ಹಾಕಿ: ಪೆನಾಲ್ಟಿ ಶೂಟೌಟ್ ಮೂಲಕ ಸೆಮಿಫೈನಲ್ ತಲುಪಿದ ಭಾರತ
ಚೆನ್ನೈ; ಬೆಲ್ಜಿಯಂ ಅತ್ಯಂತ ರೋಚಕವಾಗಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 4-3 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ ಜೂನಿಯರ್ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿದೆ. ನಿಗದಿತ ಅವಧಿಯಲ್ಲಿ ಇತ್ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಸಿದ್ದವು. Men’s junior World Cup hockey India edges Belgium, enters semifinal.
ಭಾನಜುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಜರ್ಮನಿಯನ್ನು ಎದುರಿಸಲಿದೆ, ದಿನದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಸ್ಥಾನಕ್ಕಾಗಿ ಸೆಣಲಿದೆ.
ಭಾರತದ ಪರ ರೋಹಿತ್ ಹಾಗೂ ಶಾರ್ದಾನಂದ್ ತಿವಾರಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದ್ದರು. ಬೆಲ್ಜಿಯಂ ಪರ ಗಾಸ್ಪ್ರಾಡ್ ಕೊರ್ನೆಜ್ ಮಸ್ಸಾಂಟ್ ಹಾಗೂ ಮಾಥಿಸ್ ಲಾರೆನ್ಸ್ ಗೋಲು ಗಳಿಸಿದರು. ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲ್‌ಕೀಪರ್ ಪ್ರಿನ್ಸ್‌ದೀಪ್ ಸಿಂಗ್ ತೋರಿದ ಅದ್ಭುತ ಪ್ರದರ್ಶನ ಭಾರತ ಜಯ ಗಳಿಸಲು ಕಾರಣವಾಯಿತು. ನಿರೀಕ್ಷೆಯಂತೆ ಪ್ರಿನ್ಸ್‌ದೀಪ್ ಸಿಂಗ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

