Thursday, October 10, 2024

ರಾಷ್ಟ್ರೀಯ ಈಜು: ಮೊದಲ ದಿನ ಕರ್ನಾಟಕ ಮೇಲುಗೈ

ಮಂಗಳೂರು: ಇಲ್ಲಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಮಂಗಳವಾರ ಆರಂಭಗೊಂಡ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಒಟ್ಟು 6 ಚಿನ್ನದ ಪದಕಗಳನ್ನು ಗೆದ್ದುಕೊಂಡ ಕರ್ನಾಟಕ ಪದಕಗಳ ಪಟ್ಟಿಯಲ್ಲಿ ಮೇಲುಗೈ ಸಾಧಿಸಿದೆ. 77 Senior National Aquatic Championship Karnataka dominates Day one.

ಪುರುಷರ 400ಮೀ ಫ್ರೀ ಸ್ಟೈಲ್‌ನಲ್ಲಿ ಕರ್ನಾಟಕದ ಅನೀಶ್‌ ಗೌಡ 3: ನಿ. 56.59 ಸೆಕೆಂಡುಗಳಲ್ಲಿ  ಗುರಿ ತಲುಪಿ ಚಿನ್ನ ಗೆದ್ದರು. ಇದೇ ವಿಭಾಗದಲ್ಲಿ ಕರ್ನಾಟಕದ ದರ್ಶನ್‌ 4 ನಿಮಿಷ 01.39 ಸೆಕೆಂಡುಗಳಲ್ಲಿ ಬೆಳ್ಳಿ ಗೆದ್ದರು. ರೇಲ್ವೆಯ ದೇವಾಂಶ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ವನಿತೆಯ 400 ಮೀ. ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಹರ್ಶಿಕಾ ರಾಮಚಂದ್ರ 4 ನಿಮಿಷ 24.70 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ದಿಲ್ಲಿಯ ವೃತ್ತಿ ಅಗರ್ವಾಲ್‌ ಬೆಳ್ಳಿ ಗೆದ್ದರು. ಕರ್ನಾಟಕದ ಭವ್ಯ ಸಚ್‌ದೇವ್‌ ಕಂಚಿನ ಪದಕ ಗೆದ್ದರು.

ಪುರುಷರ 200 ಮೀ ಬ್ಯಾಕ್‌ ಸ್ಟ್ರೋಕ್‌ನಲ್ಲಿ ತಮಿಳುನಾಡಿನ ಧನುಷ್‌ ಚಿನ್ನ ಗೆದ್ದರೆ, ಕರ್ನಾಕಟದ ಮಣಿಕಂಠ ಎಲ್‌. ಬೆಳ್ಳಿ ಪದಕ ಗೆದ್ದರು. ವನಿತೆಯರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ತನ್ಯಾ ಶಡಕ್ಷರಿ ಚಿನ್ನ ಗೆದ್ದರೆ, ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಆಕಾಶ್‌ ಮಣಿ ಬಂಗಾರ ತಮ್ಮದಾಗಿಸಿಕೊಂಡರು. ವನಿತೆಯರ 50ಮೀ. ಬಟರ್‌ಫ್ಲೈನಲ್ಲಿ ಮಾನ್ವಿ ವರ್ಮಾ ಬೆಳ್ಳಿ ಗೆದ್ದರು. 4×200 ಮೀ. ಫ್ರೀ ಸ್ಟೈಲ್‌ನಲ್ಲಿ ಕರ್ನಾಟಕ ಚಿನ್ನದ ಪದಕ ಗೆದ್ದುಕೊಂಡಿದೆ.

ಪುರುಷರ 200 ಮೀ, ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಕರ್ನಾಟಕದ ಮಣಿಕಂಠ ಎಲ್‌. ಬೆಳ್ಳಿ ಗೆದ್ದರೆ, ವನಿತೆಯರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ತನ್ಯಾ ಶಡಕ್ಷರಿ ಚಿನ್ನ ಗೆದ್ದರು. ಪುರುಷರ 100 ಮೀ, ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ಆಕಾಶ್‌ ಮಣಿ ಅಗ್ರ ಸ್ಥಾನ ಗಳಿಸಿ ಕರ್ನಾಟಕಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟರು. ವನಿತೆಯರ 50ಮೀ. ಬಟರ್‌ಫ್ಲೈನಲ್ಲಿ ಕರ್ನಾಟಕದ ಮಾನವಿ ವರ್ಮಾ ಬೆಳ್ಳಿ ಗೆದ್ದರು.

Related Articles