Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮಗನೊಂದಿಗೆ ಕೆಎಸ್‌ಸಿಎ 3ನೇ ಡಿವಿಜನ್‌ ಆಡಿದ ರಾಹುಲ್‌ ದ್ರಾವಿಡ್‌

ಬೆಂಗಳೂರು: ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಈಗ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ರಾಹುಲ್‌ ದ್ರಾವಿಡ್‌ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮೂರನೇ ಡಿವಿಜನ್‌ ಪಂದ್ಯದಲ್ಲಿ ಮಗನೊಂದಿಗೆ ಆಡಿ ಕ್ರಿಕೆಟ್‌ ಅಭಿಮಾನಿಗಳಿಗೆ ಸಂಭ್ರಮವನ್ನುಂಟು ಮಾಡಿದರು. Indian cricket Team Former captain Rahul Dravid plays KSCA 3rd Division with son Anvay.

ನಸ್ಸರ್‌ ಸ್ಮಾರಕ ಶೀಲ್ಡ್‌ಗಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ವಿಜಯ ಕ್ರಿಕೆಟ್‌ ಕ್ಲಬ್‌ ಮಾಲೂರು ಪರ ಮಗ ಅನ್ವಯ್‌ ದ್ರಾವಿಡ್‌ ಜೊತೆ ಆಡಿದ ದ್ರಾವಿಡ್‌ ಕೇವಲ 10 ರನ್‌ ಗಳಿಸಿದರು. ಆರನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿದ ದ್ರಾವಿಡ್‌ ಅವರ ಇನ್ನಿಂಗ್ಸ್‌ನಲ್ಲಿ ಒಂದು ಬೌಂಡರಿ ಸೇರಿತ್ತು. ಅನ್ವಯ್‌ 60 ಎಸೆತಗಳಲ್ಲಿ 58 ರನ್‌ ಗಳಿಸಿದರು. ಇದರಲ್ಲಿ 8 ಬೌಂಡರಿ ಸೇರಿತ್ತು. ಯಂಗ್‌ ಲಯನ್ಸ್‌ ಕ್ಲಬ್‌ ಪರ ವಿಜಯ ಕ್ರಿಕೆಟ್‌ ಕ್ಲಬ್‌ 7 ವಿಕೆಟ್‌ ನಷ್ಟಕ್ಕೆ 345 ರನ್‌ ಗಳಿಸಿತು. ತಂಡದ ಪರ ಸ್ವಪ್ನಿಲ್‌ 107 ರನ್‌ ಗಳಿಸಿ ಬೃಹತ್‌ ಮೊತ್ತಕ್ಕೆ ನೆರವಾದರು. ಸ್ವಪ್ನಿಲ್‌ ಕೇವಲ 50 ಎಸೆತಗಳನ್ನೆದುರಿಸಿ 12 ಬೌಂಡರಿ ಹಾಗೂ 4 ಸಿಕ್ಸರ್‌‌ ನೆರವಿನಿಂದ ಶತಕ ಪೂರ್ಣಗೊಳಿಸಿದರು.


administrator