Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

28 ಬೌಂಡರಿ 15 ಸಿಕ್ಸರ್‌ 312 ರನ್‌ ಇದು ಕನ್ನಡಿಗ ಮೆಕ್‌ನೀಲ್‌ ದಾಖಲೆ!

ಬೆಂಗಳೂರು: ಕರ್ನಾಟಕ ಉದಯೋನ್ಮುಖ ಆಟಗಾರ ಉತ್ತರಾಖಂಡ್‌ ವಿರುದ್ಧದ U23 ಸಿ ಕೆ ನಾಯ್ಡು ಟ್ರೋಫಿಯಲ್ಲಿ ಕರ್ನಾಟಕದ ಆಟಗಾರ ಮೆಕ್‌ನೀಲ್‌ ಹ್ಯಾಡ್ಲಿ ನೊರೊನ್ಹಾ 312 ರನ್‌ ಗಳಿಸಿ ದಾಖಲೆಯ ಇನ್ನಿಂಗ್ಸ್‌ ಪ್ರದರ್ಶಿಸಿದ್ದಾರೆ. ಸತತ ಎರಡು ವರ್ಷಗಳಲ್ಲಿ ಎರಡು ತ್ರಿಶತಕ ದಾಖಲಿ ಸಾಧನೆ ಮಾಡಿದ್ದಾರೆ. 28 Fours and 15 Sixes 312 runs this is Kannadiga Macniel magic.

336 ಎಸೆತಗಳನ್ನು ಎದುರಿಸಿದ ಮೆಕ್‌ನೀಲ್‌ ಅವರ ಇನ್ನಿಂಗ್ಸ್‌ನಲ್ಲಿ 28 ಬೌಂಡರಿ, 15 ಸಿಕ್ಸರ್‌ ಸೇರಿತ್ತು. ಕೇವಲ ಬೌಂಡರಿ ಮತ್ತು ಸಿಕ್ಸರ್‌ನಲ್ಲೇ 202 ರನ್‌ ಪೂರ್ಣಗೊಳಸಿರುವ ಮೆಕ್‌ನೀಲ್‌ ಅವರ ಸ್ಟ್ರೈಕ್‌ ರೇಟ್‌ 92.86.

ಆಲೂರು ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೆಕ್‌ನೀಲ್‌ ಕೇವಲ ಬೌಂಡರಿ ಮೂಲಕ 112 ರನ್‌ ದಾಖಲಿಸಿದ್ದು ಸಿಕ್ಸರ್‌ ಮೂಲಕ 90 ರನ್‌ ಗಳಿಸಿದ್ದಾರೆ.

ಮೆಕ್‌ನೀಲ್‌ ಅವರ ತ್ರಿಶತಕದ ನೆರವಿನಿಂದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ನಷ್ಟಕ್ಕೆ 591 ರನ್‌ ಗಳಿಸಿ ಡೀಕ್ಲೇರ್‌ ಘೋಷಿಸಿತ್ತು. ತಂಡದ ಪರ ಇನ್ನೋರ್ವ ಆಟಗಾರ ಮೊನೀಶ್‌ ರೆಡ್ಡಿ ವೈ ಆರ್‌ 121 ರನ್‌ ಗಳಿಸಿ ಬೃಹತ್‌ ಮೊತ್ತಕ್ಕೆ ನೆರವಾದರು.

ಕಳೆದ ಬಾರಿಯ ಸಿಕೆ ನಾಯ್ಡು ಟ್ರೋಫಿಯಲ್ಲೂ ಮೆಕ್‌ನೀಲ್‌ ತ್ರಿಪುರಾ ವಿರುದ್ಧದ ಪಂದ್ಯದಲ್ಲೂ 345 ರನ್‌ ಗಳಿಸಿ ದಾಖಲೆ ಬರೆದಿದ್ದರು. ಅಂದು 348 ಎಸೆತಗಳನ್ನೆದುರಿಸಿದ ಮೆಕ್‌ನೀಲ್‌ ಅವರ ಇನ್ನಿಂಗ್ಸ್‌ನಲ್ಲಿ 23 ಬೌಂಡರಿ ಹಾಗೂ 25 ಸಿಕ್ಸರ್‌ ಸೇರಿತ್ತು. ಸ್ಟ್ರೈಕ್‌ ರೇಟ್‌ 99.14.


administrator