ಅಮೆರಿಕ ಕ್ರಿಕೆಟ್: ಒಂದೇ ತಂಡದಲ್ಲಿ ಕರ್ನಾಟಕದ ಆರು ಆಟಗಾರರು
ಬೆಂಗಳೂರು: 1996-97ರಲ್ಲಿ ಭಾರತ ತಂಡದಲ್ಲಿ ಕರ್ನಾಟಕದ ಏಳು ಆಟಗಾರರು ಸ್ಥಾನ ಪಡೆಇದರುವುದನ್ನು ಕೇಳಿದ್ದೇವೆ. ಆ ಪರಿಸ್ಥಿತಿ ಈಗ ಅಥವಾ ಮುಂದಿನ ದಿನಗಳಲ್ಲಿ ನಿರೀಕ್ಷಿಸುವುದು ಕಷ್ಟ ಸಾಧ್ಯ. ಆದರೆ ಮೈನರ್ ಲೀಗ್ ಕ್ರಿಕೆಟ್ ಸೂಪರ್ ಲೀಗ್‌ನಲ್ಲಿ ಕರ್ನಾಟಕದ ಐವರು ಆಟಗಾರರು ಒಂದೇ ತಂಡದಲ್ಲಿ ಆಡುತ್ತಿರುವುದು ಕನ್ನಡಿಗರ ಹೆಮ್ಮೆAmerican cricket: Six Karnataka players in one team
ಕರ್ನಾಟಕದಲ್ಲಿ ಪ್ರಮುಖ ಲೀಗ್ ಪಂದ್ಯಗಳನ್ನಾಡಿ, ಈಗ ಅಮೆರಿಕದಲ್ಲಿ ನೆಲೆಸಿರುವ ಸುಜಿತ್ ಗೌಡ ಅವರು ಈಗ ಅಲ್ಲಿಯ ಅನುಭವಿ ಆಟಗಾರ. ಮೈನರ್ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದೇ ರೀತಿ ಭಾರತದ ಅನೇಕ ಯುವ ಆಟಗಾರರು ಈಗ ಅಮೆರಿಕದಲ್ಲಿ ಉದ್ಯೋಗದ ಮಾಡಿಕೊಂಡು ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯ ಅಮೆರಿಕದಲ್ಲಿ ಮೈನರ್ ಲೀಗ್ ಪಂದ್ಯ ನಡೆಯುತ್ತಿದೆ. ಈ ಲೀಗ್‌ನಲ್ಲಿ ಆಡುತ್ತಿರುವ ತಂಡಗಳಲ್ಲಿ ಈಸ್ಟ್ ಬೇ ಬ್ಲೇಜರ್ಸ್ ಕೂಡ ಒಂದು. ಈ ತಂಡದಲ್ಲಿ ಕರ್ನಾಟಕದ ಆರು ಆಟಗಾರರು ಆಡುತ್ತಿರುವುದು ವಿಶೇಷ. ಸಂಜಯ್ ಕೃಷ್ಣಮೂರ್ತಿ(Sanjay Krishanmurthy) ಸಾಯಿದೀಪ್ ಗಣೇಶ್ (Saideep Ganesh), ರುಷಿಲ್ ಉಗಾರ್ಕರ್, (Rushil Ugarkar), ಹರಿಕೃಷ್ಣನ್ ನಾಯರ್ (Harikrishnan Nayar), ಅಭಿಷೇಕ್ ಪ್ರಭಾಕರ್ (Abhishek Prabhakar) ಹಾಗೂ ಸುಜಿತ್ ಗೌಡ (Sujith Gowda) ತಂಡದಲ್ಲಿರುವ ಕರ್ನಾಟಕದ ಆಟಗಾರರು.
ಎಂಎಲ್‌ಸಿಯಲ್ಲಿ ಸಂಜಯ್ ಸ್ಯಾನ್‌ಫ್ರಾನ್ಸಿಸ್ಕೋ ತಂಡದ ಪರ ಆಡುತ್ತಿದ್ದಾರೆ. ಅದೇ ರೀತಿ ಅಮೆರಿಕ ತಂಡದ ಪರವೂ ಆಡುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಸಂಜಯ್ U16 ಹಂತದಲ್ಲಿ ಆಡುತ್ತಿದ್ದರು. ಸಾಯಿದೀಪ್ ಗಣೇಶ್ ಬೆಂಗಳೂರಿನಲ್ಲಿ ವಲ್ಚರ್ಸ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದು, ವಲಯ ಮಟ್ಟದ ಪಂದ್ಯಗಳಲ್ಲಿ ಆಡಿದ್ದರು.
ರಶಿಲ್ ಸದ್ಯ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ಪರ ಆಡುತ್ತಿದ್ದು, ಹಿಂದೆ ಕರ್ನಾಟಕದಲ್ಲಿ ವಲಯ ಮಟ್ಟದಲ್ಲಿ ಆಡಿದ್ದರು. ಬೆಂಗಳೂರಿನಲ್ಲಿ ಆಡುತ್ತಿದ್ದ ಹರಿಕೃಷ್ಣನ್ ಈಗ ಮೈನರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಅಭಿಷೇಕ್ ಪ್ರಭಾಕರ್ ಬೆಂಗಳೂರಿನಲ್ಲಿರುವಾಗ ವಲಯ ಮಟ್ಟದಲ್ಲಿ ಆಡುತ್ತಿದ್ದು ಅಮೆರಿಕಕ್ಕೆ ತೆರಳಿದ ಬಳಿಕ ವಾಷಿಂಗ್ಟನ್ ಫ್ರೀಡಂ ಪರ ಆಡುತ್ತಿದ್ದಾರೆ. ಅಲ್ಲದೆ ಅಮೆರಿಕದ ಪರವೂ ಆಡಿದ್ದಾರೆ.
ಅನುಭವಿ ಆಟಗಾರ ಸಜಿತ್ ಗೌಡ ಬೆಂಗಳೂರಿನವರು ಹಲವಾರು ವರ್ಷಗಳಿಂದ ಅಮೆರಿಕದಲ್ಲಿದ್ದು, ಓದು, ವೃತ್ತಿ ಇವುಗಳ ನಡುವೆ ಕ್ರಿಕೆಟ್ ಆಡುತ್ತಿದ್ದು, ಮೈನರ್ ಲೀಗ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

