Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

COSTA BADMINTON CENTRE ನಲ್ಲಿ ಬ್ಯಾಡ್ಮಿಂಟನ್‌ ಹಬ್ಬ

ಕುಂಪಾಪುರ: ಉಡುಪಿ ಜಿಲ್ಲೆಯ ಜನಪ್ರಿಯ ಬ್ಯಾಡ್ಮಿಂಟನ್‌ ಅಕಾಡೆಮಿಯಾಗಿರುವ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನಲ್ಲಿ ಫೆಬ್ರವರಿ 14, 15 ಮತ್ತು 16 ರಂದು ವಿವಿಧ ರೀತಿಯ ಬ್ಯಾಡ್ಮಿಂಟನ್‌ ಟೂರ್ನಿ ನಡೆಯಲಿದೆ. Various badminton tournaments will be held on February 14, 15 and 16 at Costa Badminton Center, Kundapura a popular badminton academy in Udupi district.

ಫೆಬ್ರವರಿ 14 ರ ಶನಿವಾರದಂದು ಕುಂದಾಪುರ ತಾಲೂಕು ವಕೀಲರ ಸಂಘದ ಸದಸ್ಯರಿಗಾಗಿ ಟೂರ್ನಿ ನಡಯಲಿದೆ. ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಅವರು ತಮ್ಮ ತಂಡದೊಂದಿಗೆ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನಲ್ಲಿ ಆಡಲಿದ್ದಾರೆ. ನಿಂತರವಾಗಿ ದುಡಿಯುತ್ತಿರುವ ವಕೀಲರ ಬದುಕಿಗೆ ವಿಶ್ರಾಂತಿ ಹಾಗೂ ಫಿಟ್ನೆಸ್‌ ಅಗತ್ಯವಿರುತ್ತೆ, ನಮ್ಮ ವಕೀಲರುಗಳು ತಮ್ಮ ಬಿಡುವಿನ ವೇಳೆಯಲ್ಲಿ ಅಥವಾ ಕೆಲಸ ನಡುವೆ ಬಿಡುವು ಮಾಡಿಕೊಂಡು, ರಜಾ ದಿನಗಳಲ್ಲಿ ಕೋಸ್ಟಾ ಬ್ಯಾಡ್ಮಿಂಟರ್‌ ಸೆಂಟರ್‌ಗೆ ಬಂದು ಬ್ಯಾಡ್ಮಿಂಟನ್‌ ಆಡುವಂತೆ ವಿನಂತಿಸಿಕೊಳ್ಳಲಾಗುವುದು ಎಂದು ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.  ಟೂರ್ನಿ ಬೆಳಿಗ್ಗೆ 9 ರಿಂದ ಆರಂಭಗೊಳ್ಳುತ್ತದೆ.

ಫೆಬ್ರವರಿ 15 ರಂದು ಉಡುಪಿ ಜಿಲ್ಲಾ ಮಟ್ಟದ ರಾಲಿ ಚಾಂಪಿಯನ್‌ಷಿಪ್‌ ನಡೆಯಲಿದೆ. ಇಂಟರ್‌ಮೀಡಿಯೆಟದ ಡಬಲ್ಸ್‌ ಹಾಗೂ ಪುರುಷರ ಡಬಲ್ಸ್‌ ಪಂದ್ಯಗಳು ನಡೆಯಲಿವೆ. ಎರಡೂ ವಿಭಾಗಗಳಿಗೂ ಪ್ರವೇಶ ಶುಲ್ಕ ರೂ. 1000. ವಿಜೇತರಿಗೆ ಬಹುಮಾನ 10,000 ರೂ. ಹಾಗೂ ಟ್ರೋಫಿ. ರನ್ನರ್ಸ್‌ ಅಪ್‌ ಗೆ ರೂ. 5,000 ಹಾಗೂ ಟ್ರೋಫಿ ಇರುತ್ತದೆ. ಸೆಮಿಫೈನಲ್‌ನಲ್ಲಿ ಸೋತವರಿಗೆ ಟ್ರೋಫಿ ಬಹುಮಾನವಾಗಿ ನೀಡಲಾಗುವುದು. [ವಿ. ಸೂ. ಪುರುಷರ ಡಬಲ್ಸ್‌ ಉಡುಪಿ ಹಾಗೂ ದಕ್ಷಿಣ ಕನ್ನಡದ ಆಟಗಾರರಿಗೆ ಅವಕಾಶವಿರುತ್ತದೆ]

ಹೆಚ್ಚಿನ ವಿವರಗಳಿಗೆ ಪ್ರಜ್ವಲ್‌ ಅವರನ್ನು 9845279522 / 8618820691 ಸಂಪರ್ಕಿಸಬಹುದು,

ಫೆಬ್ರವರಿ 16 ಸೋಮವಾರದಂದು ಬೆಳಿಗ್ಗೆ 9:30 ರಿಂದ ಕುಂದಾಪುರದ ಸೇಂಟ್‌ ಪಿಯೂಸ್‌ X ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್‌ ವಿದ್ಯಾರ್ಥಿಗಳಿಗಾಗಿ ಇನ್‌- ಹೌಸ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಂಗಲ್ಸ್‌ ಟೂರ್ನಿ ಇದಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿರುವುದರಿಂದ ಅವರು ಒತ್ತಡದಿಂದ ಮುಕ್ತರಾಗಲು ಈ ಟೂರ್ನಿಯನ್ನು ಆಯೋಜಿಸಲಾಗಿದೆ.  ST. PIUS X English Medium High School ನ ಪ್ರಾಂಶುಪಾಲರಾದ ಸಿಸ್ಟರ್‌ ಶಾಂತಾ ಕಾಂಬ್ಳಿ ಹಾಗೂ ಶಾಲೆಯ ಸರ್ವ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಈ ಟೂರ್ನಿಯ ಆಯೋಜನೆಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ.

ಟೂರ್ನಿಗಳನ್ನು ಆಯೋಜಿಸಲು, ಕೋಸ್ಟಾ ಬ್ಯಾಡ್ಮಿಂಟನ್‌ನಲ್ಲಿ ಸದಸ್ಯತ್ವ ಹೊಂದಲು, ಮಕ್ಕಳಿಗೆ ತರಬೇತಿ ನೀಡಲು ಯಾವುದೇ ಸಂದರ್ಭದಲ್ಲೂ ಕರೆ ಮಾಡಿ:  7204288366/ 8147438366/ 9740468883 / 7349431143


administrator