ವಿಶ್ವಕಪ್ ಹಾಕಿ: ಸೋಲಂಚಿನಲಿ ಗೋಲ್ಮಿಂಚು ಭಾರತಕ್ಕೆ ಕಂಚು
ಚೆನ್ನೈ: ಅರ್ಜೆಂಟೀನಾ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಹಾಕಿ ತಂಡ ಜೂನಿಯರ್ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದೆ. ಈ ಹಿಂದೆ ಎರಡು ಬಾರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಭಾರತ ಈ ಬಾರಿ ಅದ್ಭುತ ಪ್ರದರ್ಶನ ತೋರಿ ಕಂಚಿನ ಪದಕ ಗೆದ್ದಿತು. Junior Hockey World Cup: India secure bronze after dramatic comeback 4-2 win over Argentina
ಅರ್ಜೆಂಟೀನಾ ತಂಡ 2-0 ಅಂತರದಲ್ಲಿ ಮುನ್ನಡೆ ಕಂಡಿತ್ತು. ಭಾರತ ಇನ್ನೇನು ಸೋಲಿನ ಅಂಚಿಗೆ ತಲುಪಿತ್ತು, ಆದರೆ ಕೊನೆಯ 10 ನಿಮಿಷಗಳಲ್ಲಿ ನಾಲ್ಕು ಗೋಲುಗಳನ್ನು ಗಳಿಸಿ ಅಚ್ಚರಿಯ ಜಯ ದಾಖಲಿಸಿತು. ಭಾರತದ ಪರ ಅಂಕಿತ್ ಪಾಲ್ (49ನೇ ನಿಮಿಷ), ಮನ್‌ಮೀತ್ ಸಿಂಗ್ (52 ನೇ ನಿಮಿಷ) ಶರದ್ ನಂದ ತಿವಾರಿ ಮತ್ತು ಅನ್ಮೋಲ್ ಎಕ್ಕಾ (58ನೇ ನಿಮಿಷ) ಗೋಲು ಗಳಿಸಿ ಭಾರತದ ಜಯದ ರೂವಾರಿ ಎನಿಸಿದರು. ಅರ್ಜೆಂಟೀನಾದ ಪರ ನಿಕೊಲಾಸ್ ರಾಡ್ರಿಗಸ್, (3ನೇ ನಿಮಿಷ) ಹಾಗೂ ಸಾಂಟಿಯಾಗೋ ಫೆರ್ನಾಂಡೀಸ್ (44ನೇ ನಿಮಿಷ) ಗೋಲು ಗಳಿಸಿ ಮುನ್ನಡೆ ಕಲ್ಪಿಸಿದ್ದರು.

