Tuesday, January 14, 2025

2025ರಲ್ಲಿ ದೇಶದಲ್ಲಿ ನಡೆಯುವ ಪ್ರಮುಖ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌

ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಎಎಫ್‌ಐ) ಆಶ್ರಯದಲ್ಲಿ ನಡೆಯುವ 2024ನೇ ಸಾಲಿನ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗಳು ಮುಕ್ತಾಯದ ಹಂತ ತಲುಪಿದೆ. ಇನ್ನು 2025ನೇ ಸಾಲಿನ ಕ್ರೀಡಾಕೂಟಗಳ ಕಡೆಗೆ ಗಮನ. ಬೆಂಗಳೂರಿನಲ್ಲಿ 2025ರ ಮಾರ್ಚ್‌ ತಿಂಗಳ 22 ರಂದು ಅಂಜು ಬಾಬಿ ಫೌಂಡೇಷನ್‌ ಆಶ್ರಯದಲ್ಲಿ ನಾಲ್ಕನೇ ಇಂಡಿಯನ್‌ ಓಪನ್‌ ಜಂಪ್ಸ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಆ ಮೂಲಕ ಬೆಂಗಳೂರಿನಲ್ಲಿ ವರ್ಷದ ಮೊದಲ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. 2025 Athletic Federation of India’s calendar to open with National Cross Country

2025 ಜನವರಿ:

ಜನವರಿ 12 ರಂದು ಉತ್ತರ ಪ್ರದೇಶದಲ್ಲಿ 59ನೇ ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌.

ಜನವರಿ 19 ರಂದು ಮುಂಬೈ ಮ್ಯಾರಥಾನ್‌.

ಫೆಬ್ರವರಿ:

ಹೈದರಾಬಾದ್‌ನಲ್ಲಿ 20ನೇ ರಾಷ್ಟ್ರೀಯ ಅಂತರ್‌ ಜಿಲ್ಲಾ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌, ದಿನಾಂಕವನ್ನು ಪ್ರಕಟಿಸಬೇಕಷ್ಟೆ.

ಫೆಬ್ರವರಿ 23 ರಂದು ಹೊಸದಿಲ್ಲಿಯಲ್ಲಿ ರಾಷ್ಟ್ರೀಯ ಮ್ಯಾರಥಾನ್‌.

ಮಾರ್ಚ್‌:

ಬಿಹಾರದ ಪಾಟ್ನಾದಲ್ಲಿ ಮಾರ್ಷ್‌ 18 ರಿಂದ 20 ರವರೆಗೆ ನ್ಯಾಷನಲ್‌ ಯೂತ್‌ ಚಾಂಪಿಯನ್‌ಷಿಪ್‌

ಮಾರ್ಚ್‌ 20ರಂದು ಮುಂಬೈಯ ರಿಲಯನ್ಸ್‌ ಅಕಾಡೆಮಿಯಲ್ಲಿ ನಾಲ್ಕನೇ ರಾಷ್ಟ್ರೀಯ ಮುಕ್ತ ಥ್ರೋ ಚಾಂಪಿಯನ್ಷಿಪ್‌.

ಮಾರ್ಚ್‌ 22 ರಂದು ಬೆಂಗಳೂರಿನ ಅಂಜು ಬಾಬಿ ಫೌಂಡೇಷನ್‌ನಲ್ಲಿ ನಾಲ್ಕನೇ ರಾಷ್ಟ್ರೀಯ ಮುಕ್ತ ಜಂಪ್‌ ಸ್ಪರ್ಧೆ.

ಮಾರ್ಚ್‌ 24 ರಂದು ತಿರುವನಂತಪುರದಲ್ಲಿ ಆರನೇ ರಾಷ್ಟ್ರೀಯ ಮುಕ್ತ 400 ಮೀ, ಓಟದ ಸ್ಪರ್ಧೆ.

ಮಾರ್ಚ್‌ 28 ರಂದು ಬೆಂಗಳೂರಿನಲ್ಲಿ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ 1.

ಏಪ್ರಿಲ್‌

ಏಪ್ರಿಲ್‌ 1 ರಂದು ಪಂಜಾಬ್‌ನ ಸಂಗ್ರೂರ್‌ನಲ್ಲಿ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಕೂಟ,

ಏಪ್ರಿಲ್‌ 5 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಕೂಟ.

ಏಪ್ರಿಲ್‌ 10 ರಂದು, ರಾಂಚಿಯಲ್ಲಿ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಕೂಟ.

ಏಪ್ರಿಲ್‌ 15 ರಂದು ಚೆನ್ನೈನಲ್ಲಿ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಕೂಟ.

ಏಪ್ರಿಲ್‌ 19 ರಂದು ಚಂಡೀಗಢದಲ್ಲಿ 12ನೇ ರಾಷ್ಟ್ರೀಯ ರೇಸ್‌ ವಾಕಿಂಗ್‌ ಚಾಂಪಿಯನ್‌ಷಿಪ್‌.

ಏಪ್ರಿಲ್‌ 21 ರಂದು ಚೆನ್ನೈನಲ್ಲಿ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಕೂಟ.

ಏಪ್ರಿಲ್‌ 21 ರಿಂದ 24, ಹರಿಯಾಣದ ಪಂಚಕುಲದಲ್ಲಿ ನ್ಯಾಷನಲ್‌ ಫೆಡರೇಷನ್‌ ಕಪ್‌ ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌.

ಏಪ್ರಿಲ್‌ 27 ರಂದು ಬೆಂಗಳೂರಿನಲ್ಲಿ TCS ವಿಶ್ವ 10K ಮ್ಯಾರಥಾನ್‌.

ಏಪ್ರಿಲ್‌ 30 ರಂದು ಚಂಡೀಗಢದಲ್ಲಿ ರಾಷ್ಟ್ರೀಯ ರಿಲೇ ಕಾರ್ನಿವಲ್‌.

ಮೇ:

ಮೇ 17 ರಂದು ತಿರುವನಂತಪುರದಲ್ಲಿ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌‌ 2,

ಮೇ 27-29 ರವರೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜೂನಿಯರ್‌ ಫೆಡರೇಷನ್‌ಕಪ್‌ ಅಥ್ಲೆಟಿಕ್ಸ್‌.

ಜೂನ್‌:

ಜೂನ್‌ 10 ರಿಂದ 20 ರವರೆಗೆ ರಾಜ್ಯ ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌. (ರಾಜ್ಯ ಮಟ್ಟದ ಅಥ್ಲೆಟಿಕ್ಸ್‌).

ಜುಲೈ

ಜುಲೈ 12 ರಂದು ಪುಣೆಯ ಎಎಸ್‌ಐನಲ್ಲಿ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌.

ಜುಲೈ 19 ರಂದು ಬಿಹಾರದ ಪಾಟ್ನಾದಲ್ಲಿ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಕೂಟ.

ಜುಲೈ 27 ರಂದು ಹಿಮಾಚಲ ಪ್ರದೇಶದಲ್ಲಿ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಕೂಟ.

ಜುಲೈ 28 ರಂದು ಬೆಂಗಳೂರಿನಲ್ಲಿ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಕೂಟ.

ಆಗಸ್ಟ್‌:

ಆಗಸ್ಟ್‌ 7 ರಂದು ನಾಲ್ಕನೇ ರಾಷ್ಟ್ರೀಯ ಜಾವೆಲಿನ್‌ ದಿನಾಚರಣೆ, (ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸುವುದು).

ಆಗಸ್ಟ್‌ 10 ರಂದು ಭುವನೇಶ್ವರದಲ್ಲಿ ಮೊದಲ ಇಂಡಿಯನ್‌ ಓಪನ್‌ ವಿಶ್ವ ಅಥ್ಲೆಟಿಕ್ಸ್‌ ಕಂಚಿನ ಹಂತದ ಕಾಂಟಿನೆಂಟಲ್‌ ಟೂರ್‌.

ಆಗಸ್ಟ್‌ 20 ರಿಂದ 24ರ ವರೆಗೆ ಚೆನ್ನೈನಲ್ಲಿ 64ನೇ ರಾಷ್ಟ್ರೀಯ ಅಂತರ್‌ ರಾಜ್ಯ ಹಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌.

ಸೆಪ್ಟೆಂಬರ್‌:

ಸೆಪ್ಟೆಂಬರ್‌ 9 ರಿಂದ 11 ರವರೆಗೆ ಪಾಂಡಿಚೆರಿಯಲ್ಲಿ ದಕ್ಷಿಣ ವಲಯ ಜೂನಿಯರ್‌‌ ರಾಜ್ಯ ಅಥ್ಲೆಟಿಕ್ಸ್‌ ಕೂಟ.

ಸೆಪ್ಟೆಂಬರ್‌ 14 ರಿಂದ 16 ರ ವರೆಗೆ ಉತ್ತರ ಪ್ರದೇಶದಲ್ಲಿ ಉತ್ತರ ವಲಯ ಅಥ್ಲೆಟಿಕ್ಸ್‌ ಕೂಟ.

ಸೆಪ್ಟೆಂಬರ್‌‌ 18 ರಿಂದ 20 ರ ವರೆಗೆ ಭೋಪಾಲ್‌ನಲ್ಲಿ ಕೇಂದ್ರ ವಲಯ ಅಥ್ಲೆಟಿಕ್ಸ್‌ ಕೂಟ.

ಸೆಪ್ಟೆಂಬರ್‌ 22 ರಿಂದ 24 ರವರೆಗೆ ರಾಂಚಿಯಲ್ಲಿ ಪೂರ್ವ ವಲಯ ಅಥ್ಲೆಟಿಕ್ಸ್‌ ಕೂಟ.

ಸೆಪ್ಟೆಂಬರ್‌ 27 ರಿಂದ 30 ರವೆರೆಗೆ ಪುಣೆ/ಬೆಂಗಳೂರಿನಲ್ಲಿ 64ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌.

ಅಕ್ಟೋಬರ್‌:

ಅಕ್ಟೋಬರ್‌ 2 ರಿಂದ 4 ರ ವರೆಗೆ ವಾರಂಗಲ್‌ನ ಹಾರ್ಮೊಂಡ್‌ನಲ್ಲಿ 5ನೇ ಇಂಡಿಯನ್‌ ಓಪನ್‌ U23 ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌.

ಅಕ್ಟೋಬರ್‌ 10 ರಿಂದ 14 ಭುವನೇಶ್ವರದಲ್ಲಿ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌.

ಅಕ್ಟೋಬರ್‌ 12 ದೆಹಲಿಯಲ್ಲಿ ವೇದಾಂತ ಡೆಲ್ಲಿ ಹಾಫ್‌ ಮ್ಯಾರಥಾನ್‌.

ನವೆಂಬರ್‌:

ಡಿಸೆಂಬರ್‌:

ಡಿಸೆಂಬರ್‌ 21 ರಂದು ಕೋಲ್ಕೊತಾದಲ್ಲಿ ಟಾಟಾ ಸ್ಟೀಲ್‌ ವಿಶ್ವ 25K ಮ್ಯಾರಥಾನ್‌.

Related Articles