Friday, September 22, 2023

18ನೇ ಟೆಸ್ಟ್ ಶತಕದೊಂದಿಗೆ ದಾಖಲೆ ಬರೆದ ಕೇನ್ ವಿಲಿಯಮ್ಸನ್

ಆಕ್ಲೆಂಡ್: ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ವೃತ್ತಿಜೀವನದಲ್‌ಲಿ 18ನೇ ಟೆಸ್ಟ್ ಶತಕ ಬಾರಿಸಿದ್ದಾರೆ.

PC: Twitter/BLACKCAPS

ಇಂಗ್ಲೆಂಡ್ ವಿರುದ್ಧ ಈಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ದ್ವಿತೀಯ ದಿನ ವಿಲಿಯಮ್ಸನ್ ಶತಕ ಗಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ಶತಕಗಳನ್ನು ದಾಖಲಿಸಿದ ಆಟಗಾರನೆಂಬ ದಾಖಲೆ ಬರೆದರು. ಮಾಜಿ ನಾಯಕರುಗಳಾದ ಮಾರ್ಟಿನ್ ಕ್ರೋವ್ ಮತ್ತು ರಾಸ್ ಟೇಲರ್ ತಲಾ 17 ಟೆಸ್ಟ್ ಶತಕಗಳನ್ನು ಗಳಿಸಿದ್ದರು. ಆ ದಾಖಲೆಯನ್ನು ವಿಲಿಯಮ್ಸನ್ ಇದೀಗ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.
ವಿಲಿಯಮ್ಸನ್ ಅವರ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ದ್ವಿತೀಯ ದಿನದಾಟದ ಅಂತ್ಯಕ್ಕೆ 92.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಮೊದಲ ದಿನ ಕೇವಲ 58 ರನ್‌ಗಳಿಗೆ ಆಲೌಟಾಗಿದ್ದ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಇದೀಗ ಒಟ್ಟಾರೆ 171 ರನ್‌ಗಳ ಮುನ್ನಡೆಯಲ್ಲಿದೆ.
2ನೇ ದಿನದ ಬಹುಪಾಲು ಆಟ ಮಳೆಗೆ ಆಹುತಿಯಾಗಿ, ಕೇವಲ 23.1 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು.

Related Articles