Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಹರಿಣಗಳ ನಾಡಿನಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾಗೆ ಏನಾಗಿದೆ? 

ದಿ ಸ್ಪೋರ್ಟ್ಸ್ ಬ್ಯೂರೊ
ಬೆಂಗಳೂರು: ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ದ್ವಿಶತಕಗಳನ್ನು ಸಿಡಿಸಿ ವಿಶ್ವದಾಖಲೆ ನಿರ್ಮಿಸಿರುವ ಟೀಮ್ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಮಾತ್ರ ಮುಗ್ಗರಿಸುತ್ತಿದ್ದಾರೆ.
PC: Twitter/Rohit Sharma
ಹರಿಣಗಳ ನಾಡಿನಲ್ಲಿ ಆಡಿರುವ ಏಕದಿನ ಪಂದ್ಯಗಳಲ್ಲಿ ಮುಂಬೈಕರ್ ರೋಹಿತ್ ಶರ್ಮಾ ಇದುವರೆಗೂ ಬ್ಯಾಟ್ ಝಳಪಿಸುವಲ್ಲಿ ವಿಫಲಗೊಂಡಿದ್ದಾರೆ. ಇದಕ್ಕೆ ಸಾಕ್ಷಿ ಅವರು ದಕ್ಷಿಣ ಆಫ್ರಿಕಾದಲ್ಲಿ ಹೊಂದಿರುವ ಅಂಕಿ ಅಂಶ.
ಟೀಮ್ ಇಂಡಿಯಾದ ಸ್ಟಾರ್ ಓಪನರ್ ಆಗಿರುವ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ 10 ಏಕದಿನ ಪಂದ್ಯಗಳನ್ನಾಡಿದ್ದು, 13.44ರ ಸರಾಸರಿಯಲ್ಲಿ ಕೇವಲ 121 ರನ್ ಗಳಿಸಿದ್ದಾರೆ. 23 ರನ್ ಪಂದ್ಯವೊಂದರಲ್ಲಿ ಅವರ ಗರಿಷ್ಠ ಮೊತ್ತವಾಗಿದೆ.
ಏಕದಿನ ಕ್ರಿಕೆಟ್ ಆಡಿದ ಎಲ್ಲಾ ರಾಷ್ಟ್ರಗಳಿಗೆ ಹೋಲಿಸಿದರೆ ದಕ್ಷಿಣ ಆಫ್ರಿಕಾದಲ್ಲಿ ರೋಹಿತ್ ದಯನೀಯ ವೈಫಲ್ಯ ಎದುರಿಸಿದ್ದಾರೆ. ಪ್ರಸಕ್ತ ನಡೆಯುತ್ತಿರುವ 6 ಪಂದ್ಯಗಳ ಏಕದಿನ ಸರಣಿ ಮೊದಲ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಕ್ರಮವಾಗಿ 20 ರನ್ ಹಾಗೂ 15 ರನ್ ಗಳಿಸಿದ್ದಾರೆ. ಬುಧವಾರ ಸರಣಿಯ 3ನೇ ಪಂದ್ಯ ನಡೆಯಲಿದ್ದು, ರೋಹಿತ್ ಶರ್ಮಾ ಫಾರ್ಮ್ ಕಂಡುಕೊಳ್ಳಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ರೋಹಿತ್ ಶರ್ಮಾ ಏಕದಿನ ಸಾಧನೆ
ಪಂದ್ಯ: 10
ರನ್: 121
ಸರಾಸರಿ: 13.44
ಗರಿಷ್ಠ: 23
ವಿವಿಧ ರಾಷ್ಟ್ರಗಳಲ್ಲಿ ರೋಹಿತ್ ಏಕದಿನ ಸಾಧನೆ
ರಾಷ್ಟ್ರ            ಪಂದ್ಯ      ರನ್      ಸರಾಸರಿ      ಗರಿಷ್ಠ
ಆಸ್ಟ್ರೇಲಿಯಾ    16        805     57.50     171*
ಬಾಂಗ್ಲಾದೇಶ    06       143      23.83      63
ಇಂಗ್ಲೆಂಡ್        03        61       30.50      52
ನ್ಯೂಜಿಲೆಂಡ್     07      188      37.60      79
ಶ್ರೀಲಂಕಾ       23       557      27.85     124*
ವೆಸ್ಟ್ ಇಂಡೀಸ್ 11       378      54.00      86*
ಜಿಂಬಾಬ್ವೆ       06       226      45.20     114

administrator

Leave a Reply