಧೀನದಲ್ಲಿರುವ ಯಾವುದೇ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವ ಅವಕಾಶ ನೀಡಲು ಬಿಸಿಸಿಐ ತೀರ್ಮಾನಿಸಿದೆ.


administrator