Saturday, July 27, 2024

ಹಿಟ್‌ಮ್ಯಾನ್‌ಗೆ ಸಿನ್ಹಳೀಸ್ ಭಾಷೆ ಕಲಿಸಿದ ಲಂಕಾ ಕ್ರಿಕೆಟ್ ಫ್ಯಾನ್ಸ್!

ಬೆಂಗಳೂರು : ಟೀಮ್ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡುವುದನ್ನು ನೀವು ನೋಡಿದ್ದೀರಿ, ಕೇಳಿದ್ದೀರಿ. ಆದರೆ ರೋಹಿತ್ ಯಾವತ್ತಾದರೂ ಶ್ರೀಲಂಕಾದ ಸಿನ್ಹಳೀಸ್ ಭಾಷೆಯಲ್ಲಿ ಮಾತನಾಡುವುದನ್ನು ನೋಡಿದ್ದೀರಾ?.

PC: BCCI

ಹೌದು. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ನ್ನಡೆಸುತ್ತಿರುವ ರೋಹಿತ್ ಶರ್ಮಾ ಈಗ ದ್ವೀಪರಾಷ್ಟ್ರದ ಭಾಷೆಯನ್ನೂ ಕಲಿತಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡದ ಅಪ್ಪಟ ಅಭಿಮಾನಿಗಳಾದ ನಿಲಾಮ್ ಮತ್ತು ಗಯಾನ್ ಅವರಿಂದ ರೋಹಿತ್ ಶರ್ಮಾ ಸಿನ್ಹಳ ಭಾಷೆ ಕಲಿತಿದ್ದಾರೆ. ರೋಹಿತ್ ಸಿನ್ಹಳ ಭಾಷೆ ಕಲಿಯಲು ಏನೆಲ್ಲಾ ತುಂಬಾ ಸರ್ಕಸ್ ಮಾಡಿದ್ದಾರೆ.

ರೋಹಿತ್ ಶರ್ಮಾ, ನಿಲಾಮ್ ಮತ್ತು ಗಯಾನ್ ನಡುವಿನ ಸಂಭಾಷಣೆಯ ಸಣ್ಣ ಝಲಕ್ ಇಲ್ಲಿದೆ.

ರೋಹಿತ್ ಶರ್ಮಾ : ಸಿನ್ಹಳ ಭಾಷೆಯಲ್ಲಿ ಹಲೋ, ಹೇಗಿದ್ದೀರಿ ಎಂದು ಹೇಗೆ ಹೇಳುತ್ತೀರಿ?
ನಿಲಾಮ್- ಕೊಹಮದ
ರೋಹಿತ್ ಶರ್ಮಾ : ಕೊಹಮದ?
ನಿಲಾಮ್- ಹೊಂದಾಯ್ (ನಾನು ಚೆನ್ನಾಗಿದ್ದೇನೆ)
ರೋಹಿತ್ ಶರ್ಮಾ : ಹಾಯ್ ನಾನು ರೋಹಿತ್ ಶರ್ಮಾ ಎಂಬುದನ್ನು ಹೇಗೆ ಹೇಳಬೇಕು?
ಗಯಾನ್ : ಮಗೇ ನಾಮ ರೋಹಿತ್ ಶರ್ಮಾ
ರೋಹಿತ್ ಶರ್ಮಾ : ಭಾರತ ತಂಡ ನಿಮ್ಮ ಬೆಂಬಲವನ್ನು ಪ್ರೀತಿಸುತ್ತದೆ ಎಂಬುದನ್ನು ಹೇಗೆ ಹೇಳಬೇಕು?
ಗಯಾನ್ : ಇಂಡಿಯಾ ಖಂಡಯೆಮ ಆದರೆ ಕರ್ನವ ಓವಲಂಗೆ ಸಪೋರ್ಟ್ ಇಕ್ಕಟ.

ರೋಹಿತ್ ಶರ್ಮಾ ಸಿನ್ಹಳ ಭಾಷೆ ಕಲಿಯಲು ಮಾಡಿದ ಸರ್ಕಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ…

http://www.bcci.tv/videos/id/6220/rohit-takes-sinhala-lessons-from-locals

Related Articles