ಇತಿಹಾಸ ನೋಡಿದರೆ CSK ಫೇವರಿಟ್, ಆದರೆ RCB ಗೆಲ್ಲುವ ಕುದುರೆ!
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಇತಿಹಾಸವನ್ನು ಅವಲೋಕಿಸಿದಾಗ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವ ಫೇವರಿಟ್. 2008ರಲ್ಲಿ ಮೊದಲ ಬಾರಿಗೆ ಚೆಪಾಕ್ನಲ್ಲಿ ಗೆದ್ದ ನಂತರ ಆರ್ಸಿಬಿ ಮತ್ತೆ ಗೆದ್ದಿರಲಿಲ್ಲ. ಆದರೆ ಈ ಬಾರಿ ಆರ್ಸಿಬಿ ಪಡೆ ಹಿಂದಿನಂತಿಲ್ಲ. ಫೇವರಿಟ್ಗಳನ್ನೇ ಸೋಲಿಸುವ ಸಾಮರ್ಥ್ಯ ಹೊಂದಿದೆ. At Chidambaram Chennai Super Kings may favorite, but Royal Challengers Bengaluru this time match winner.
ಇತ್ತಂಡಗಳು ಮೊದಲ ಪಂದ್ಯದಲ್ಲಿ ಬಲಿಷ್ಠ ತಂಡಗಳ ವಿರುದ್ಧ ಜಯ ಗಳಿಸಿವೆ. ಕೋಲ್ಕೋತ ನೈಟ್ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಜಯ ಗಳಿಸಿದರೆ, ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್ಕೆ ಜಯ ಕಂಡಿತ್ತು.
ಅನುಭವಿ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ಹಾಗೂ ಆರ್. ಅಶ್ವಿನ್ ಅವರಿಂದ ಕೂಡಿರುವ ಸಿಎಸ್ಕೆ ಮತ್ತು ಸ್ಪಿನ್ ಬೌಲರ್ಗಳಿಗೆ ನೆರವಾಗುವ ಚಿದಂಬರಂ ಕ್ರೀಡಾಂಗಣ ಜೊತೆಯಲ್ಲಿ ಮನೆಯಂಗಣದ ಪ್ರೇಕ್ಷಕರ ಬೆಂಬಲ ಸಿಎಸ್ಕೆ ಪಾಲಿಗೆ ಫೇವೆರಿಟ್. ಅದೇ ರೀತಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ಕ್ರುನಾಲ್ ಪಾಂಡ್ಯ, ಹೆಜಲ್ವುಡ್ ಹಾಗೂ ಲಿವಿಂಗ್ ಸ್ಟೋನ್ ಅವರಿಂದ ಕೂಡಿರುವ ಆರ್ಸಿಬಿ ಯಾವುದೇ ಸವಾಲನ್ನು ಎದುರಿಸಲು ಸಮರ್ಥವಾಗಿ ಸಜ್ಜಾಗಿದೆ.
ಇದುವರೆಗೂ ಇತ್ತಂಡಗಳು 33 ಬಾರಿ ಮುಖಾಮುಖಿಯಾಗಿದ್ದು, ಸಿಎಸ್ಕೆ 21 ಬಾರಿ ಗೆದ್ದರೆ, ಆರ್ಸಿಬಿ 11 ಬಾರಿ ಗೆದ್ದಿದೆ, ಆದರೆ ಚೆನ್ನೈನಲ್ಲಿ ಆರ್ಸಿಬಿ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಐಪಿಎನ್ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ತಂಡದ ಆಟಗಾರರಿಗಿಂತ ಅಭಿಮಾನಿಗಳ ನಡುವಿನ ಟೀಕೆ ನೋಡಬೇಕಾದರೆ ಸೋಷಿಯಲ್ ಮೀಡಿಯಾವನ್ನು ನೋಡಬೇಕು. ಅದು ಭಾರತ-ಪಾಕಿಸ್ತಾನಕ್ಕಿಂತಲೂ ಹೆಚ್ಚು. ಟೀಮ್ ಇಂಡಿಯಾದ ವಿಷಯ ಬಂದಾಗ ಈ ಆಭಿಮಾನಿಗಳು ಒಂದಾಗುತ್ತಾರೆ, ಆದರೆ ಐಪಿಎಲ್ ಎಂದಾಕ್ಷಣ ಅಲ್ಲಿ ಜಿದ್ದಾಜಿದ್ದಿ ಆರಂಭವಾಗುತ್ತದೆ.