10 ವರ್ಷಗಳ ಹಿಂದೆ ಕ್ರಿಕೆಟ್ ಫ್ಯಾನ್, ಇಂದು ಶತಕ ಸಿಡಿಸಿದ ಓವೆನ್
ಮೆಲ್ಬೋರ್ನ್: ಬಿಗ್ಬ್ಯಾಶ್ ಲೀಗ್ ಫೈನಲ್ನಲ್ಲಿ ಹೊಬಾರ್ಟ್ ಹರಿಕೇನ್ಸ್ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಅದ್ಭುತ ಪ್ರದರ್ಶನ ತೋರಿದ ಆಲ್ರೌಂಡರ್ ಮಿಚೆಲ್ ಓವೆನ್ ಒಂದೇ ದಿನದಲ್ಲಿ ಕ್ರಿಕೆಟ್ ಜಗತ್ತಿನ ಹೊಸ ತಾರೆಯಾಗಿ ಹೊರ ಹೊರಹೊಮ್ಮಿದ್ದಾರೆ. Mitchell Owen from being in the Crowd cheering for Hobart Hurricanes to Powering them towards their first BBL title.
ಹತ್ತು ವರ್ಷಗಳ ಹಿಂದೆ ಅದೇ ನಿಂಜಾ ಕ್ರೀಡಾಂಗಣದಲ್ಲಿ ಹೊಬಾರ್ಟ್ ಹರಿಕೇನ್ ತಂಡ ಗೆದ್ದಾಗಲೆಲ್ಲ ಸಂಭ್ರಮಿಸುತ್ತ, ಸೋತಾಗಲೆಲ್ಲ ಕಣ್ಣೀರಿಡುತ್ತ ಮನೆ ಸೇರುತ್ತಿದ್ದ ಮಿಚೆಲ್ ಓವೆನ್ ನಿನ್ನೆಯ ಫೈನಲ್ ಪಂದ್ಯದಲ್ಲಿ ತನ್ನೆಲ್ಲ ನೋವಿಗೆ ಪರಿಹಾರ ಕಂಡುಕೊಂಡರು. ಆರಂಭಿಕ ಆಟಗಾರನಾಗಿ ಅಂಗಣಕ್ಕಿಳಿದ ಓವೆನ್ 108 ರನ್ ಸಿಡಿಸಿ ಜಯ ತಂದಿತ್ತರಲ್ಲದೆ, ಬಿಗ್ ಬ್ಯಾಷನ್ಲ್ಲಿ ಅತ್ಯಂತ ವೇಗದ ಶತಕವೊಂದನ್ನು ದಾಖಲಿಸಿದರು. ಅವರ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ 11 ಸಿಕ್ಸರ್ ಸೇರಿತ್ತು. 39 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ಓವೆನ್ ಬಿಗ್ ಬ್ಯಾಷ್ನ ಅತ್ಯಂತ ವೇಗದ ಶತಕ ಗಳಿಕೆಯಲ್ಲಿ ಸಿಮ್ಸನ್ ಅವರೊಂದಿಗೆ ದಾಖಲೆ ಹಂಚಿಕೊಂಡರು. ಸಿಡ್ನಿ ಥಂಡರ್ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ಓವೆನ್ ಅವರ ಅಬ್ಬರದ ಆಟದಿಂದಾಗಿ ಹರಿಕೇನ್ಸ್ ಕೇವಲ 14.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.