20 ಗ್ರ್ಯಾನ್‌ಸ್ಲ್ಯಾಮ್‌ಗಳ ಸರದಾರ ರೋಜರ್ ಫೆಡರರ್ ಟಾರ್ಗೆಟ್ ನಂ.1 ಪಟ್ಟ

0
274
PC: Twitter/Roger Federer

ಪ್ಯಾರಿಸ್ : ವಿಶ್ವದಾಖಲೆಯ 20 ಗ್ರ್ಯಾನ್‌ಸ್ಲ್ಯಾಮ್‌ಗಳ ಸರದಾರ, ಸ್ವಿಟ್ಜರ್ಲೆಂಡ್‌ನ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಎಟಿಪಿ ವಿಶ್ವ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ ಪಟ್ಟವನ್ನು ಕೈವಶ ಮಾಡಿಕೊಳ್ಳುವತ್ತ ದಾಪುಗಾಲು ಹಾಕುತ್ತಿದ್ದಾರೆ.

PC: Twitter/Roger Federer

ಮುಂದಿನ ವಾರ ರಾಟರ್‌ಡ್ಯಾಮ್‌ನಲ್ಲಿ ನಡೆಯಲಿರುವ ಎಟಿಪಿ ಟೂರ್ನಿಯಲ್ಲಿ ರೋಜರ್ ಫೆಡರರ್ ಸೆಮಿೈನಲ್ ತಲುಪಿದರೆ, ಮತ್ತೆ ವಿಶ್ವದ ನಂ.1 ಸ್ಥಾನವನ್ನು ಅಲಂಕರಿಸಲಿದ್ದಾರೆ. ಸದ್ಯ ಸ್ಪೇನ್‌ನ ದಿಗ್ಗಜ ಹಾಗೂ ಫೆಡರರ್ ಅವರ ದೀರ್ಘಕಾಲದ ಎದುರಾಳಿ ರಾಫೆಲ್ ನಡಾಲ್ ಅಗ್ರಸ್ಥಾನದಲ್ಲಿದ್ದರೆ, ರೋಜರ್ 2ನೇ ಸ್ಥಾನದಲ್ಲಿದ್ದಾರೆ. ನಡಾಲ್‌ಗಿಂತ ಫೆಡರರ್ ಸದ್ಯ 155 ಅಂಕಗಳ ಹಿನ್ನಡೆಯಲ್ಲಿದ್ದಾರೆ.
36 ವರ್ಷದ ರೋಜರ್ ಇತ್ತೀಚೆಗಷ್ಟೇ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಯಲ್ಲಿ 6ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ವಿಶ್ವದಾಖಲೆಯ 20ನೇ ಗ್ರ್ಯಾನ್‌ಸ್ಲ್ಯಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದರು.