‘ಮಣಿಪಾಲ ಮ್ಯಾರಥಾನ್’ನಲ್ಲಿ ದಾಖಲೆಯ 20000 ಓಟಗಾರರು
ಮಣಿಪಾಲ್: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ ಆಯೋಜಿಸಿದ್ದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’, ಕೆ.ಎಂ.ಸಿ ಗ್ರೀನ್ಸ್‌ನಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿತು. ಭಾರತದ ಅತಿದೊಡ್ಡ ವಿದ್ಯಾರ್ಥಿ ಆಯೋಜಿತ ಫಿಟ್ನೆಸ್ ಕಾರ್ಯಕ್ರಮಗಳಲ್ಲಿ ಒಂದಾದ ಈ ಮ್ಯಾರಥಾನ್‌ನಲ್ಲಿ 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 20,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು ₹25 ಲಕ್ಷಕ್ಕೂ ಅಧಿಕ ಮೊತ್ತದ ನಗದು ಬಹುಮಾನಗಳನ್ನು ನೀಡಲಾಯಿತು. One of India’s largest student-led community fitness events, the Manipal marathon attracted 20,000+ runners.
ಪರಿಸರ ಸಂರಕ್ಷಣೆಯ ಬಗ್ಗೆ ಮಾಹೆ ಹೊಂದಿರುವ ಬದ್ಧತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಈ ವರ್ಷದ ಮ್ಯಾರಥಾನ್ ಅನ್ನು ‘ಹಸಿರು ಭವಿಷ್ಯಕ್ಕಾಗಿ ಹೆಜ್ಜೆಗಳು – ಸುಸ್ಥಿರ ಭವಿಷ್ಯಕ್ಕಾಗಿ ಓಟ’ ಎಂಬ ಆಶಯದೊಂದಿಗೆ ಆಯೋಜಿಸಲಾಗಿತ್ತು. ಮರ ನೆಡುವಿಕೆ, ಜೀವವೈವಿಧ್ಯದ ಸಂರಕ್ಷಣೆ, ಸೌರಶಕ್ತಿಯ ಬಳಕೆ, ತ್ಯಾಜ್ಯ ನಿರ್ವಹಣೆ, ಮಳೆನೀರು ಸಂಗ್ರಹಣೆ ಹಾಗೂ ಸುಸ್ಥಿರ ಸಂಚಾರ ವ್ಯವಸ್ಥೆಯಂತಹ ಮಾಹೆಯ ನಿರಂತರ ಪರಿಸರ ಸ್ನೇಹಿ ಕಾರ್ಯಕ್ರಮಗಳಿಗೆ ಈ ಮ್ಯಾರಥಾನ್ನ ಆಶಯ ಪೂರಕವಾಗಿತ್ತು. ಈ ಅಭಿಯಾನದ ಪ್ರಭಾವವು ಕೇವಲ ಕ್ಯಾಂಪಸ್‌ಗೆ ಸೀಮಿತವಾಗದೆ, ಇಡೀ ಸಮುದಾಯಕ್ಕೆ ವಿಸ್ತರಿಸುವಲ್ಲಿ ಮ್ಯಾರಥಾನ್ ಯಶಸ್ವಿಯಾಯಿತು.

ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮಾಹೆಯ ಸಹ-ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ‘ಮಣಿಪಾಲ ಮ್ಯಾರಥಾನ್‌ನ 8ನೇ ಆವೃತ್ತಿಗೆ ವ್ಯಕ್ತವಾಗಿರುವ ಅಭೂತಪೂರ್ವ ಸ್ಪಂದನೆ, ಶಿಕ್ಷಣದ ಜೊತೆಗೆ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಮಾಹೆಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. 20,000ಕ್ಕೂ ಹೆಚ್ಚು ಓಟಗಾರರನ್ನು ಒಂದುಗೂಡಿಸುವ ಮೂಲಕ ನಾವು ಕೇವಲ ಫಿಟ್‌ನೆಸ್ ಮತ್ತು ಆರೋಗ್ಯವನ್ನು ಉತ್ತೇಜಿಸುತ್ತಿಲ್ಲ, ಬದಲಿಗೆ ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಒಳಿತಿಗಾಗಿ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ. ಕೇವಲ ವಿದ್ಯಾರ್ಥಿಗಳ ಕಾರ್ಯಕ್ರಮವಾಗಿ ಪ್ರಾರಂಭವಾದ ಇದು ಭಾರತದ ಅತಿದೊಡ್ಡ ಸಮುದಾಯ ಫಿಟ್‌ನೆಸ್ ಕಾರ್ಯಕ್ರಮಗಳಲ್ಲಿ ಒಂದಾಗಿ ಇಂದು ಬೆಳೆದಿದೆ. 10ಕ್ಕೂ ಹೆಚ್ಚು ದೇಶಗಳ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯʼ ಎಂದು ಹೇಳಿದರು.
ದುಬೈ, ಇಂಗ್ಲೆಂಡ್, ಇಥಿಯೋಪಿಯ, ಜರ್ಮನಿ, ಕೀನ್ಯಾ, ಜಪಾನ್, ಮಲೇಷ್ಯಾ, ನೇಪಾಳ, ಶ್ರೀಲಂಕಾ ಮತ್ತು ಅಮೆರಿಕ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳ 100ಕ್ಕೂ ಅಧಿಕ ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸುವ ಮೂಲಕ ಈ ಕ್ರೀಡಾಕೂಟಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದಾರೆ. ಮಣಿಪಾಲ್ ಮ್ಯಾರಥಾನ್‌ನ ವಿಶೇಷ ಆಕರ್ಷಣೆ, 42 ಕಿ.ಮೀ. ಪೂರ್ಣ ಮ್ಯಾರಥಾನ್ನ ಕಡಲತೀರದ ಮಾರ್ಗವಾಗಿದ್ದು. ಇದು ಓಟಗಾರರಿಗೆ ಮರೆಯಲಾಗದ ಸುಂದರ ಅನುಭವ ನೀಡಿತು. ಇದರೊಂದಿಗೆ, ಈ ವರ್ಷ ಹೊಸದಾಗಿ ಪರಿಚಯಿಸಲಾದ ‘ಮಣಿಪಾಲ ಹಾಸ್ಪಿಸ್ ರೆಸ್ಪೈಟ್ ಸೆಂಟರ್’ ಅನ್ನು ಒಳಗೊಂಡ 10 ಕಿ.ಮೀ. ಓಟದ ಮಾರ್ಗವು, ಸಾಮಾಜಿಕ ಕಳಕಳಿ ಮತ್ತು ಸಮುದಾಯದ ಒಳಿತಿಗಾಗಿ ಮ್ಯಾರಥಾನ್ ಹೊಂದಿರುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿತು.

ಈ ವೇಳೆ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ (ನಿವೃತ್ತ), ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ಶರತ್ ರಾವ್, ಮಂಗಳೂರು ಕ್ಯಾಂಪಸ್ಸಿನ ಸಹ ಕುಲಪತಿ ಡಾ| ದಿಲೀಪ್ ನಾಯ್ಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದ ಕುಲಪತಿ ಡಾ. ಗೋಪಾಲಕೃಷ್ಣ ಪ್ರಭು, ಸೇರಿ ಮಾಹೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು.
ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಮಾಹೆ ಬದ್ಧತೆಗೆ ಅನುಗುಣವಾಗಿ, ಮಣಿಪಾಲ ಮ್ಯಾರಥಾನ್‌ನಲ್ಲಿ ಅಂಗವಿಕಲರು ಹಾಗೂ ಅಂಧರಿಗಾಗಿ ಪ್ರತ್ಯೇಕ ವಿಭಾಗಗಳನ್ನು ಮೀಸಲಿಡಲಾಗಿತ್ತು. ಇದರಲ್ಲಿ xxx ಅಂಗವಿಕಲರು ಮತ್ತು ಅಂಧ ಕ್ರೀಡಾಪಟುಗಳು ಅತ್ಯಂತ ಸಕ್ರಿಯವಾಗಿ ಭಾಗವಹಿಸಿದ್ದರು. ಅಲ್ಲದೆ, ವಯೋಮಾನದ ಆಧಾರದ ಮೇಲೂ ವಿವಿಧ ವಿಭಾಗಗಳನ್ನು ವರ್ಗೀಕರಿಸಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿತ್ತು.

ʼಮಣಿಪಾಲ ಮ್ಯಾರಥಾನ್ 2026ʼ ಅನ್ನು ಬೃಹತ್ ಯಶಸ್ಸಿನತ್ತ ಮುನ್ನಡೆಸಲು ನಿರಂತರ ಬೆಂಬಲ ನೀಡಿದ ಟೈಟಲ್ ಪ್ರಾಯೋಜಕರಾದ ಐಸಿಐಸಿಐ ಬ್ಯಾಂಕ್, ಯುನೆಕ್ಟ್, ಡೆಲಾಯ್ಟ್, ಬಿಓಬಿಕಾರ್ಡ್ ಮತ್ತು ಇತರ ಎಲ್ಲಾ ಪ್ರಾಯೋಜಕರಿಗೆ ಮಾಹೆ ಕಡೆಯಿಂದ ಹೃತ್ಪೂರ್ವಕ ಕೃತಜ್ಞತೆಗಳು.
ವಿವಿಧ ವಿಭಾಗಗಳಲ್ಲಿ ವಿಜೇತರಾದವರು:
ಓಟದ ನಂತರ ನಡೆದ ಸಂಭ್ರಮದ ಕಾರ್ನಿವಲ್‌ನೊಂದಿಗೆ ಮ್ಯಾರಥಾನ್ ಪೂರ್ಣಗೊಂಡಿತು. ಇದರಲ್ಲಿ ಫಿಟ್‌ನೆಸ್ ಆಸಕ್ತರು ಮತ್ತು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಸಂಗೀತ, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಸಂವಾದಾತ್ಮಕ ಫಿಟ್‌ನೆಸ್ ಮತ್ತು ಜುಂಬಾ ಸೆಷನ್‌ಗಳು ಮ್ಯಾರಥಾನ್‌ನ ಸಡಗರಕ್ಕೆ ಮತ್ತಷ್ಟು ಮೆರುಗು ನೀಡಿದವು.

ವಿವಿಧ ವಿಭಾಗಗಳಲ್ಲಿ ಗೆದ್ದವರು:
42K Fastest ಪುರುಷರು
1 ಸತೀಶ್ ಕುಮಾರ್
2 ಸಚಿನ್ ಪೂಜಾರಿ
3 ಡೆಸಿ ಎಂಡಲಿವ್
42 Fastest ಮಹಿಳೆಯರು
1 ಸೆನೈಟ್ ಕೆಫೆಲಿನ್ ಲೆಷಾರ್ಗ್
2 ಯೆನೆಲೆಮ್ ಯಾನೋ ಬುಲಿ
3 ನೀತಿ ಕೃಪಾಲಿನಿ
21K Fastest ಪುರುಷರು
1 ರಿಜ್ವಾನ್ ಅಲಿ
2 ಶಾಶ್ವತ್ ರಾಜೇಶ್ ಪೂಜಾರಿ
3 ನಲಿನಾಕ್ಷನ್ ಕಿಝಾಕ್ಕೆಡಾತ್
21K Fastest ಮಹಿಳೆಯರು
1 ಭಾವನ ನೇಗಿ
2 ನಂದಿನಿ ಜಿ
3 ರುತುರಾಜ್ ಪಟೇಲ್
10K Fastest ಪುರುಷರು
1 ಶಿವಾನಂದ ಚಿಗಿರಿ
2 ಶ್ರೀಧರ ಎಸ್ ಎನ್
3 ಮುಬಾರಕ್ ಆರ್ ದಂತಾಲಿ
10K Fastest ವನಿತೆಯರು
1 ಶಾಹಿನ್ ಎಸ್ ಧಾರವಾಡ
2 ಶ್ರೇಯಾ ಮೂಡೆಕಲ್ಲು
3 ಚೈತ್ರ ಟಿ ಪೊ
5K Fastest ಪುರುಷರು
1 ನಾಗರಾಜ್ ದಿವಾಟೆ
2 ರಂಗ
3 ಮಂಜುನಾಥ್ ಬೇಲೂರಪ್ಪನವರ್
5K Fastest ವನಿತೆಯರು
1 ನಾಗಿನಿ
2 ಎಚ್ ವಿ ದೀಕ್ಷಾ
3 ರೇಖಾ ಬಿ ಪಿ

