ಕ್ರೀಡಾ ಸಾಧನೆಗಾಗಿ SPOCO ಹೊಸ ಯೋಜನೆ: ಮೃಣಾಲಿನಿ ಪಟ್ಟಣ್
ಬೆಳಗಾವಿ: ಕಳೆದ ನಾಲ್ಕು ದಶಕಗಳಿಂದ ಶಿಕ್ಷಣದ ಜೊತೆಗೆ ಕ್ರೀಡೆಯನ್ನೂ ಪೋಷಿಸುತ್ತ ಬಂದಿರುವ, ದೇಶದ ಮೊದಲ ಕ್ರೀಡಾ ಶಾಲೆ ಚಂದರಗಿ ಕ್ರೀಡಾ ಶಾಲೆಯು ಕ್ರೀಡಾಭಿವೃದ್ಧಿಗಾಗಿ ಅನೇಕ ವಿನೂತನ ಯೋಜನೆಗಳನ್ನು ರೂಪಿಸಿದೆ ಎಂದು ಎಸ್.ಎಂ. ಕಲೂತಿ ಸಂಯಕ್ತ ಕ್ರೀಡಾ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರವೃಕ್ತಕರಾದ ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರಿ ಸಂಸ್ಥೆ ಸ್ಪೋಕೋ Sports Promotion and Development Co-operative Ltd (SPOCO) ಅಧ್ಯಕ್ಷರಾದ ಮೃಣಾಲಿನಿ ಪಟ್ಟಣ್ ಅವರು ಹೇಳಿದ್ದಾರೆ. Chandaragi Sports School, the country’s first sports school, which has been nurturing sports along with education for the last four decades, has formulated many innovative projects for sports development, said Mrinalini Pattan, President of SPORTS PROMOTION AND DEVELOPMENT CO-OPERATIVE LTD (SPOCO),
ರಾಜ್ಯದಲ್ಲಿ ಸಾಧನೆ ಮಾಡಿರುವ ಪ್ರತಿಭಾನ್ವತಿ ಕ್ರೀಡಾಪಟುಗಳನ್ನು ಆಯ್ಕೆಮಾಡಿಕೊಂಡು ಅವರಿಗೆ ಅತ್ಯಾಧುನಿಕ ತರಬೇತಿ ನೀಡಲಾಗುವುದು. ಇದಕ್ಕಾಗಿ ಮುಂದಿನ ನಾಲ್ಕು ವರ್ಷಕ್ಕೆ “ಮಿಷನ್ ಒಲಿಂಪಿಕ್ಸ್ ವೇದಿಕೆ” ಎಂಬ ಯೋಜನೆಯಲ್ಲಿ ರಾಜ್ಯ ಮಟ್ಟದಲ್ಲಿ ಬಂಗಾರದ ಪದಕ ಗಳಿಸಿದ, ರಾಷ್ಟ್ರ ಮಟ್ಟದಲ್ಲಿ ಬಂಗಾರ, ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳುನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುವುದು. ಈ ಕ್ರೀಡಾಪಟುಗಳಿಗೆ SPOCO ಸಂಸ್ಥೆಯಿಂದ ಹೆಚ್ಚಿನ ತರಬೇತಿಯನ್ನು ನೀಡಲು ನುರಿತ ತರಬೇತುದಾರರನ್ನು ಒಳಗೊಂಡಂತೆ ಅತ್ಯಾಧುನಿಕ ಸೌಲಭ್ಯಗಳು, ಕ್ರೀಡಾ ವಿಜ್ಞಾನ, ಫಿಸಿಯೋಥೆರಪಿಗಳಂತಹ ಅನೇಕ ಸೌಕರ್ಯಗಳನ್ನು ಬಳಸಿಕೊಳ್ಳುವ ಮೂಲಕ ಕ್ರೀಡಾಪಟುಗಳಿಗೆ ಹೆಚ್ಚಿನ ಅಭಿವೃದ್ಧಿ ಮತ್ತು ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ.
ಕ್ರೀಡೆಗಳು: ಈ ಯೋಜನೆಗಾಗಿ ಸೈಕ್ಲಿಂಗ್, ಅಥ್ಲೆಟಿಕ್ಸ್ ಹಾಗೂ ಕುಸ್ತಿ ಕ್ರೀಡೆಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ಉಚಿತ ಕ್ರೀಡಾ ತರಬೇತಿ, ಊಟ, ವಸತಿ, ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ಕಲಿಸಲಾಗುವುದು.
ಕ್ರೀಡೆ ಕ್ರೀಡಾಪಟುಗಳ ಸಂಖ್ಯೆ ವಿಭಾಗ (EVENT)
ಸೈಕ್ಲಿಂಗ್ 4 ಸ್ಪ್ರಿಂಟ್-1, ಟೈಮ್ ಟ್ರಯಲ್ಸ್-1, ವೈಯಕ್ತಿಕ ಪರ್ಷೂಟ್-1, ರೋಡ್ ರೇಸ್ -1
ಅಥ್ಲೆಟಿಕ್ಸ್ 4 100, 200 ಮೀ. ಓಟ-1,
400, 800, 1500 ಮೀ. ಓಟ- 1,
ಲಾಂಗ್ ಜಂಪ್ ಹೈಜಂಪ್ -1,
ಶಾಟ್‌ಪಟ್, ಜಾವೆಲಿನ್, ಡಿಸ್ಕಸ್ ಥ್ರೋ -1.
ಕುಸ್ತಿ 4 41 ಕೆಜಿ ಯಿಂದ 49 ಕೆಜಿ ವರೆಗೆ -2, 52 ಕೆಜಿಯಿಂದ 58 ಕೆಜಿ ವರೆಗೆ -2

ವಯೋಮಿತಿ: ಕ್ರೀಡಾಪಟುಗಳು 14 ರಿಂದ 20 ವರ್ಷ ವಯೋಮಿಯಲ್ಲಿರಬೇಕು. ಅವಶ್ಯಕತೆಗೆ ತಕ್ಕಂತೆ ಆಯ್ಕೆ ಸಮಿತಿ ಹಾಗೂ ತರಬೇತುದಾರರ ಶಿಫಾರಸ್ಸಿಗೆ ಅನುಸಾರವಾಗಿ ಆಯ್ಕೆ ಮಾಡಲಾಗುವುದು.
ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಹಾಗೂ ಪದವಿ ವ್ಯಾಸಂಗ ಮಾಡುವವರಿಗೆ ಈ ಕೆಳಗಿನ ಮಾನದಂಡಗಳಂತೆ ಆಯ್ಕೆ ಸಮಿತಿಯು ಆಯ್ಕೆ ಮಾಡಿಕೊಳ್ಳವುದು.
- ರಾಜ್ಯ ಮಟ್ಟದಲ್ಲಿ ಮೇಲ್ಕಾಣಿಸಿದ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆದ್ದಿರಬೇಕು. ಅಥವಾ ರಾಷ್ಟ್ರ ಮಟ್ಟದಲ್ಲಿ ಮೇಲ್ಕಾಣಿಸಿದ ಕ್ರೀಡೆಗಳಲ್ಲಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದಿರಬೇಕು. ಅಥವಾ
ಕ್ರೀಡಾಪಟುಗಳು ಮೇಲ್ಕಾಣಿಸಿದ ಕ್ರೀಡೆಗಳಲ್ಲಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟ (ಎಸ್‌ಜಿಎಫ್) , ರಾಷ್ಟ್ರೀಯ ಸಬ್‌ಜೂನಿಯರ್, ಸೀನಿಯರ್ ಕೆಡೆಟ್ ಸ್ಪರ್ಧೆಗಳಲ್ಲಿ ಆಯಾ ಫೆಡರೇಷನ್‌ಗಳು ನಡೆಸಿದ ಸ್ಪರ್ಧೆಗಳಲ್ಲಿ ಪದಕ ಗೆದ್ದಿರಬೇಕು.
- ಆಯ್ಕೆಗೊಂಡ ಕ್ರೀಡಾಪಟುಗಳಿಗೆ ಸಂಸ್ಥೆಯು ಪ್ರತಿ ವರ್ಷ 1.5 ಲಕ್ಷ ರೂ. ವೆಚ್ಚ ಮಾಡಲಿದೆ.
- ಸಂಸ್ಥೆ ನೀಡುವ ಪರಿಕರಗಳ ಜೊತೆಯಲ್ಲಿ ಕ್ರೀಡಾಪಟುಗಳು ತಮ್ಮದೇ ಆದ ಕ್ರೀಡಾಪರಿಕರಗಳನ್ನು ಹೊಂದಿದವರಾಗಿರಬೇಕು.
- ಈ ಯೋಜನೆಯಲ್ಲಿ ಸಾರ್ವಜನಿಕ ಉದ್ಯಮಗಳು, ರಾಜ್ಯ ಸರಕಾರ, ಕೇಂದ್ರ ಸರಕಾರ, ವಿವಿಧ ಕೋ-ಅಪರೇಟಿವ್ ಬ್ಯಾಂಕ್‌ಗಳು, ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗಳು ಮತ್ತು ಸಕ್ಕರೆ ಕಾರ್ಖಾನೆಗಳು ಕ್ರೀಡಾಪಟುಗಳಿಗೆ ಆರ್ಥಿಕ ಸೌಲಭ್ಯ ನೀಡುವ ಬಗ್ಗೆ ಒಪ್ಪಂದ (ಒಡಂಬಡಿಕೆ) ಮಾಡಿಕೊಳ್ಳಲು ಅವಕಾಶವಿದೆ.
- ಪ್ರತಿ ವರ್ಷ ಕ್ರೀಡಾಪಟುಗಳ ಮೌಲ್ಯ ಮಾಪನ ಮಾಡಲಾಗುವುದು, ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಮಾತ್ರ ಯೋಜನೆಯನ್ನು ಮುಂದುವರಿಸಲಾಗುವುದು.
- ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನ ಸಂಸ್ಥೆ ಅನುಮತಿ ಪಡೆಯುವುದು ಅಗತ್ಯ.
ಉತ್ತಮ ಕ್ರೀಡಾಪಟುಗಳನ್ನು ರಾಜ್ಯಕ್ಕೆ, ದೇಶಕ್ಕೆ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಶಿಕ್ಷಣದ ಜೊತೆಯಲ್ಲಿ ಉತ್ತಮ ಸಂಸ್ಕಾರಯುತ ನಾಗರಿಕರನ್ನು ಈ ಸಮಾಜಕ್ಕೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು SPOCO ಸಂಸ್ಥೆಯ ಅಧ್ಯಕ್ಷೆ ಮೃಣಾಲಿನಿ ಪಟ್ಟಣ ಅವರು ಪ್ರಕಟಣೆಯಲ್ಲಿ ತಿಳಿಸಿದರುತ್ತಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9448609868/ 9036270045

