Sunday, April 14, 2024

ವಿಶ್ವ ಯುನಿವರ್ಸಿಟಿ ಶೂಟಿಂಗ್: ಚಂಡೀಗಢದ ಗೌರಿ ಶೆರಾನ್‌ಗೆ ಸ್ವರ್ಣ ಪದಕ

ಬೆಂಗಳೂರು: ಚಂಡೀಗಢದ ಪ್ರತಿಭಾನ್ವಿತ ಶೂಟರ್ ಗೌರಿ ಶೆರಾನ್, ಕೌಲಲಾಂಪುರದಲ್ಲಿ ನಡೆಯುತ್ತಿರುವ 7ನೇ ವಿಶ್ವ ಯುನಿವರ್ಸಿಟಿ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
PC: Twitter/Dept of Sports MYAS
ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ ಗೌರಿ, ಚೀನಾದ ವಾಂಗ್ ಎಕ್ಸ್ ಅವರ ಸವಾಲನ್ನು ಹಿಮ್ಮೆಟ್ಟಿಸಿ ಒಟ್ಟು 37 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕ ಗೆದ್ದರು. ಸೆಕ್ಟರ್ 10ನಲ್ಲಿರುವ ಡಿಎವಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಗೌರಿ, ಜರ್ಮನಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ 25 ಮೀ. ಪಿಸ್ತೂಲ್ ವಿಭಾಗದ ತಂಡ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು.
ಅಲ್ಲದೆ ತಿರುವನಂತಪುರಂನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಗೌರಿ ಶೆರಾನ್ ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ಇದುವರೆಗೆ ಗೌರಿ 30 ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

Related Articles