ಶಮಿಗೆ ಆಕ್ಸಿಡೆಂಟ್, ಹಸೀನ್ ಜಹಾನ್‌ಗೆ ಮರುಕ.. ಇದು ಶಮಿ ಪತ್ನಿಯ ಹೊಸ ನಾಟಕ!

0
323
PC: Facebook/Hasin Jahan

ಕೋಲ್ಕತಾ: ಪತ್ನಿಯಿಂದಲೇ ಕೊಲೆ ಯತ್ನ, ದೌರ್ಜನ್ಯ, ಕಿರುಕುಳ, ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಗುರಿಯಾಗಿ ಜರ್ಝರಿತರಾಗಿದ್ದ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಇದೀಗ ಡೆಹ್ರಾಡೂನ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

PC: Facebook/Hasin Jahan

ಪತಿಯ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ ನಂತರ ಶಮಿ ಪತ್ನಿ ಹಸೀನ್ ಜಹಾನ್ ಈಗ ಹೊಸ ನಾಟಕ ಶುರು ಮಾಡಿದ್ದಾಳೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪತಿಯನ್ನು ಮಗಳೊಂದಿಗೆ ಭೇಟಿ ಮಾಡಬೇಕೆಂದು ಅನ್ನಿಸುತ್ತಿದೆ. ಆದರೆ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾಗಿದೆ.
– ಹಸೀನ್ ಜಹಾನ್, ಮೊಹಮ್ಮದ್ ಶಮಿ ಪತ್ನಿ.
‘‘ನನ್ನ ಹೋರಾಟವೇನಿದ್ದರೂ ಶಮಿ ನನಗೆ ಮಾಡಿರುವ ಮೋಸದ ವಿರುದ್ಧ ಮಾತ್ರ. ಆದರೆ ಅವರ ಮೇಲೆ ದೈಹಿಕವಾಗಿ ಗಾಯವಾಗುವುದನ್ನು ನಾನು ಬಯಸುವುದಿಲ್ಲ. ಅವರು ಇನ್ನು ಮುಂದೆ ನನ್ನನ್ನು ಅವರ ಪತ್ನಿಯನ್ನಾಗಿ ಸ್ವೀಕರಿಸದಿರಬಹುದು. ಆದರೆ ಅವರಿಗಾಗಿ ನನ್ನ ಮನಸ್ಸು ಮರುಗುತ್ತಿದೆ. ಅವರನ್ನು ನಾನು ಇನ್ನೂ ಇಷ್ಟ ಪಡುತ್ತೇನೆ. ಏಕೆಂದರೆ ಅವರು ನನ್ನ ಗಂಡ’’ ಎಂದು ಹಸೀನ್ ಜಹಾನ್ ಹೊಸ ವರಸೆ ಆರಂಭಿಸಿದ್ದಾರೆ.