Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚಂದರಗಿ ಕ್ರೀಡಾ ಶಾಲೆಯಲ್ಲಿ ರಾಷ್ಟ್ರೀಯ ಆಟ್ಯ ಪಾಠ್ಯ

ಬೆಳಗಾವಿ: ಅಕ್ಟೋಬರ್‌ ತಿಂಗಳ 10 ರಿಂದ 12 ರವರೆಗೆ ಬೆಳಗಾಗಿ ಜಿಲ್ಲೆಯ ರಾಮದುರ್ಗಾ ತಾಲೂಕಿನ ಚಂದರಗಿಯಲ್ಲಿರುವ ಎಸ್‌. ಎಂ. ಕಲುತಿ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ, ಕರ್ನಾಟಕ ಆಟ್ಯ-ಪಾಠ್ಯ ಸಂಸ್ಥೆ (ರಿ) ದಾವಣಗೆರೆ ಇವರ ನೆರವಿನೊಂದಿಗೆ 38ನೇ ಪುರುಷರರ ಹಾಗೂ 34ನೇ ಮಹಿಳೆಯರ ರಾಷ್ಟ್ರೀಯ ಆಟ್ಯ-ಪಾಠ್ಯ ಚಾಂಪಿಯನ್‌ಷಿಪ್‌ ನಡೆಯಲಿದೆ. 38th Men and 34th Women National Atya-Patya Championship will be held on October 10-12 2025 at S.M. Kaluti Composite Sports School Chandaragi.

ಆಟ್ಯ-ಪಾಠ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚಂದರಗಿ ಕ್ರೀಡಾ ಶಾಲೆಯು ದೇಶದ ಮೊದಲ ಕ್ರೀಡಾ ಶಾಲೆಯಾಗಿದ್ದು ಇಲ್ಲಿ ಕ್ರೀಡೆ ಹಾಗೂ ಪಾಠಕ್ಕೆ ಸಮಾನ ಪ್ರಾಮುಖ್ಯವತೆಯನ್ನು ನೀಡಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಹಲವು ಕ್ರೀಡಾಕೂಟಗಳನ್ನು ಆಯೋಜಿಸಿ ಖ್ಯಾತಿ ಪಡೆದಿರುವ ಚಂದರಗಿ ಕ್ರೀಡಾ ಶಾಲೆಯು ಮತ್ತೊಂದು ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲು ಸಜ್ಜಾಗಿದೆ.

ಅಕ್ಟೋಬರ್‌ 10 ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್‌ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಆಟ್ಯ-ಪಾಠ್ಯ ಸಂಘಟನೆಯ ಅಧ್ಯಕ್ಷರಾದ ಬಸವರಾಜ್‌ ಎಸ್.‌ ಹೊರಟ್ಟಿ ಅವರು ಮುಖ್ಯಾತಿಥಿಗಳಾಗಿ ಭಾಗವಹಿಸುವರು.  

ವಿಧಾನಸಭಾ ಮುಖ್ಯಸಚೇತಕರು ಹಾಗೂ ರಾಮದುರ್ಗ ಶಾಸಕರಾದ ಅಶೋಕ್‌ ಎಂ. ಪಟ್ಟಣ್‌ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.

ಚಂದರಗಿಯ ಕ್ರೀಡಾ ಉತ್ತೇಜನ ಮತ್ತು ಅಭಿವೃದ್ಧಿ ಸಹಕಾರ ನಿಯಮಿತ ಇದರ ಅಧ್ಯಕ್ಷರಾದ ಮೃಣಾಲಿನಿ ಎಂ. ಪಟ್ಟಣ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್‌ ಆರ್‌. (ಐಪಿಎಸ್‌) ಅವರು ಗೌರವ ಅಧ್ಯಕ್ಷರಾಗಿ ಪಾಲ್ಗೊಳ್ಳುವರು. ಚಂದರಗಿಯ ಕ್ರೀಡಾ ಉತ್ತೇಜನ ಮತ್ತು ಅಭಿವೃದ್ಧಿ ಸಹಕಾರ ನಿಯಮಿತ ಇದರ ಉಪಾಧ್ಯಕ್ಷರಾದ ಮಹೇಶ್‌ ಎ. ಭಾತೆ. ಭಾರತೀಯ ಆಟ್ಯ-ಪಾಠ್ಯ ಅಸೋಸಿಯೇಷನ್‌ನ ಹಂಗಾಮಿ ಅಧ್ಯಕ್ಷ ವಿ, ಶಿವಕುಮಾರ್‌, ಭಾರತೀಯ ಆಟ್ಯ-ಪಾಠ್ಯ ಫೆಡರೇಷನ್‌ನ ಕಾರ್ಯದರ್ಶಿ ಡಿ.ಪಿ. ಕವೀಶ್ವರ್‌ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಅಕ್ಟೋಬರ್‌ 12 ರಂದು ಬೆಳಿಗ್ಗೆ 10:30ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೈಲಹೊಂಗಲ ಸಹಾಯಕ ಕಮಿಷನರ್‌ ಪ್ರವೀಣ್‌ ಜೈನ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಚಂದರಗಿಯ ಕ್ರೀಡಾ ಉತ್ತೇಜನ ಮತ್ತು ಅಭಿವೃದ್ಧಿ ಸಹಕಾರ ನಿಯಮಿತ ಇದರ ಅಧ್ಯಕ್ಷರಾದ ಮೃಣಾಲಿನಿ ಎಂ. ಪಟ್ಟಣ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಚಂದರಗಿಯ ಕ್ರೀಡಾ ಉತ್ತೇಜನ ಮತ್ತು ಅಭಿವೃದ್ಧಿ ಸಹಕಾರ ನಿಯಮಿತ ಇದರ ಉಪಾಧ್ಯಕ್ಷರಾದ ಮಹೇಶ್‌ ಎ. ಭಾತೆ. ಭಾರತೀಯ ಆಟ್ಯ-ಪಾಠ್ಯ ಅಸೋಸಿಯೇಷನ್‌ನ ಹಂಗಾಮಿ ಅಧ್ಯಕ್ಷ ವಿ, ಶಿವಕುಮಾರ್‌, ಭಾರತೀಯ ಆಟ್ಯ-ಪಾಠ್ಯ ಫೆಡರೇಷನ್‌ನ ಕಾರ್ಯದರ್ಶಿ ಡಿ.ಪಿ. ಕವೀಶ್ವರ್‌ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಈ ಕ್ರೀಡಾಕೂಟದ ಯಶಸ್ಸಿಗೆ ಚಂದರಗಿ ಕ್ರೀಡಾ ಶಾಲೆಯ ಸ್ಥಾಪಕ ಎಸ್‌.ಎಂ. ಕಲೂತಿ ಅವರು ಶುಭ ಹಾರೈಸಿದ್ದಾರೆ.


administrator