ಶಮಿ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ ಪತ್ನಿ; ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದ ಶಮಿ!

0
361
PC: Twitter/Mohammedshami
ಕೋಲ್ಕತಾ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವಿರುದ್ಧ ಪತ್ನಿ ಹಸೀನ್ ಜಹಾನ್ ಕೋಲ್ಕತಾದಲ್ಲಿ ಕೇಸ್ ದಾಖಲಿಸಿದ್ದಾರೆ.
PC: Twitter/Mohammedshami
ಕೊಲೆ ಯತ್ನ, ಹಿಂಸೆ, ಬೆದರಿಕೆ ಕೇಸ್‌ಗಳು ಶಮಿ ವಿರುದ್ಧ ದಾಖಲಾಗಿದ್ದು, ಶಮಿ ಅವರ ಸಹೋದರನ ವಿರುದ್ಧ ಹಸೀನ್ ಅತ್ಯಾಚಾರದ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಹಸೀನ್, ‘‘ಕಳೆದ ವರ್ಷ ಉತ್ತರ ಪ್ರದೇಶದಲ್ಲಿರುವ ನನ್ನ ಅತ್ತೆಯ ಮನೆಗೆ ಹೋಗಿದ್ದೆ. ಆಗ ಗಂಡನ ಹಿರಿಯ ಸಹೋದರ ಹಸೀಬ್ ಅಹ್ಮದ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ,’’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪತ್ನಿಯ ಆರೋಪಕ್ಕೆ ಶಮಿ ತಿರುಗೇಟು ನೀಡಿದ್ದು, ‘‘ಅವಳು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ. ನನ್ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತು ಪಡಿಸಬೇಕು. ಇಡೀ ಪ್ರಕರಣವೇ ಗೊಂದಲಮಯವಾಗಿದೆ. ಆಕೆಯ ವರ್ತನೆಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಯಾಗಿದ್ದು, ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾಳೆ. ನನಗನ್ನಿಸುವ ಪ್ರಕಾರ ಅವಳು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾಳೆ. ಅಥವಾ ನನ್ನ ಕ್ರಿಕೆಟ್ ಕರಿಯರ್ ಅನ್ನು ನಾಶ ಮಾಡುವ ಗೇಮ್ ಪ್ಲಾನ್ ಆಕೆಯದ್ದಾಗಿರಬಹುದು’’ ಎಂದು ಹೇಳಿದ್ದಾರೆ