Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಜಿಎಂ ವಿದ್ಯಾನಿಕೇತನ್‌ ಪಬ್ಲಿಕ್‌ ಸ್ಕೂಲ್‌ ವಾರ್ಷಿಕೋತ್ಸವ

ಬ್ರಹ್ಮಾವರ:  ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಬ್ರಹ್ಮಾವರದ ಜಿ.ಎಂ ವಿದ್ಯಾನಿಕೇತನ್‌ ಪಬ್ಲಿಕ್‌ ಸ್ಕೂಲ್‌ನ ವಾರ್ಷಿಕೋತ್ಸವ ಇದೇ ತಿಂಗಳ 27 ಮತ್ತು 28ರಂದು ಜಿಎಂ ಚಾತ್ರಾ ಛಾಯಾದಲ್ಲಿ ನಡೆಯಲಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಅದೇ ರೀತಿ ಜಿ ಎಂ ಗ್ಲೋಬಲ್‌ ಸ್ಕೂಲ್‌ನ ನಾಲ್ಕನೇ ವಾರ್ಷಿಕೋತ್ಸವ ನವೆಂಬರ್‌ 30, ಭಾನುವಾರ ನಡೆಯಲಿದೆ. The annual day celebration of G.M. Vaidyanathan Public School, Brahmavar, a prestigious educational institution in Karnataka, will be held on the 27th and 28th of this month at the GM Chhatra Chhaya Auditorium, the school management said. Similarly, the fourth anniversary of G.M. Global School will be held on Sunday, November 30.

27ರ ಗುರುವಾರದಂದು ಪ್ರಿ ನರ್ಸರಿ, ಎಲ್‌ ಕೆ ಜಿ, ಯುಕೆಜಿ ಮತ್ತು 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ತನಕ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್‌ ಜಿಲ್ಲಾ ಗವರ್ನರ್‌ ಸಪ್ನಾ ಸುರೇಶ್‌ ಅವರು ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 3:30 ರಿಂದ ಸಂಜೆ 8:30ರ ವೆರೆಗೆ 3, 5, 7 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಸಿದ್ಧ ಕಣ್ಣಿನ ಆಸ್ಪತ್ರೆ, ಪ್ರಸಾದ್‌ ನೇತ್ರಾಲಯ ಸಮೂಹ ಆಸ್ಪತ್ರೆಗಳ ಮೆಡಿಕಲ್‌ ಡೈರೆಕ್ಟರ್‌ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಉಡುಪಿ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್‌ ಕುಡ್ಲು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಜಿ.ಎಂ. ವಿದ್ಯಾನಿಕೇತನ್‌‌ ಪಬ್ಲಿಕ್‌ ಸ್ಕೂಲ್‌ ಪ್ರಾಂಶುಪಾಲರಾದ ಜಾರ್ಜ್‌ ಕುರಿಯನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಾರ್ಷಿಕೋತ್ಸವರ ಎರಡನೇ ದಿನ, ನವೆಂಬರ್‌ 28, ಶುಕ್ರವಾರ, 4, 6, 8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್‌ ಭೋಜ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಜಿ.ಎ. ಶಿಕ್ಷಣ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಪ್ರಕಾಶ್‌ಚಂದ್ರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಎಂ ಗ್ಲೋಬಲ್‌ ಸ್ಕೂಲ್‌ನ 4ನೇ ವಾರ್ಷಿಕೋತ್ಸವ:

ನವೆಂಬರ್‌ 30ರ ಭಾನುವಾರ ಜಿಎಂ ಗ್ಲೋಬಲ್‌ ಸ್ಕೂಲ್‌ನ ವಾರ್ಷಿಕೋತ್ಸವ ನಡೆಯಲಿದೆ. ಬೆಳಿಗ್ಗೆ 10.30 ರಿಂದ 12.30ರ ವರೆಗೆ ವಾರ್ಷಿಕ ಬಹುಮಾನ ವಿತರಣೆ ನಡೆಯಲಿದ್ದು, ಉಡುಪಿಯ ಎ ಜಿ ಅಸೋಸಿಯೇಟ್ಸ್‌ನ ಮುಖ್ಯ ಕನ್ಸಲ್ಟೆಂಟ್‌ ಎಂ. ಗೋಪಾಲ್‌ ಭಟ್‌ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಿದ್ದಾರೆ.

ಅಪರಾಹ್ನ 3 ಗಂಟೆಯಿಂದ 7:30ರ ವರೆಗೆ ನಡೆಯಲಿರುವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದಾವಣಗೆರೆ ಹರಿಹರ ಅರ್ಬನ್‌ ಡೆವಲಪ್‌ಮೆಂಟ್‌ ಅಥಾರಿಟಿ (DHUDA) ಚೇರ್ಮನ್‌ ದಿನೇಶ್‌ ಕೆ. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜಿ.ಎಂ. ಗ್ಲೋಬಲ್‌ ಎಜುಕೇಷನಲ್‌ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಪ್ರಣವ್‌ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.


administrator