ರಾಷ್ಟ್ರೀಯ ಆಟ್ಯ ಪಾಠ್ಯ: ಚಂದರಗಿ ಕ್ರೀಡಾ ಶಾಲೆಗೆ ಕಂಚಿನ ಪದಕ
ಚಂದರಗಿ: ಮಹಾರಾಷ್ಟ್ರದ ಮಲ್ಕಾಪುರದಲ್ಲಿ ಇದೇ ತಿಂಗಳ 19 ರಿಂದ 21ರ ವರೆಗೆ ನಡೆದ 32ನೇ ಬಾಲಕರ ರಾಷ್ಟ್ರೀಯ ಸಬ್ ಜೂನಿಯರ್ ಆಟ್ಯ ಪಾಠ್ಯ ಚಾಂಪಿಯನ್ಷಿಪ್ನಲ್ಲಿ ಕರ್ನಾಟವನ್ನು ಪ್ರತಿನಿಧಿಸಿದ್ದ ಬೆಳಗಾವಿಯ ಚಂದರಗಿ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Students from Chandaragi Sports School in Belgaum, who represented Karnataka in the 32nd Boys’ National Sub-Junior Atya Pathya Championship, have brought glory to the state by winning a bronze medal.
ಶಿಕ್ಷಣ ಹಾಗೂ ಕ್ರೀಡೆಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತಿರುವ ದೇಶದ ಮೊದಲ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರರವಾಗಿರುವ ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚಂದರಗಿ ಕ್ರೀಡಾ ಶಾಲೆಯಲ್ಲಿ ಒಟ್ಟು 16 ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತಿದೆ. ಅವುಗಳಲ್ಲಿ ದೇಶೀಯ ಕ್ರೀಡೆಯಾಗಿರುವ ಆಟ್ಯ ಪಾಠ್ಯ ಕೂಡ ಒಂದು.
ತಂಡ ಪ್ರಶಸ್ತಿ ಗೆಲ್ಲುವಲ್ಲಿ ತಂಡದ ಕೋಚ್ ಎಲ್.ಸಿ. ಲಮಾಣಿ ಹಾಗೂ ಮ್ಯಾನೇಜರ್ ಕೆ. ಟಿ ನಾದಮಣಿ ಅವರ ಪಾತ್ರ ಪ್ರಮುಖವಾಗಿದೆ. ಕ್ರೀಡಾಪಟುಗಳ ಸಾಧನೆಗೆ ಶಾಲೆಯ ಸಂಸ್ಥಾಪಕರಾದ ಎಸ್. ಎಂ. ಕಲೂತಿ ಹಾಗೂ ಅಧ್ಯಕ್ಷರಾದ ಮೃಣಾಲಿನಿ ಎಸ್. ಬಿ. ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕಂಚಿದ ಪದಕ ಗೆದ್ದ ತಂಡದ ಆಟಗಾರರು: ಪ್ರದೀಪ್, ರಿಹಾನ್, ಶ್ರೇಯಸ್, ಶ್ರೀಧರ್, ಜಯಸೂರ್ಯ, ಗಂಗಾಧರ್, ಚನ್ನಬಸಪ್ಪ, ಮಲ್ಲಿಕಾರ್ಜುನ, ಅಜಯ್, ಅಜಯ್ ಎಲ್. ವೈಭವ್, ಬಸವರಾಜ್, ಉಮೇಶ್, ಜೀವನ್, ಯಾಸೀನ್.
ಕೋಚ್: ಎಲ್.ಸಿ. ಲಮಾಣಿ,
ಮ್ಯಾನೇಜರ್; ಕೆ. ಟಿ. ನಾದಮಣಿ

