Thursday, September 12, 2024

ಬಾಲ್ ಟ್ಯಾಂಪರಿಂಗ್: ಕಾಂಗರೂಗಳ ಕಳ್ಳಾಟದ ಬಗ್ಗೆ ಕ್ರಿಕೆಟ್ ದೇವರು ಹೇಳಿದ್ದೇನು?

ಬೆಂಗಳೂರು: ಬಾಲ್ ಟ್ಯಾಂಪರಿಂಗ್ ನಡೆಸಿ ಕ್ರಿಕೆಟ್ ಜಗತ್ತಿನ ಮುಂದೆ ಬೆತ್ತಲಾಗಿರುವ ಕಾಂಗರೂಗಳ ವಿರುದ್ಧ ಎಲ್ಲೆಡೆ ಟೀಕೆಗಳು ಕೇಳಿ ಬರುತ್ತಿವೆ. ಕಳ್ಳಾಟವಾಡಿದರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಮೇಲೆ ಒಂದು ವರ್ಷ ನಿಷೇಧ ಹೇರಿದೆ. ಬಾಲ್ ಟ್ಯಾಂಪರಿಂಗ್ ನಡೆಸಿದ್ದ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಅವರ ಮೇಲೆ 9 ತಿಂಗಳು ನಿಷೇಧ ಹೇರಲಾಗಿದೆ.

PC: Twitter/Dale Steyn

ಕಾಂಗರೂಗಳ ಬಾಲ್ ಟ್ಯಾಂಪರಿಂಗ್ ಪ್ರಕರಣದ ಕುರಿತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದೇ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಕಳ್ಳಾಟವಾಡಿದವರ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾ ಸರಿಯಾದ ಕ್ರಮವನ್ನೇ ಕೈಗೊಂಡಿದೆ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

PC: Twitter/Sachin Tendulkar

ಕ್ರಿಕೆಟ್ ಜಂಟಲ್‌ಮ್ಯಾನ್ ಗೇಮ್ ಎಂದು ಖ್ಯಾತಿ ಪಡೆದಿದೆ. ಈ ಕ್ರೀಡೆಯನ್ನು ಶುದ್ಧವಾಗಿ ಆಡಬೇಕೆಂದು ನಾನು ನಂಬಿದ್ದೇನೆ. ಏನು ನಡೆದಿದೆಯೋ ಅದು ದುರದೃಷ್ಠಕರ. ಆದರೆ ಕ್ರೀಡೆಯ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸರಿಯಾದ ನಿರ್ಧಾರವನ್ನೇ ಕೈಗೊಳ್ಳಲಾಗಿದೆ. ಗೆಲುವು ಮುಖ್ಯ. ಆದರೆ ಯಾವ ರೀತಿ ಗೆದ್ದಿದ್ದೀರಿ ಎಂಬುದು ತುಂಬಾ ಮುಖ್ಯ.
– ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ.

ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿರುವ ಕಾರಣಕ್ಕೆ ಸ್ಮಿತ್, ವಾರ್ನರ್ ಹಾಗೂ ಬ್ಯಾಂಕ್ರಾಫ್ಟ್ ವಿರುದ್ಧ ಕ್ರಿಕೆಟ್ ಆಸ್ಟ್ರೇಲಿಯಾ ಕಠಿಣ ಕ್ರಮ ಜರುಗಿಸಿದೆ.

Related Articles